ಕೆಡಿ ಹೆಚ್ಚಿನ ಮೊತ್ತಕ್ಕೆ ಆಡಿಯೋ ಸೇಲ್
‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು ೧೭.೭೦ ಕೋಟಿಗೆ ಖರೀದಿ ಮಾಡಿರುವುದು ಸುದ್ದಿಯಾಗಿದೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ತಂಡವು ಮಾಹಿತಿಯನ್ನು ಹಂಚಿಕೊಂಡಿತು. ರಚನೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಪ್ರೇಮ್ ಮಾತನಾಡಿ ನಾವು ಗುಣಮಟ್ಟದಲ್ಲಿ ಎಂದೂ ರಾಜಿಯಾಗಿಲ್ಲ. ಮೊದಲಬಾರಿ ೨೫೬ ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ. ಈ ಹಿಂದೆ ಶಾರುಕ್‌ಖಾನ್‌ರವರ ‘ಜವಾನ್’ ಚಿತ್ರಕ್ಕೆ ೧೮೦ ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು. ಅದರಿಂದ ಭಾರತೀಯ ಚಿತ್ರರಂಗದಲ್ಲಿ ಮೊದಲು ನಮ್ಮದು ದಾಖಲೆ ಆಗಿದೆ. ಇಲ್ಲಿಯವರೆಗೂ ೧೫೦ ದಿನಗಳ ಚಿತ್ರೀಕರಣ ನಡೆಸಲಾಗಿದೆ. ಇನ್ನೊಂದು ವಾರ ಮಾತಿನ ಭಾಗ ಹಾಗೂ ಮೂರು ಹಾಡುಗಳನ್ನು ಶೂಟ್ ಮಾಡಿದರೆ ಕುಂಬಳಕಾಯಿ ಒಡೆಯಲಾಗುವುದು. ರೆಟ್ರೋ ಕಾಲದ ಕಥೆಯಲ್ಲಿ ನೈಜ ಘಟನೆಯನ್ನು ಹೊಂದಿದೆ. ಆರು ಹಾಡುಗಳಿಗೆ ಆರು ನೃತ್ಯ ಸಂಯೋಜಕರು ಕೆಲಸ ಮಾಡುತ್ತಿದ್ದಾರೆ. ವರಮಹಾಲಕ್ಷಿ ಹಬ್ಬದಂದು ಮುಂಬೈನಲ್ಲಿ ಟೀಸರ್, ಹೈದರಬಾದ್‌ನಲ್ಲಿ ೨೪ರಂದು ಫಸ್ಟ್ ಸಾಂಗ್ ಬಿಡುಗಡೆ. ಡಿಸೆಂಬರ್‌ಗೆ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆ ಎಂದರು.
ನನ್ನ ವಿಐಪಿಗಳಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ಧ್ರುವಸರ್ಜಾ ಚಿತ್ರಕ್ಕೆ ಸಹಿ ಹಾಕಿದಾಗ, ನಿರ್ದೇಶನವನ್ನು ಯಾರ ಕೈಲಿ ಮಾಡಿಸಬೇಕೆಂಬ ಪ್ರಶ್ನೆ ಬಂದಾಗ ನನಗೆ ಬಂದದ್ದು ಪ್ರೇಮ್ ಹೆಸರು. ಸೆಟ್‌ಗೆ ಹೋದಾಗ ಅವರು ಟೀಚರ್ ತರಹ ಇರ್ತಾರೆ. ಆಕ್ಟ್ ಮಾಡಿ ತೋರಿಸ್ತಾರೆ. ೧೯೭೦-೭೫ರಂದು ಬೆಂಗಳೂರಿನಲ್ಲಿ ನಡೆಯುವ ಕಥೆ ಆಗಿದೆ. ಎಲ್ಲಾ ಕಡೆಗಳಿಂದಲೂ ಸಕರಾತ್ಮಕ ಪ್ರತಿಕ್ರಿಯೆ ಬರುತ್ತಿದೆ. ನಾನು ಕೂಡ ಎಕ್ಸೈಟ್ ಆಗಿದ್ದೇನೆ ಎಂದರು.
ಕೆವಿಎನ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ರೀಷ್ಮಾನಾಣಯ್ಯ ನಾಯಕಿ. ತಾರಾಗಣದಲ್ಲಿ ರವಿಚಂದ್ರನ್, ರಮೇಶ್‌ಅರವಿಂದ್, ಸಂಜಯ್‌ದತ್, ಶಿಲ್ಪಾಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸಂಗೀತ ಅರ್ಜುನ್‌ಜನ್ಯಾ, ಛಾಯಾಗ್ರಹಣ ವಿಲಿಯಂಡೇವಿಡ್ ಅವರದಾಗಿದೆ.