Kreem.Film News

Thursday, February 15, 2024

44

ಕ್ರೀಂ ಟ್ರೇಲರ್ ಬಿಡುಗಡೆ

      ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಕ್ರೀಂ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಅಭಿಷೇಕ್ ಬಸಂತ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಡಿ.ಕೆ.ದೇವೇಂದ್ರ ಬಂಡವಾಳ ಹೂಡಿದ್ದಾರೆ.

      ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಗ್ನಿಶ್ರೀಧರ್ ನನಗೆ ನಟನೆಗಿಂತ ಬರವಣಿಗೆಯಲ್ಲಿ  ಹೆಚ್ಚು ಆಸಕ್ತಿ. ನಿರ್ಮಾಪಕರ ಒತ್ತಾಯದ ಮೇಲೆ ಬಣ್ಣ ಹಚ್ಚಬೇಕಾಯಿತು. ವಿಷಯವನ್ನು ಕೊನೆವರೆಗೂ ಗೌಪ್ಯವಾಗಿಡಬೇಕೆಂದು ಹೇಳಿದ್ದೆ. ಆದರೆ ತುಣುಕುಗಳಲ್ಲಿ ನನ್ನನ್ನು ತೋರಿಸಿಬಿಟ್ಟಿದ್ದಾರೆ ಎಂದರು.

      ಬೀಜಾಕ್ಷರ ಮಂತ್ರಕ್ಕೆ ಶೀರ್ಷಿಕೆಯಿಂದ ಕರೆಯುತ್ತಾರೆ. ಹಣ ಹಾಗೂ ಅಧಿಕಾರಕ್ಕಾಗಿ  ನಡೆಯುವ ಹೆಣ್ಣುಮಕ್ಕಳ ಬಲಿ ಕುರಿತಾಗಿದೆ. ಇಂತಹ ಕೃತ್ಯಗಳು ದೇಶದ ಎಲ್ಲಾ ಕಡೆ ನಡೆಯುತ್ತಿದೆ.  ಬೆಂಗಳೂರಿನ ಕಾಣದ ಗರ್ಭದಲ್ಲಿ ಏನೆಲ್ಲಾ ನಡೆಯುತ್ತದೆ. ಭಾರತದಲ್ಲಿ ಪ್ರತಿ ವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಕಣ್ಮರೆಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು?  ಎನ್ನುವಂತಹ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

      ಇಲ್ಲಿಯವರೆಗೂ ಮಾಡಿರದಂತಹ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಹೆಗಡೆ ನಟನೆಯ ಜತೆಗೆ ಆಕ್ಷನ್ ಮಾಡಿರುವುದು ವಿಶೇಷ. ತಾರಾಗಣದಲ್ಲಿ ರೋಷನ್, ಬಚ್ಚನ್, ಇಮ್ರಾನ್ ಮತ್ತಿತರರು ಅಭಿನಯಿಸಿದ್ದಾರೆ. ಸಂಗೀತ ರೋಹಿತ್, ಕಲೆ ಶಿವಕುಮಾರ್ ಅವರದಾಗಿದೆ. ಮಾರ್ಚ್ ೧ರಂದು ಸಿನಿಮಾವು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,