Rangasthala.News

Tuesday, April 30, 2024

66

 

ಯುವ ಪ್ರತಿಭೆಗಳ ’ ರಂಗಸ್ಥಳ’ ಚಿತ್ರದ ಟೈಟಲ್ ಲಾಂಚ್.

 

ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಎಂಟ್ರಿ.

 

 

 

ಚಂದನವನಕ್ಕೆ ಯುವಕರ ಬಳಗವು ಪೂರ್ವ ತಯಾರಿಯೊಂದಿಗೆ ಒಂದು ಕಂಪನಿಯ ಮಾದರಿಯಲ್ಲಿ ತಂಡವನ್ನು ಕಟ್ಟಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಜೀವನವೇ ಒಂದು ರಂಗ ಪ್ರಪಂಚ ಅಲ್ಲಿ ಎಲ್ಲಾ ರೀತಿಯ ಏಳು, ಬೀಳುಗಳು, ಪಾತ್ರಧಾರಿಗಳು ಕಣ್ಣ ಮುಂದೆ ಹಾದು ಹೋಗುತ್ತಾರೆ. ಅಂತಹದ್ದೇ ಒಂದು ವಿಭಿನ್ನ  ಕಥೆಯ ಮೂಲಕ ಅಘೋರ್ ಮೋಶನ್ ಪಿಚ್ಚರ್ಸ್ ಅಡಿಯಲ್ಲಿ  ಡಾ. ರೇವಣ್ಣ  ನಿರ್ಮಾಣದ  ’ರಂಗಸ್ಥಳ ’ ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಬಿಡುಗಡೆ ಮಾಡಲಾಯಿತು.ಈ ಒಂದು ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡ ಮಂಜುನಾಥ್ , ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಬಹುತೇಕ ಯುವ ಪ್ರತಿಭೆಗಳ ತಂಡ ಸೇರಿಕೊಂಡು ಸಿದ್ಧಪಡಿಸುತ್ತಿರುವ ಈ ಚಿತ್ರದ ಪತ್ರಿಕಾಗೋಷ್ಠಿಯನ್ನ MMB ಲೆಗೆಸಿ ಆಯೋಜಿಸಲಾಗಿದ್ದು , ಮಾಧ್ಯಮದವರ ಮುಂದೆ ಚಿತ್ರ ತಂಡ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾದರು.

 

ಈ ಚಿತ್ರದ ನಿರ್ಮಾಪಕ ಡಾ. ರೇವಣ್ಣ ಮಾತನಾಡುತ್ತಾ ನಾನು ಮೂಲತ ರೈತ ಕುಟುಂಬದಿಂದ ಬಂದವನು, ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನ ಇಲ್ಲದಿದ್ದರೂ ಮನೆಯವರ ಒತ್ತಾಯದ ಮೇರೆಗೆ ಮುಗಿಸಿ ಡಿಗ್ರಿ ಮುಗಿಸಿಕೊಂಡೆ. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಎತ್ತರವನ್ನು ಗಮನಿಸಿದಂತಹ ಹಿರಿಯರೊಬ್ಬರು ನನಗೆ ವಾಲಿಬಾಲ್ ತಂಡಕ್ಕೆ ಸೇರಿಸಿದರು. ನಂತರ ನಾನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೂ ಆಡಿ ಪ್ರಶಸ್ತಿಯನ್ನು ಪಡೆದೆ. ನನ್ನ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಯು ಸಿಕ್ಕಿತು. ಸಿನಿಮಾ ಬಗ್ಗೆ ನಮಗೇನು ಹೆಚ್ಚು ಒಲವಿಲ್ಲ ಆದರೆ ನನ್ನ ಇಬ್ಬರು ಮಕ್ಕಳಾದ ವಿನೋದ್ ಕುಮಾರ್ ಜೈ ಕೀರ್ತಿ ಹಾಗೂ ವಿನಯ್ ಕುಮಾರ್ ಜೈ ಕೀರ್ತಿ ಅಮೇರಿಕಾದಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸಿದರು , ಅದು ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಅವರ ಜೊತೆ ನಾನು ನನ್ನ ಮಡಿದಿ ಕೂಡ ಈಗ ಕೈಜೋಡಿಸಿದ್ದೇವೆ. ಈ ಒಂದು ಚಿತ್ರವನ್ನ ಸಾಫ್ಟ್ವೇರ್ ಕಂಪನಿಯ ಕಾರ್ಯ ವೈಖರಿಯಂತೆ ಬಹಳ ಅಚ್ಚುಕಟ್ಟಾಗಿ ಆರಂಭಿಸಿದ್ದೇವೆ, ಕಲಾವಿದರು , ತಂತ್ರಜ್ಞಾನರ ಆಯ್ಕೆಯ ಜೊತೆಗೆ ವಿಶೇಷವಾಗಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ.ಜಯನ್ ಆಯ್ಕೆಯನ್ನು ನನ್ನ ಸುಪುತ್ರ ವಿನೋದ್ ಫೈನಲ್ ಮಾಡಿದ್ರು. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ತಂಡ ಅಚ್ಚುಕಟ್ಟಾಗಿ ಕೆಲಸ ಮಾಡ್ತಿದೆ. ನಮ್ಮಿಂದ 150 ಕುಟುಂಬಗಳಿಗೆ ಅನುಕೂಲವಾದರೆ ಸಾಕು , ನಮಗೆ ಲಾಭ ಬೇಡ ಹಾಕಿದ ಹಣ ಬಂದರೆ ಸಾಕು , ನಮ್ಮ ಸಂಸ್ಥೆಯಿಂದ ಹೊಸಬರಿಗೆ ಮುಂದೆಯೂ ಅವಕಾಶ ಕೊಡುವ ಉದ್ದೇಶವಿದೆ. ಹಾಗೆಯೇ ವಾಲಿಬಾಲ್ ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆ ಎಂದು ಹೇಳಿಕೊಂಡರು.

