ಜಡ್ಜ್ಮೆಂಟ್ಗೆ ಉಘೇ ಉಘೇ ಅಂದರು ಪ್ರೇಕ್ಷಕರು
ಶುಕ್ರವಾರ ತೆರೆಕಂಡ ‘ಜಡ್ಜ್‌ಮೆಂಟ್’ ಚಿತ್ರವನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದಾರೆ. ಹಾಗಾಗಿ ಬಿಡುಗಡೆಯಾದ ಮಾರನೆ ದಿನವೇ ತಂಡವು ಮಾಧ್ಯಮದ ಮುಂದೆ ಸಂತಸವನ್ನು ಹಂಚಿಕೊಂಡಿತು. ನಿರ್ದೇಶಕ ಗುರುರಾಜ ಕುಲಕರ್ಣಿ ಹೇಳುವಂತೆ ಬಹಳಷ್ಟು ನಿರೀಕ್ಷೆಯೊಂದಿಗೆ ರಿಲೀಸ್ ಮಾಡಿದೆವು. ಜನರಿಂದ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ನನಗೆ ಕಂಡುಬಂದದ್ದು ಹೆಚ್ಚಾಗಿ ಫ್ಯಾಮಿಲಿ ಸಮೇತ ಜನ ಚಿತ್ರ ನೋಡಲು ಬರ‍್ತಾ ಇದ್ದುದು. ಪತ್ರಿಕೆಗಳು ಒಳ್ಳೆ ವಿಮರ್ಶೆ ನೀಡಿದ್ದಾರೆ. ಇದರಿಂದ ನಮಗೆ ಇನ್ನಷ್ಟು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆಂಬ ನಂಬಿಕೆ ಇದೆ. ಸಂಗೀತ ನಿರ್ದೇಶಕರಿಗೆ ತುಂಬಾ ಕಷ್ಟ ಕೊಟ್ಟಿದ್ದೇನೆ. ಅವರು ಮ್ಯೂಸಿಕ್‌ನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮುಖ್ಯವಾಗಿ ರವಿಚಂದ್ರನ್ ಅಭಿನಯಿಸಿದ್ದರಿಂದ ೪೦ ಥಿಯೇಟರ್‌ಗಳು ರಿಓಪನ್ ಆಗಿದೆ. ಇದು ಸರ್ ಮೇಲೆ ಇಟ್ಟಿರುವ ಪ್ರೀತಿ ಎನ್ನಬಹುದು ಅಂತಾರೆ.
ಸಿನಿಮಾ ಬಂದ ಮೇಲೆ ನಿರ್ದೇಶಕ, ನಿರ್ಮಾಪಕರ ಮುಖದಲ್ಲಿ ನಗು ಮೂಡಿರುವುದು ಕಂಡು ನಮಗೂ ಖುಷಿಯಾಗಿದೆ. ನಾನಿನ್ನು ನೋಡಿಲ್ಲ. ಒಳ್ಳೆಯ ಟಾಕ್ ಬರುತ್ತಿದ್ದು, ದೃಶ್ಯಂಗೆ ಹೋಲಿಕೆ ಮಾಡುತ್ತಿದ್ದಾರೆ. ನನ್ನಿಂದ ಏನನ್ನು ಇಷ್ಟಪಡುತ್ತಾರೆ ಎಂಬುದು ತಿಳಿಯಿತು ಎಂದು ರವಿಚಂದ್ರನ್ ಹೇಳಿದರು.
ಸಂಗೀತ ಸಂಯೋಜಕ ಅನೂಪ್‌ಸೀಳನ್, ಮೇಘನಾಗಾಂವ್ಕರ್, ಸುಜಯ್‌ಶಾಸ್ತ್ರೀ, ಕೃಷ್ಣಹೆಬ್ಬಾರ್, ಸಾಹಿತಿ ಪ್ರಮೋದ್ ಮರವಂತೆ, ಸಂಕಲನಕಾರ ಕೆಂಪರಾಜು ಮುಂತಾದವರು ಸುಂದರ ಸಮಯದಲ್ಲಿ ಉಪಸ್ತಿತರಿದ್ದು, ಸಂಭ್ರಮದ ಮಾತುಗಳನ್ನು ಆಡಿದರು.