4N6 Film.News

Wednesday, February 21, 2024

145

 

"4 ಎನ್ 6"  ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ

  

 

    ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು  ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ  ಹೊಂದಿರುವ ಚಿತ್ರ 4 ಎನ್ 6. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಫಸ್ಟ್  ಗ್ಲಿಂಪ್ಸ್ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

   ಲವ್ ಮಾಕ್ಟೇಲ್ ಹಾಗೂ ಲವ್ 360  ಖ್ಯಾತಿಯ  ರಚನಾ ಇಂದರ್  ಭವಾನಿಪ್ರಕಾಶ್ ಹಾಗೂ ನವೀನ್ ಕುಮಾರ್,  ಆದ್ಯಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ  "4 ಎನ್ 6" ಚಿತ್ರಕ್ಕೆ  ದರ್ಶನ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ರಚನಾ ಇಂದರ್ ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

   ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ದರ್ಶನ್ ಈ ಹಿಂದೆ ೨ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ನನ್ನ ಪ್ರಥಮ ನಿರ್ದೇಶನದ ಚಿತ್ರ ಇದಾಗಿದ್ದು ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ಇಂಪಾರ್ಟೆಂಟ್ ಆಗಿರುತ್ತದೆ. ೪ ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ  ಫೋರೆನ್ಸಿಕ್ ತಜ್ಞರ ಸಲಹೆ ತೆಗೆದುಕೊಂಡೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು  ಈಗಾಗಲೇ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಹೇಳಿದರು.

ನಂತರ ನಿರ್ಮಾಪಕಿ ಸಾಯಿಪ್ರೀತಿ ಮಾತನಾಡಿ ತುಂಬಾ ಟ್ಯಾಲೆಂಟ್ ಇರೋ ತಂಡವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಏಪ್ರಿಲ್ ಗೆ ರಿಲೀಸ್ ಮಾಡೋ ಪ್ಲಾನಿದೆ ಎಂದರು. ಕಾರ್ಯಕಾರಿ ನಿರ್ಮಾಪಕರಾದ ಕರಣ್ ಸಿಂಗ್  ಮಾತನಾಡಿ ದರ್ಶನ್ ಶಾರ್ಟ್ ಫಿಲಂ ಮಾಡುವಾಗ ನನಗೆ ಪರಿಚಯವಾದರು. ಅವರಲ್ಲಿ ಓಳ್ಳೊಳ್ಳೆ ಕಥೆಗಳಿದ್ದವು. ಕೋವಿಡ್ ನಂತರ ಜನ ಸಿನಿಮಾನೋಡುವ  ದೃಷ್ಟಿಕೋನ ಬದಲಾಗಿದೆ.  ಕ್ರೈಂ‌ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಅಂತ ಈ ಕಾನ್ಸೆಪ್ಟ್ ಕೈಗೆತ್ತಿಕೊಂಡೆವು ಎಂದರು.

    

ನಾಯಕಿ ರಚನಾ ಇಂದರ್ ಮಾತನಾಡಿ ಮೊದಲಬಾರಿಗೆ ಇಂಥ ಪಾತ್ರ ಮಾಡಿದ್ದೇನೆ.  ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮಾತಿಲ್ಲ. ಮುಖದಲ್ಲೇ

ಎಕ್ಸ್ ಪ್ರೆಶನ್ಸ್ ತೋರಿಸಬೇಕಿತ್ತು ಎಂದರು.

ಭವಾನಿ ಪ್ರಕಾಶ್ ಮಾತನಾಡಿ ಬೇರೊಬ್ಬರು ಮಾಡಬೇಕಿದ್ದ ಪಾತ್ರ ನನಗೆ ಬಂತು. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು, ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಸ್ಲಂನಲ್ಲೂ ಓಡಾಡಿದ್ದೇವೆ ಎಂದರು. ನಾಯಕ ನವೀನ್ ಕುಮಾರ್ ಮಾತನಾಡಿ ನಾನು ಚಿತ್ರರಂಗಕ್ಕೆ ಹೊಸಬ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೇನೆ.

ಎಲ್ಲಾ  ಪಾತ್ರಗಳು ತುಂಬಾ ಪ್ರಾಮಿಸಿಂಗ್ ಆಗಿವೆ ಎಂದರು.

ಇನ್ನು‌ ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್  ಇತರರು  ಚಿತ್ರದಲ್ಲಿ‌ ಅಭಿನಯಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,