ಇನ್ನು ಈ  ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್  ಪ್ರಥಮ ಪ್ರಯತ್ನ ಇದಾಗಿದೆ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್ , ಎಲ್. ವಿ. ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರು ಚಿತ್ರ , ಹ್ಯಾಡ್ ಫಿಲಂ ನಲ್ಲಿ ವರ್ಕ್  ಮಾಡುವ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೊಂದು ಗ್ರಾಮೀಣ ಸೊಗಡಿನ  ಕಥೆಯಾಗಿದ್ದು , ನಮ್ಮ ಪುತ್ತೂರು , ಸುಳ್ಯ , ಭಾಗದ ಭಾಷೆ , ಸೊಗಡು , ಆಚಾರ , ವಿಚಾರ , ಕಲೆ, ಬದುಕಿನ ಸುತ್ತ ನೈಜಕ್ಕೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ , ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳ ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ , ಯಾವ ರೀತಿ , ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ. ಈ ರಂಗ ಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ  ಈ ಚಿತ್ರದಲ್ಲಿ ನಾಯಕನ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು , ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು , 40% ಕೆಲಸ ಮುಗಿದಿದೆ. ಇಂದು ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಂಡರು.

 

 ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು , ಸುಮಾರು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರ್ಕಿ ಚಿತ್ರದ ನಂತರ  ಈ ’ರಂಗಸ್ಥಳ’  ವಿಲೋಕ್ ಚಿತ್ರ ಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾ ವಾಗಲಿದೆಯಂತೆ. ಈ ಚಿತ್ರದಲ್ಲಿ ಒಬ್ಬ ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು , ಇದಕ್ಕಾಗಿ ಮೂರು ತಿಂಗಳ ತರಬೇತಿಯನ್ನು ಕೂಡ ಪಡೆದಿದ್ದಾರಂತೆ. ಹಾಗೆಯೇ ಭಾಷೆಯ ವಿಚಾರವಾಗಿಯೂ ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು , ನಿರ್ದೇಶಕರು ಹೇಳಿದಂತೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ.  ನಿರ್ಮಾಪಕ ಡಾ. ರೇವಣ್ಣ  ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ.  ನಾವು ಮೊದಲು ಸಣ್ಣ ಬಜೆಟ್ ಪ್ಲಾನ್ ಮಾಡಿಕೊಂಡಿದ್ದೇವು, ಆದರೆ ನಿರ್ಮಾಪಕರ ಪುತ್ರ ವಿನೋದ್ ಸಹಕಾರದೊಂದಿಗೆ ಈ ಚಿತ್ರ ಬೇರೆದೇ ರೂಪ ಪಡೆಯುತ್ತಿದೆ. ನಮ್ಮಂತ  ಪ್ರತಿಭೆಗಳನ್ನು ಪ್ರೋತ್ಸಾಹಿಸಿ , ಬೆಳೆಸಿ ಎಂದು ಕೇಳಿಕೊಂಡರು.

