Martin.Film News

Tuesday, July 30, 2024

91

ಮುಂಬೈದಲ್ಲಿ ಮಾರ್ಟಿನ್ ೧೩ ಭಾಷೆಗಳ ಟ್ರೈಲರ್

       ಬಹುದಿನಗಳಿಂದ ‘ಮಾರ್ಟಿನ್’ ಚಿತ್ರವು ಎಂದು ಬಿಡುಗಡೆಯಾಗುತ್ತದೆ ಎಂದು ಸಿನಿಪ್ರೇಮಿಗಳು ಬಕಪಕ್ಷಿಯಂತೆ ಕಾಯುತ್ತಿದ್ದು, ಅದಕ್ಕೆ ಉತ್ತರ ಸಿಕ್ಕಿದೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ತಂಡವು ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡಿತು. ನಾಯಕ ಧ್ರುವಸರ್ಜಾ ಹೇಳುವಂತೆ ‘ಮಾರ್ಟಿನ್’ ಪ್ರತಿಯೊಂದು ದೇಶಕ್ಕೂ ತಲುಪಿಸಬೇಕೆಂದು ಆಗಸ್ಟ್ ೫ರಂದು ಬಾಂಬೆದಲ್ಲಿ ಅಂತರರಾಷ್ಟ್ರೀಯ ಸುದ್ದಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಪಂಚದ ೨೧ ದೇಶಗಳ ಮಾಧ್ಯಮ ಮಿತ್ರರು ಆಗಮಿಸಲಿರುವರು. ಭಾರತದ ಮೊದಲ ಇಂಟರ್ ನ್ಯಾಷನಲ್ ಪ್ರೆಸ್‌ಮೀಟ್  ಎಂಬುದು ಹೆಮ್ಮೆಯ ವಿಷಯ. ಈಜಿಪ್ಟ್, ದುಬೈ, ಇಂಡೋನೇಶಿಯಾ, ಯುಕೆ, ಇಂಗ್ಲೇಂಡ್, ಜಪಾನ್, ಕೋರಿಯ ಸೇರಿದಂತೆ ಒಟ್ಟಾರೆ ೨೭ ಪತ್ರಕರ್ತರುಗಳು ಬರುವರಿದ್ದಾರೆ. ನಾವು ಎಲ್ಲಾ ಕಡೆಗಳಲ್ಲಿ ರೀಚ್ ಆಗಬೇಕೆಂಬುದೇ ಉದ್ದೇಶವಾಗಿದೆ. ಇದಕ್ಕೂ ಮುನ್ನ ಕನ್ನಡಿಗರಿಗೆ ತೋರಿಸಬೇಕೆಂದು ೪ರಂದು ವೀರೇಶ ಚಿತ್ರಮಂದಿರದಲ್ಲಿ ಷೋ ಇಟ್ಟುಕೊಳ್ಳಲಾಗಿದೆ ಎಂದರು.

       ನಿರ್ಮಾಪಕ ಉದಯ್‌ಮೆಹ್ತಾ ಮಾತನಾಡಿ, ಚೈನೀಸ್, ಜಪಾನೀಸ್ ಭಾಷೆಯಲ್ಲಿ ರಿಲೀಸ್ ಮಾಡಲು ನಮಗೆ ೬-೭ ತಿಂಗಳ ಹಿಂದೆಯೇ ಬೇಡಿಕೆ ಬಂದಿದೆ. ಇತರೆ ಭಾಷೆಗಳ ಡಬ್ಬಿಂಗ್, ಸೆನ್ಸಾರ್ ಮಾಡಿಸಲು ಸಮಯ ಸಿಕ್ಕಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲಿ ಏಕಕಾಲಕ್ಕೆ ಅಕ್ಟೋಬರ್ ೧೧ರಂದು ಜನರಿಗೆ ತೋರಿಸಲು ಏರ್ಪಾಟು ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಇಂಡಿಯನ್ ಚಿತ್ರಕ್ಕೆ ಡಿಮ್ಯಾಂಡ್ ಇದೆ. ಸಿನಿಮಾವು ಪಕ್ಕಾ ಆಕ್ಷನ್, ಡ್ರಾಮಾ, ಮನರಂಜನೆಯಿಂದ ಕೂಡಿರುವುದರಿಂದ ವಿಶ್ವದೆಲ್ಲಡೆ ತೆಗೆದುಕೊಂಡು ಹೋಗಬಹುದು ಎನ್ನುತ್ತಾರೆ.

        ಮೂರು ವರ್ಷ ಪ್ರಯಾಣದಲ್ಲಿ ೨೪೦ ದಿನ ಚಿತ್ರೀಕರಣ ನಡೆಸಲಾಗಿದೆ. ಇದು ಅಪ್ಪಟ ತಂತ್ರಜ್ಘರ ಸಿನಿಮಾ. ಎಲ್ಲರೂ ಶೇಕಡ ೧೦೦ರಷ್ಟು ಶ್ರಮ ಹಾಕಿದ್ದಾರೆ. ಅದಕ್ಕಾಗಿ ಸಿನಿಮಾ ಚೆನ್ನಾಗಿ ಬಂದಿದೆ. ನಿರ್ದೇಶಕರು ಏನು ಹೇಳುವರೋ ಅದನ್ನು ಅಚ್ಚು ಕಟ್ಟಾಗಿ ಮಾಡಬೇಕು ಅನ್ನುವುದಿತ್ತು. ನಮ್ಮ ಹಿರಿಯರು ಮಾಡಿದಂತ ಕಥೆಗೆ  ಸಂಪೂರ್ಣವಾಗಿ ನ್ಯಾಯ ಒದಗಿಸಲಾಗಿದೆ. ಮುಂಬೈದಲ್ಲಿ ನಡೆಯಲಿರುವ ಇವೆಂಟ್ ದೇಶದಲ್ಲೇ ಫಸ್ಟ್ ಎನ್ನಬಹುದು ಎಂಬ ಮಾತು ನಿರ್ದೇಶಕ ಎ.ಪಿ.ಅರ್ಜುನ್ ಅವರದಾಗಿತ್ತು,

       ವೈಭವಿ ಶಾಂಡಿಲ್ಯ ನಾಯಕಿ. ಅನ್ವೇಶಿಜೈನ್ ಮತ್ತು ಸುಕೃತವಾಗ್ದೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಸತ್ಯಹೆಗಡೆ, ಸಂಗೀತ ರವಿಬಸ್ರೂರು ಅವರದಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,