Sambavami Yuge Yuge.News

Friday, May 24, 2024

149

ಶೀರ್ಷಿಕೆ ಹಳೇದು ಕಥೆ ಹೊಸತು

       ೮೦ರ ದಶಕದಲ್ಲಿ ಸಿದ್ದಲಿಂಗಯ್ಯ ನಿರ್ದೇಶನದ ‘ಸಂಭವಾಮಿ ಯುಗೇ ಯುಗೇ’ ಚಿತ್ರವು ತೆರೆ ಕಂಡಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಂಡಿದೆ. ಮೊನ್ನೆಯಷ್ಟೇ ಡೋಲು ತಮಟೆ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಜಾನಪದ ಶೈಲಿಯಲ್ಲಿ ಮೂಡಿಬಂದಿರುವ ಸಾಂಗ್‌ನ್ನು ಶೃತಿಹರಿಹರನ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಅರಸುಅಂತಾರೆ ಸಾಹಿತ್ಯ, ಗೀತಾ ನೃತ್ಯ, ಪೂರನ್ ಶೆಟ್ಟಿಗಾರ್ ಸಂಗೀತ, ನಕಾಶ್ ಹಾಗೂ ಸ್ಪರ್ಶ ಧ್ವನಿ ಇರಲಿದೆ. ಪ್ರತಿಭಾ ನಿರ್ಮಾಣ ಮಾಡಿದ್ದಾರೆ.

      ಈ ಸಂದರ್ಭದಲ್ಲಿ ಮಾತನಾಡಿದ ಚೇತನ್ ಚಂದ್ರಶೇಖರಶೆಟ್ಟಿ ಕಳೆದ ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜತೆ ಕೆಲಸ ಮಾಡಿ, ಈಗ ಆಕ್ಷನ್ ಕಟ್ ಹೇಳಿರುವುದು ಹೊಸ ಅನುಭವ. ಹಳ್ಳಿ ಹಿನ್ನಲೆಯ ಸಿನಿಮವಾಗಿದ್ದರೂ ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಹಳ್ಳಿಯ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ನಮ್ಮ ಹಳ್ಳಿಗಳು ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬ ಅಂಶಗಳನ್ನು ಒಳಗೊಂಡಿದೆ. ಮಾದ್ಯಮದವರು ಪ್ರೋತ್ಸಾಹ  ನೀಡಬೇಕೆಂದು ಕೋರಿಕೊಂಡರು.

     ಕೃಷಿ ಮತ್ತು ರೈತರ ಸಿನಿಮಾವೆಂದು ನಾಯಕ ಜಯಶೆಟ್ಟಿ ಬಣ್ಣಿಸಿಕೊಂಡರು. ಬಿಜಾಪುರ ಮೂಲದ ನಿಶಾರಜಪೂತ್ ನಾಯಕಿ. ತಾರಾಗಣದಲ್ಲಿ ಅಶೋಕ್‌ಕುಮಾರ್, ಮಧುರಗೌಡ, ರಾಜೇಂದ್ರಕಾರಂತ್, ಅಶ್ವಿನ್‌ಹಾಸನ್, ವಿಕ್ಟರಿವಾಸು ಮುಂತಾದವರು ಪಾತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು. ಅಂದುಕೊಂಡಂತೆ ಆದರೆ, ಜೂನ್ ೨೧ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,