ಗಗನ ಕುಸುಮ ಹಾಡುಗಳ ಬಿಡುಗಡೆ
’ಗಗನ ಕುಸುಮ’ ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆಗೊಂಡಿತು. ಹಿರಿಯ ನಿರ್ಮಾಪಕ ಮತ್ತು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಕಾರ್ಯಕ್ರಮಕ್ಕೆ ಚಾಲನ ನೀಡಿದರು. ನಂತರ ಮಾತನಾಡುತ್ತಾ ನಿರ್ಮಾಪಕ ಹುಟ್ಟಿಕೊಂಡರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಮೊದಲು ಅವರು ಉಳಿಯಬೇಕು. ಟೈಟಲ್ ಚೆನ್ನಾಗಿದೆ. ಸಿನಿಮಾವು ಯಶಸ್ಸು ಗಳಿಸಲಿ ಅಂತ ಶುಭ ಹಾರೈಸಿದರು.
ಎಸ್.ಎಸ್.ಕ್ರಿಯೇಶನ್ಸ್ ಅಡಿಯಲ್ಲಿ ಆರ್.ಶೇಖರನ್ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಗೇಂದ್ರ ಕುಮಾರ್ ಜೈನ್ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾದೊಳಗೊಂದು ಸಿನಿಮಾದ ಕಥೆಯನ್ನು ಹೇಳಿದ್ದಾರೆ. ನಾಯಕಿಯ ಧೋರಣೆಗೆ ಬೇಸತ್ತ ನಿರ್ದೇಶಕ ಹಳ್ಳಿಯ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಮಾಡಿ ಹೇಗೆ ಯಶಸ್ಸು ಗಳಿಸುತ್ತಾನೆ ಎನ್ನುವುದು ಕಥಾ ಹಂದರ.
ತಾಗಾಣದಲ್ಲಿ ಎಸ್.ಕೆ.ಪ್ರಕಾಶ್ ಸಣ್ಣಕ್ಕಿ, ಕಾವ್ಯ ಪ್ರಕಾಶ್, ಆಶಾ, ಹರಣಿನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ನವೆಂಬೆರ್ ವೇಳಗೆ ಚಿತ್ರವು ತೆರೆಗೆ ಬರಲಿದೆ.