Ranganayaka.News

Thursday, February 15, 2024

144

ಎನ್ನ ಮನದರಸಿ ಅಂತಾರೆ ಜಗ್ಗೇಶ್

       ಅನೂಪ್‌ಸೀಳನ್ ಸಂಗೀತ ಮತ್ತು ಧ್ವನಿಯಾಗಿರುವ ‘ಎನ್ನ ಮನದರಸಿ’ ಹಾಡು ‘ರಂಗನಾಯಕ’ ಚಿತ್ರದ್ದಾಗಿದೆ. ನಿರ್ದೇಶಕ ಗುರುಪ್ರಸಾದ್ ಸಾಹಿತ್ಯದಲ್ಲಿ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದಾರೆ. ಇದೇ ಗೀತೆಯ ಲೋಕಾರ್ಪಣೆ ಕಾರ್ಯಕ್ರಮ ಮೊನ್ನೆಯಷ್ಟೇ ನಡೆಯಿತು. ನಾಯಕ ಜಗ್ಗೇಶ್ ಮಾತನಾಡಿ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ. ಆತ ಜಗಮೊಂಡ. ಯಾರ ಮಾತನ್ನು ಕೇಳುವುದಿಲ್ಲ. ಮದವೇರಿದ ಒಂಟಿ ಸಲಗದಂತೆ. ನೋಡುಗರಿಗೆ ಬಾಯಿ ತುಂಬ ನಗು ತರಿಸಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.

      ಫೆಬ್ರವರಿ ೧೦ಕ್ಕೆ ‘ಮಠ’ ಬಿಡುಗಡೆಯಾಗಿ ೧೮ ವರ್ಷ ಪೂರೈಸಿದಂತೆ ಆಗುತ್ತದೆ. ಇಂಥ ಸಂದರ್ಭದಲ್ಲಿ ಈ ಸಿನಿಮಾವು ಬರುತ್ತಿದೆ. ಜೀ ಸ್ಟುಡಿಯೋಸ್ ಬಿಡುಗಡೆಯ ಜವಬ್ದಾರಿಯನ್ನು ಹೊತ್ತುಕೊಂಡಿದೆ. ನನ್ನ ಸಿನಿ ಪಯಣದಲ್ಲಿ ಇದು ದೊಡ್ಡ ಬಜೆಟ್ ಆಗಿದೆ. ನಿಮ್ಮಲ್ಲರ ಸಹಕಾರಬೇಕೆಂದು ಗುರುಪ್ರಸಾದ್ ಕೋರಿಕೊಂಡರು. ರಚಿತಾಮಹಾಲಕ್ಷೀ ನಾಯಕಿ. ನಾಯಕನ ತಾಯಿಯಾಗಿ ಚೈತ್ರಾಕೊಟ್ಟೂರು ಮುಂತಾದವರು ನಟಿಸಿದ್ದಾರೆ. ವಿಖ್ಯಾತ್ ಪ್ರೊಡಕ್ಷನ್ ಅಡಿಯಲ್ಲಿ ವಿಖ್ಯಾತ್ ನಿರ್ಮಾಣ ಮಾಡಿರುವ ಸಿನಿಮಾವು ಮಾರ್ಚ್ ೮ರಂದು ತೆರೆ ಕಾಣುತ್ತಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,