Evidence.Film News

Tuesday, February 13, 2024

48

 

ಎವಿಡೆನ್ಸ್ ಲಿರಿಕಲ್ ಸಾಂಗ್ ಬಿಡುಗಡೆ

 

    ಇಂಟರಾಗೇಶನ್ ರೂಮ್ ನಲ್ಲಿ ನಡೆಯುವ ಕ್ರೈಂ ಕಂಟೆಂಟ್  ಜೊತೆಗೊಂದು ತ್ರಿಕೋನ‌ ಪ್ರೇಮಕಥೆ ಇಟ್ಟುಕೊಂಡು ಪ್ರವೀಣ ಸಿಪಿ. ಆಕ್ಷನ್ ಕಟ್ ಹೇಳಿರುವ ಚಿತ್ರ ಎವಿಡೆನ್ಸ್. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ’ಅಯ್ಯಯ್ಯೋ ಅರೆಮನಕೆ’ ಎಂಬ ಲಿರಿಕಲ್ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ನಡೆಯಿತು.

ಶ್ರೀಧೃತಿ ಪ್ರೊಡಕ್ಷನ್ಸ್ ಹಾಗೂ ರೋಷಿರಾ ಪ್ರೊಡಕ್ಷನ್ಸ್  ಲಾಂಛನದಲ್ಲಿ  ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್‌ಪ್ರಭು ಕೆ, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಿಸಿರುವ  ಈ ಚಿತ್ರಕ್ಕೆ ಪ್ರವೀಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.   

 

   ನಿರ್ಮಾಪಕ ಸುರೇಂದ್ರ ಶೆಟ್ಟಿ ಮಾತನಾಡಿ ನಾನು ಚಿತ್ರರಂಗಕ್ಕೆ ಹೊಸಬ. ಪ್ರವೀಣ್  ಬರೀ 2 ಪಾತ್ರ ಇಟ್ಟುಕೊಂಡು ಮಾಡಿದ್ದೇನೆ  ಎಂದಾಗ ಇಂಟರೆಸ್ಟಿಂಗ್ ಅನಿಸಿ ಕೈ ಹಾಕಿದೆವು. ನಂತರ ಅದು  ಮಲ್ಟಿಪಲ್ ರೋಲ್ ಆಯ್ತು. ೧೫ ಲಕ್ಷ ಹೋಗಿ ಡಬಲ್ ಆಯ್ತು.  ಚಿತ್ರ ನಿಜಕ್ಕೂ  ತುಂಬಾ ಚೆನ್ನಾಗಿ ಬಂದಿದೆ. ಮುಂದಿನ ತಿಂಗಳು ರಿಲೀಸಾಗುತ್ತಿದೆ ಎಂದರು. ಮತ್ತೊಬ್ಬ ನಿರ್ಮಾಪಕ ರವೀಂದ್ರರಾವ್ ಮಾತನಾಡಿ ಮರ್ಡರ್ ಮಿಸ್ಟ್ರಿ ಜೊತೆಗೆ ಒಳ್ಳೆ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಅತಿಯಾದ ವ್ಯಾಮೋಹ ಏನೆಲ್ಲ ಮಾಡುತ್ತದೆ ಎಂದು ತೋರಿಸಿದ್ದೇವೆ.

  ನಿರ್ದೇಶಕ ಪ್ರವೀಣ ಮಾತನಾಡಿ ನಿರ್ಮಾಪಕರಿಲ್ಲ ಅಂದ್ರೆ ನಾನಿಲ್ಲ, ರೋಬೋ ಗಣೇಶ್, ಮಾನಸ ಜೋಷಿ ಎಲ್ಲರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸೂಸೈಡ್ ಕೇಸ್ ತನಿಖೆ ಮಾಡಲು ಬರುವ ವಿಶೇಷ ತನಿಖಾಧಿಕಾರಿಯಾಗಿ ಮಾನಸ ಜೋಷಿ ನಟಿಸಿದ್ದು, 360 ಡಿಗ್ರಿ ಶಾಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎವಿಡೆನ್ಸ್ ಪದದ ಸುತ್ತ ನಡೆಯುವ ಕಥೆಯಿದು. ಕೋವಿಡ್ ಟೈಂನಲ್ಲಿ ಎರಡೇ ಪಾತ್ರ ಅಂತ ಸ್ಟಾರ್ಟ್ ಮಾಡಿದೆವು. ನಂತರ ಕಮರ್ಷಿಯಲ್ಲಾಗಿರಲೆಂದು ಬೇರೆ  ಪಾತ್ರಗಳನ್ನು ರಿಯಲ್ಲಾಗಿ  ತೋರಿಸಿದ್ದೇವೆ. 10 ಜನ ನಿರ್ಮಾಪಕರು ಕೈ ಜೋಡಿಸಿದ್ದರಿಂದಲೇ ಸಿನಿಮಾ ಆಗಿದೆ. ನಮ್ಮದೇ ಸ್ಪೈಡರ್ ಆಡಿಯೋ ಮೂಲಕ ಹಾಡು ರಿಲೀಸ್ ಮಾಡಿದ್ದೇವೆ ಎಂದರು.

  ನಟ ಆಕರ್ಷ್ ಆದಿತ್ಯ ಮಾತನಾಡಿ ಹತ್ತಕ್ಕೂ ಹೆಚ್ಚು ಸೀರಿಯಲ್ ಮಾಡಿದ್ದು, ಇದು ನನ್ನ ೨ನೇ ಚಿತ್ರ ಎಂದರು. ನಂತರ ಕಾರ್ತೀಕ್ ವರ್ಣೇಕರ್, ರೇಣು ಶಿಕಾರಿ, ಪವನ್ ಸುರೇಶ್, ಶಿವಕುಮಾರ್ ಆರಾಧ್ಯ ತಮ್ಮ‌  ಪಾತ್ರಗಳ ಕುರಿತು ಹೇಳಿಕೊಂಡರು.

ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ‌ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು  ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಈ ಚಿತ್ರದಲ್ಲಿದೆ.

ಜೋಶ್ ಖ್ಯಾತಿಯ ರೋಬೊ ಗಣೇಶನ್  ನಾಯಕನಾಗಿ ನಟಿಸಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದತೆ   ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಶಶಿಧರ ಕೋಟೆ, ಮನಮೋಹನ್ ರೈ ನಟಿಸಿದ್ದಾರೆ.

   ಈ  ಚಿತ್ರದಲ್ಲಿ ೪ ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ ಹಾಗೂ ಕಾರ್ತೀಕ್  ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,