ಇನ್ನು ಮಂಗಳೂರು ಮೂಲದ ಬೆಡಗಿ ಶಿಲ್ಪ ಕಾಮತ್ ಶಾರ್ಟ್ ಮೂವೀಸ್ ನಲ್ಲಿ ಅಭಿನಯಿಸಿದ್ದು , ಆಡಿಷನ್ ಮೂಲಕ ಈ ಚಿತ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಒಬ್ಬ ವೈಲ್ಡ್  ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಮನೋಜ್ ಜೆಬೆ ಎಂಬ  ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಾಗೆ ಮತ್ತೊಬ್ಬ ಪ್ರತಿಭೆ ಸಂಧ್ಯಾ ಅರ್ಕೆರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

ಇನ್ನು ಈ ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ಮನೋಜ್. ಕೆ .ಜಯನ್ ಅಭಿನಯಿಸುತ್ತಿದ್ದಾರೆ. ಮಲಯಾಳಂ , ತಮಿಳು , ತೆಲುಗು ಸೇರಿದಂತೆ ಸುಮಾರು 200ಕ್ಕೂಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರದಲ್ಲಿ ಎರಡು ಬಾರಿ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 2005ರಲ್ಲಿ ಉಗ್ರ ನರಸಿಂಹ ಚಿತ್ರದಲ್ಲಿ ಅಭಿನಯಿಸಿದ್ದ ಮನೋಜ್ ಸುಮಾರು 18 ವರ್ಷಗಳ ನಂತರ ಮತ್ತೊಮ್ಮೆ ರಂಗಸ್ಥಳ ಮೂಲಕ  ವಿಲನ್ ಪಾತ್ರದಲ್ಲಿ ಕಾಡಿಸಿಕೊಂಡಿದ್ದಾರೆ.  ಮಲಯಾಳಂ ವ್ಯಕ್ತಿಯಾಗಿ ಪಾತ್ರವನ್ನು ನಿರ್ವಹಿಸಿದ್ದು , ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬರ್ತಿದೆಯಂತೆ. ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಾ ಕನ್ನಡ ಭಾಷೆಗೆ ದೈವಿಕ ಶಕ್ತಿ ಇದೆ. ನಾನು ಡಾ. ರಾಜ್ ಕುಮಾರ್ ಅವರ ಅಭಿಮಾನಿ. ಅವರು ತಮ್ಮ ಚಿತ್ರಗಳಲ್ಲಿ ತಾವೇ ಹಾಡುತ್ತಾ ಅಭಿನಯಿಸುತ್ತಿದ್ದು ನನಗೆ ಬಹಳ ಸಂತೋಷವಾಗುತ್ತಿತ್ತು.

ನನಗೆ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದಂತಹ ನಿರ್ಮಾಪಕ , ನಿರ್ದೇಶಕ ಹಾಗೂ ನನ್ನ ಸ್ನೇಹಿತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು. ಈ ಒಂದು ಚಿತ್ರಕ್ಕೆ ಎನಾಷ್ ಒಲಿವೇರ ಛಾಯಾಗ್ರಹಣ ಮಾಡುತ್ತಿದ್ದು , ಜೂಡೋ ಸ್ಯಾಂಡಿ ಆರು ಹಾಡುಗಳಿಗೆ ಸಂಗೀತವನ್ನು ನೀಡುತ್ತಿದ್ದು , ಪ್ರಭಾಕರನ್ ರಾಮು ಕಲಾ ನಿರ್ದೇಶನ ಈ  ಚಿತ್ರಕ್ಕೆ ಇದೆ.

Copyright@2018 Chitralahari | All Rights Reserved. Photo Journalist K.S. Mokshendra,