ಅಕ್ಟೋಬರ್ ೧೧ಕ್ಕೆ ಮಾರ್ಟಿನ್
ಬಹುದಿನಗಳಿಂದ ‘ಮಾರ್ಟಿನ್’ ಚಿತ್ರವು ಎಂದು ಬಿಡುಗಡೆಯಾಗುತ್ತದೆ ಎಂದು ಸಿನಿಪ್ರೇಮಿಗಳು ಬಕಪಕ್ಷಿಯಂತೆ ಕಾಯುತ್ತಿದ್ದು, ಅದಕ್ಕೆ ಉತ್ತರ ಸಿಕ್ಕಿದೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ತಂಡವು ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕ ಧ್ರುವಸರ್ಜಾ ಹೇಳುವಂತೆ, ಎರಡೂವರೆ ವರ್ಷಗಳ ಪ್ರಯಾಣದಲ್ಲಿ ೨೪೦ ದಿನ ಚಿತ್ರೀಕರಣ ನಡೆಸಲಾಗಿದೆ. ಇದು ಅಪ್ಪಟ ತಂತ್ರಜ್ಘರ ಸಿನಿಮಾ. ಎಲ್ಲರೂ ಶೇಕಡ ೧೦೦ರಷ್ಟು ಶ್ರಮ ಹಾಕಿದ್ದಾರೆ. ಅದಕ್ಕಾಗಿ ಸಿನಿಮಾ ಚೆನ್ನಾಗಿ ಬಂದಿದೆ. ನಿರ್ದೇಶಕರು ಏನು ಹೇಳುವರೋ ಅದನ್ನು ಅಚ್ಚು ಕಟ್ಟಾಗಿ ಮಾಡಬೇಕು ಅನ್ನುವುದಿತ್ತು. ನಮ್ಮ ಹಿರಿಯರು ಮಾಡಿದಂತ ಕಥೆಗೆ ಸಂಪೂರ್ಣವಾಗಿ ನ್ಯಾಯ ಒದಗಿಸಲಾಗಿದೆ. ಅಕ್ಟೋಬರ್ ೧೧ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ.
ವಿಷಯವನ್ನು ಇಲ್ಲೆ ಯಾಕೆ ಮೊದಲು ಹೇಳುತ್ತಿದ್ದೇನೆ, ಅಂದರೆ ನಾವು ಯಾವತ್ತು ನಮ್ಮ ಬೇರನ್ನು ಮರೆಯಬಾರದು. ಟೀಸರ್, ಟ್ರೈಲರ್, ಸಾಂಗ್ ಇದರಲ್ಲಿ ಯಾವುದು ಫಸ್ಟ್ ಬೇಕು ಅಂತ ಅಭಿಮಾನಿಗಳು ತಿಳಸಬೇಕು. ಅದಕ್ಕಾಗಿ ವೆಬ್‌ಸೈಟನ್ನು ತೆರೆಯಲಾಗಿದೆ. ನೀವುಗಳು ಲಾಗಿನ್ ಆಗಿ, ನಿಮಗೆ ಯಾವ ಕಂಟೆಂಟ್ ಬೇಕು ಎಂಬುದನ್ನು ಹೇಳಬೇಕು. ಅದರಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇಡ್ತಾರೋ ಅದನ್ನು ನಾವು ರಿಲೀಸ್ ಮಾಡುತ್ತೇವೆ. ಇದಿಷ್ಟು ಇಂದಿನ ಮುಖ್ಯಾಂಶಗಳು ಎಂದು ಮಾತಿಗೆ ವಿರಾಮ ತೆಗೆದುಕೊಂಡರು.
ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಎ.ಪಿ.ಅರ್ಜುನ್ ನಿರ್ದೇಶನವಿದೆ. ವೈಭವಿ ಶಾಂಡಿಲ್ಯ ನಾಯಕಿ. ಅನ್ವೇಶಿಜೈನ್ ಮತ್ತು ಸುಕೃತವಾಗ್ದೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಸತ್ಯಹೆಗಡೆ, ಸಂಗೀತ ರವಿಬಸ್ರೂರು ಅವರದಾಗಿದೆ. ಇವರೆಲ್ಲರೂ ಅನುಭವಗಳನ್ನು ನೆನಪು ಮಾಡಿಕೊಂಡರು. ಆಯುಧ ಪೂಜೆ ಹಬ್ಬದ ಕೊಡುಗೆಯಾಗಿ ‘ಮಾರ್ಟಿನ್’ ತೆರೆ ಮೇಲೆ ಅಬ್ಬರಿಸಲಿದೆ.