ಪ್ರಕಾಶ್ರಾಜ್, ಡಾಲಿ ಧನಂಜಯ್ ಮೆಚ್ಚಿದ ಫೋಟೋ
ಕಳೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಪ್ರಶಂಸೆಗೆ ಒಳಪಟ್ಟಿದ್ದ ‘ಫೋಟೋ’ ಚಿತ್ರವು ಈಗ ಸದ್ದು ಮಾಡುತ್ತಿದೆ. ಪ್ರಚಾರದ ಸಲುವಾಗಿ ಪ್ರಕಾಶ್‌ರೈ ಒಡೆತನದ ಶ್ರೀರಂಗಪಟ್ಟಣದಲ್ಲಿರುವ ನಿರ್ದಿಗಂತ ಆಡಿಟೋರಿಯಂದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಪ್ರಕಾಶ್‌ರೈ ಮಾತನಾಡಿ ನಮ್ಮ ದೇಹಕ್ಕೆ ಆದ ಗಾಯಗಳು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಸುಮ್ಮನಿದ್ದಷ್ಟು ಜಾಸ್ತಿಯಾಗುತ್ತದೆ. ಉತ್ಸವ್‌ಗೆ ಸಿನಿಮಾ ತೋರಿಸುವ ಆಸೆ ಇತ್ತು. ಬೇರೆ ಕಾರಣಗಳಿಂದ ಬ್ಯುಸಿ ಇದ್ದೆ. ಚಿತ್ರ ನೋಡಿದ ಮೇಲೆ ದುಖ: ಬಂದು ೨೦ ನಿಮಿಷ ಮಾತನಾಡಲು ಆಗಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ನೋಡಿದ ನೈಜ ಸ್ಥಿತಿಯನ್ನು ತೆರೆ ಮೇಲೆ ತಂದಿದ್ದಾರೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದರು.
ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು ಒಳ್ಳೆ ಚಿತ್ರಗಳನ್ನು ಬೇರೆ ಬೇರೆ ರೀತಿಯಲ್ಲಿ ಜನಗಳಿಗೆ ತೋರಿಸ್ರುತಿದ್ದಾರೆ. ಅದು ತುಂಬ ಖುಷಿ ವಿಚಾರ. ಆ ರೀತಿಯ ಸಿನಿಮಾಗಳಿಗೆ ಒಬ್ಬೋಬ್ಬರು ಜೊತೆಯಾಗುತ್ತಿದ್ದಾರೆ. ಫೋಟೋ ಕಾಡುವ ಸಿನಿಮಾ ಅಂತ ಡಾಲಿ ಧನಂಜಯ ಹೇಳಿದರು.
ನಿರ್ದೇಶಕ ಉತ್ಸವ್ ಗೋನವಾರ ಸಿನಿಮಾ ಹುಟ್ಟಿದ್ದನ್ನು ನೆನಪು ಮಾಡಿಕೊಂಡರು. ಮಡಕೇರಿಗೆ ಹೋದ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಬಂದಂತ ಲೇಖನವನ್ನು ಸಾಕ್ಷಚಿತ್ರ ಮಾಡಬೇಕು ಅನಿಸಿತು. ಬರೆಯಲು ಶುರು ಮಾಡಿದೆ. ಆ ನಂತರ ಅದು ಸಿನಿಮಾರೂಪ ಪಡೆದುಕೊಂಡು ಇಲ್ಲಿಯತನಕ ತಂದು ನಿಲ್ಲಿಸಿದೆ ಅಂತಾರೆ.
ಮಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ತಾರಾಗಣದಲ್ಲಿ ಮಹಾದೇವಹಡಪದ್, ಸಂಧ್ಯಾಅರಕೆರೆ, ಜಹಾಂಗೀರ್, ವೀರೇಶ್‌ಗೊನ್ವಾರ್ ನಟಿಸಿದ್ದಾರೆ. ರವಿಹಿರೇಮಠ್ ಹಿನ್ನಲೆ ಸಂಗೀತ, ದಿನೇಶ್‌ದಿವಾಕರನ್ ಛಾಯಾಗ್ರಹಣ, ಶಿವರಾಜ್‌ಮೆಹೂ ಸಂಕಲನವಿದೆ. ಕಾರ್ಯಕ್ರಮದಲ್ಲಿ ಲೂಸಿಯಾ ಪವನ್‌ಕುಮಾರ್, ಹಿರಿಯ ಪತ್ರಕರರ್ತ ಜೋಗಿ ಮುಂತಾದವರು ಉಪಸ್ಥಿತಿ ಇತ್ತು. ಅಂದ ಹಾಗೆ ಚಿತ್ರವು ಮಾರ್ಚ್ ೧೫ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.