ಭಾರತೀಯ ಚಿತ್ರರಂಗಕ್ಕೆ ಕಾಂತಾರ ಸ್ಪೂರ್ತಿ
ಪ್ಯಾನ್ ಇಂಡಿಯಾ ‘ತಂಗಲಾನ್’ ಚಿತ್ರವು ಆಗಸ್ಟ್ ೧೫ರಂದು ತೆರೆ ಕಾಣುತ್ತಿದೆ. ಅದರನ್ವಯ ಪ್ರಚಾರದ ಸಲುವಾಗಿ ನಾಯಕ ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗಾದರೂ ಸಿನಿಮಾವನ್ನು ತೆಗೆದುಕೊಂಡು ಹೋಗಬಹುದು ಅಂತ ತೋರಿಸಿಕೊಟ್ಟಿದ್ದು ಕಾಂತಾರ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಥೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿದ್ದು ನಮಗೆ ಸ್ಪೂರ್ತಿಯಾಯಿತು. ಶೂಟಿಂಗ್ ಸಮಯದಲ್ಲಿ ಕಾಂತಾರ ಬಿಡುಗಡೆಯಾಗಿತ್ತು.
ಸಿನಿಮಾವನ್ನು ಹೊರಜಗತ್ತಿಗೆ ಹೇಗೆ ಕೊಂಡ್ಯೊಯಬೇಕೆಂದು ಯೋಚನೆ ಮಾಡುತ್ತಿದ್ದಾಗ ‘ಕಾಂತಾರ’ ದಾರಿ ತೋರಿಸಿತು ಎಂದು ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ‘ತಂಗಲಾನ್’ ಮುಂದೆ ‘ಐ’ ‘ಅನ್ನಿಯನ್’ ಏನು ಇಲ್ಲ ಎಂದರು.
ಇನ್ನು ಸಿನಿಮಾದಲ್ಲಿ ವಿಕ್ರಮ್ ವಿಭಿನ್ನ ಪಾತ್ರ ಮತ್ತು ಗೆಟಪ್ದಲ್ಲಿ ಕಾಣಿಸಿಕೊಂಡಿದ್ದಾರೆ. ರಚನೆ, ನಿರ್ದೇಶನ ಪಾ.ರಂಜಿತ್ ಅವರದಾಗಿದೆ. ತಾರಾಗಣದಲ್ಲಿ ಮಾಳವಿಕಾಮೋಹನ್, ಪಾರ್ವತಿ, ಬ್ರಿಟಿಷ್ ನಟ ಡೇನಿಯಲ್ ಮುಂತಾದವರು ನಟಿಸಿದ್ದಾರೆ.