IPT12 Tournament.News

Sunday, April 21, 2024

29

 

*N1 ಕ್ರಿಕೆಟ್ ಅಕಾಡೆಮಿಯಿಂದ ಮತ್ತೊಂದು ಪ್ರಯತ್ನ…ಸಿನಿಮಾ ಕಲಾವಿದರ ಜೊತೆಗೆ ಮಾಧ್ಯಮದವರು, ಡಾಕ್ಟರ್ಸ್ಸ್, ಲಾಯರ್ಸ್ ಗೂ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ*

 

*ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ.. IPT12 ವಿಶೇಷತೆಗಳು ಗೊತ್ತಾ?*

 

*ನೀವು ಕ್ರಿಕೆಟ್ ಪ್ರೇಮಿನಾ? ಕ್ರಿಕೆಟ್ ಆಡ್ಬೇಕಾ? ಇಲ್ಲಿದೆ ಅವಕಾಶ..ನೀವು N1 ಕ್ರಿಕೆಟ್ ಅಕಾಡೆಮಿಯ IPT12ನಲ್ಲಿ ಭಾಗಿಯಾಗಬಹುದು*

 

ಕಿರುತೆರೆ ಕಲಾವಿದರಿಗಾಗಿ ಟಿಪಿಎಲ್-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರ್ತಿರುವ ಎನ್ 1 ಕ್ರಿಕೆಟ್ ಅಕಾಡೆಮಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು ಟಿಪಿಎಲ್ ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ.ಆರ್ ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ಕೊಟ್ಟಿದ್ದಾರೆ.

 

ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12. ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ಲೋಗೋ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಈ ಕಾರ್ಯಕ್ರಮ ನೆರವೇರಿದೆ.  ನಟಿಯರಾದ ತನಿಷಾ ಕುಪ್ಪಂಡ, ಭವ್ಯ ಗೌಡ, ಎನ್ 1 ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸುನಿಲ್ ಕುಮಾರ್ ಬಿ.ಆರ್. ಟೈಟಲ್ ಸ್ಪಾನ್ಸರ್ ಎವಿಆರ್ ಗ್ರೂಪ್ಸ್ ವತಿಯಿಂದ ಶೈಲೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಳಿಕ ನಟಿ ತನಿಷಾ ಕುಪ್ಪಂಡ ಮಾತನಾಡಿ, N1 ಕ್ರಿಕೆಟ್ ಅಕಾಡೆಮಿ ಮೂಲಕ ಹಲವು ಟೂರ್ನಮೆಂಟ್ ಮಾಡುವ ಮೂಲಕ ಸುನಿಲ್ ಅವರು ಖ್ಯಾತಿ ಪಡೆದಿದ್ದಾರೆ. ನಾನು ಇದಕ್ಕೂ ಮುನ್ನ ಟಿಪಿಎಲ್ ಸೀಸನ್ ಒಂದರಲ್ಲಿ ಟೀಂ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೆ. ಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. IPT12 ಈ ಟೂರ್ನಮೆಂಟ್ ವಿಶೇಷತೆ ಏನೆಂದರೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಇದರಲ್ಲಿ ಭಾಗಿಯಾಗಬಹುದು.  ಎನ್ 1 ಕ್ರಿಕೆಟ್ ಅಕಾಡೆಮಿ ಅಂದರೆ ಹೊಸ ಪ್ರಯತ್ನ. ಈ ಮೂಲಕ ಮಾಧ್ಯಮದವರು, ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರಿಗೆ IPT12 ಏರ್ಪಡಿಸಲಾಗಿದೆ ಎಂದರು.

 

ಟೈಟಲ್ ಸ್ಪಾನ್ಸರ್ ಎವಿಆರ್ ಗ್ರೂಪ್ಸ್ ವತಿಯಿಂದ ಶೈಲೇಶ್ ಅವರು ಮಾತನಾಡಿ, IPT12 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಚೆನ್ನಾಗಿ ಆಡುವ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.  

 

ಎವಿಆರ್ ಗ್ರೂಪ್ಸ್ ವತಿಯಿಂದ ಶೈಲೇಶ್, ಅಭಿಷೇಕ್ ಹಾಗೂ ಪ್ರಸನ್ನ   IPT12  ಕ್ರಿಕೆಟ್ ಟೂರ್ನಮೆಂಟ್ ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಂಡಗಳು, ಸೇರಿದಂತೆ ಮತ್ತಿತರ ಅಪ್ ಡೇಟ್ ನೀಡಲಾಗುತ್ತದೆ.

Copyright@2018 Chitralahari | All Rights Reserved. Photo Journalist K.S. Mokshendra,