ಸತ್ಯ ಘಟನೆಯ ದ ರೂಲರ್ಸ್
೨೦೧೭ರಂದು ನಡೆದ ನೈಜ ಘಟನೆಯನ್ನು ‘ದ ರೂಲರ‍್ಸ್’ ಚಿತ್ರದಲ್ಲಿ ಬಳಸಲಾಗಿದೆ. ಎಂ.ಎನ್.ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣ ಮಾಡಿದ್ದು, ಉದಯ್ ಭಾಸ್ಕರ್ ಛಾಯಾಗ್ರಹಣ, ಸಂಕಲನ ಜತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಂವಿಧಾನದ ಶಕ್ತಿ ಎಂದು ಅಡಿಬರಹದಲ್ಲಿ ಹೇಳಲಾಗಿದೆ. ಸಿನಿಮಾವು ಆಗಸ್ಟ್ ೩೦ರಂದು ತೆರೆ ಕಾಣುತ್ತಿರುವುದರಿಂದ ತಂಡವು ಮಾಹಿತಿ ಹಂಚಿಕೊಳ್ಳಲು ಮಾಧ್ಯಮದ ಮುಂದೆ ಹಾಜರಾಗಿತ್ತು.
ನಿರ್ದೇಶಕರು ಮಾತನಾಡುತ್ತಾ, ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಆರಿಸಿಕೊಂಡು ಸ್ಕ್ರೀನ್‌ಪ್ಲೇ ಸಿದ್ದಪಡಿಸಲಾಗಿದೆ. ಒಂದು ಅನ್ಯಾಯ ನಡೆದಾಗ ಅದನ್ನು ಎದುರಿಸಿ ಕೇಳುವ ಧೈರ್ಯ ನಮಗೆ ಇರಬೇಕು ಎಂದು ಹೇಳಹೊರಟಿದ್ದೇವೆ.
ಮಹಿಳಾ ಪ್ರಧಾನ ಕಥೆಯಲ್ಲಿ ಒಬ್ಬ ಹೆಣ್ಣು ತನಗಾದ ಅನ್ಯಾಯದ ವಿರುದ್ದ ಹೋರಾಟ ನಡೆಸಿ ಹೇಗೆ ಗೆಲ್ಲುತ್ತಾಳೆ. ಬಡವ ಬಲ್ಲಿದರ ಸುತ್ತ ನಡೆಯುವ ಸಂಘರ್ಷ ಹೇಳಲಿದ್ದೇವೆ ಎಂದರು.
ವಿಶಾಲ್ ನಾಯಕ. ಹಳ್ಳಿಯ ಬಡಕುಟುಂಬದ ಹುಡುಗಿಯಾಗಿ ರಿತುಗೌಡ ನಾಯಕಿ. ಖಳನಾಗಿ ಪುನೀತ್ ಕಾಣಿಸಿಕೊಂಡಿದ್ದಾರೆ. ಸಂಗೀತ ಕರುಣ್.ಕೆ.ಜಿ.ಎಫ್, ರಚನೆ,ಚಿತ್ರಕಥೆ ಮತ್ತು ಸಂಭಾಷಣೆ ಡಾ.ಕೆ.ಎಂ.ಸಂದೇಶ್, ನೃತ್ಯ ಪ್ರವಲ್ಲಿಕ್ ಅವರದಾಗಿದೆ.