Rummy Atta.News

Monday, September 16, 2024

643

 

ರಮ್ಮಿ ಆಟ ಹಾಡು -ಟ್ರೈಲರ್ ಬಿಡುಗಡೆ

 

   ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವ ಉಮರ್ ಷರೀಫ್ ಅವರೀಗ ಚಿತ್ರರಂಗಕ್ಕೆ ಬಂದಿದ್ದಾರೆ‌. ಆನ್ ಲೈನ್ ಗೇಮ್ ಈಗಿನ‌ ಯುವ ಜನತೆಯನ್ನು ಹೇಗೆ ಹಾಳು ಮಾಡುತ್ತಿದೆ. ಅದರಿಂದ ಏನೆಲ್ಲ ಅನಾಹುತಗಳಾಗುತ್ತಿವೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು "ರಮ್ಮಿ ಆಟ" ಎಂಬ  ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು  ಆಕ್ಷನ್ ಕಟ್ ಹೇಳಿದ್ದಾರೆ.  ರಮ್ಮಿ ಗೇಮ್ ನಂಥ ಆಟಗಳ ಚಟಕ್ಕೆ  ಕೆಲವರು ತಮ್ಮ ಮನೆ ಮಠ ಕಳೆದುಕೊಂಡು  ಜೀವನವನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಹಣದಾಸೆಗೆ ಬಿದ್ದು  ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆನ್ ಲೈನ್ ರಮ್ಮಿ ಆಡುವುದರಿಂದ ಏನೇನು  ತೊಂದರೆಗಳಾಗುತ್ತವೆ, ಜನ ಹೇಗೆಲ್ಲ ಮೋಸ ಹೋಗುತ್ತಾರೆ ಎಂಬುದನ್ನು ಸೆ.20 ರಂದು  ತೆರೆಕಾಣುತ್ತಿರುವ "ರಮ್ಮಿ ಆಟ" ಚಿತ್ರದಲ್ಲಿ ಹೇಳಲಾಗಿದೆ.

   ಇತ್ತೀಚೆಗೆ ಈ ಚಿತ್ರದ ಒಂದು ಹಾಡು ಹಾಗೂ ಟ್ರೈಲರ್ ಪ್ರದರ್ಶನದ ಕಾರ್ಯಕ್ರಮ ಎಸ್.ಆರ್.ವಿ. ಥಿಯೇಟರಿನಲ್ಲಿ ನಡೆಯಿತು..

     ಮುಖ್ಯ ಅತಿಥಿಯಾಗಿದ್ದ ನಿರ್ಮಾಪಕ ಉಮೇಶ್ ಬಣಕಾರ್  ಮಾತನಾಡಿ ಈ ಚಿತ್ರವನ್ನು ಪೋಷಕರೆಲ್ಲರೂ ನೋಡಬೇಕು. ಮುಖ್ಯವಾಗಿ ತಮ್ಮ‌ ಮಕ್ಕಳು ಮೊಬೈಲ್ ನಲ್ಲಿ ಏನು ಮಾಡ್ತಿದ್ದಾರೆಂದು ತಿಳಿದುಕೊಳ್ಳಬೇಕು. ಸ್ಕೂಲ್ ನಡೆಸುತ್ತಿರುವ ಷರೀಫ್ ಸಮಾಜಕ್ಕೆ ಮೆಸೇಜ್ ಹೇಳಲು ಈ ಚಿತ್ರ ಮಾಡಿದ್ದಾರೆ ಎಂದು ಹೇಳಿದರು. ಶಶಿಕಾಂತ್ ಹರ್ನಳ್ಳಿ ಅವರು ಚಿತ್ರದ  ಹಾಡಿಗೆ ಚಾಲನೆ ನೀಡಿದರು.

  ಚಿತ್ರದ ನಿರ್ಮಾಪಕ ನಿರ್ದೇಶಕ ಉಮರ್ ಷರೀಫ್ ಮಾತನಾಡಿ  ನಮ್ಮೊಳಗೆ ಇರುವಂಥ ಅಂದಾನುತೆಯನ್ನು ಬೇಸ್ ಮಾಡಿಕೊಂಡು ತಯಾರಿಸಿದ ಚಿತ್ರವಿದು. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸೂಪರ್ ಹೀರೋ ಅಂದ್ರೆ ಡೈಲಾಗ್ಸ್. ದೆಲಬ್ರಟಿಗಳ ಜವಾಬ್ದಾರಿಯನ್ನು ನೆನಪಿಸುವಂಥ ಸಂಭಾಷಣೆಗಳನ್ನು ಮಾಡಿದ್ದೇವೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಿದ್ದೇವೆ ಎಂದು ಹೇಳಿದರು. ನಿರೂಪಕರಾಗಿದ್ದ ರಾಘವ ಸೂರ್ಯ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಮತ್ತೊಬ್ಬ ನಟ ಸೈಯದ್ ಇರ್ಫಾನ್ ಹಿರಿಯ ನ್ಯಾಯವಾದಿಯಾಗಿ ಬಣ್ಣ ಹಚ್ಚಿದ್ದಾರೆ. ಮಂಗಳೂರು ಮೂಲದ ಕಿರುತೆರೆನಟಿ ವಿನ್ಯಾ ಶೆಟ್ಟಿ ಅವರು ಈ ಚಿತ್ರದಲ್ಲಿ ಗೌರಿ ಎಂಬ ಪಾತ್ರ ನಿರ್ವಹಿಸಿದ್ದು, ಸ್ನೇಹಾರಾವ್ ಲಾಯರ್ ಆಗಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     ರಮ್ಮಿ ಆಟ  ಚಿತ್ರಕ್ಕೆ ಸೆನ್ಸಾರ್ ಮಂಡಳಿ  ’ಯು’ ಸರ್ಟಿಫಿಕೇಟ್ ನೀಡಿದೆ.  ನೆರಳು ಮೀಡಿಯಾದ ಹನಿಮೇಶ್ ಪಾಟೀಲ್ ಅವರು  ಲಿಖಿತ್ ಫಿಲಂಸ್ ನ ರಮೇಶ್ ಅವರ  ಮೂಲಕ ಈ ಚಿತ್ರವನ್ನು  ಬಿಡುಗಡೆ ಮಾಡುತ್ತಿದ್ದಾರೆ.

    ಅಂತರಾಷ್ಟ್ರೀಯ  ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಂಸೆ ಸಹ ಪಡೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಹುತೇಕ  ಚಿತ್ರೀಕರಣ ನಡೆಸಲಾಗಿದೆ.

ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯವಿದೆ.

ರಾಘವ ಸೂರ್ಯ, ಸಯ್ಯದ್ ಇರ್ಫಾನ್, ವಿನ್ಯಾ ಶೆಟ್ಟಿ, ಸ್ನೇಹರಾವ್, ನಂದಿನಿಗೌಡ, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ಮೋಹನ್ ಇತರರು ರಮ್ಮಿ ಆಟ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,