ಲಕ್ಷಿಯಾಗಿ ಪದ್ಮಜರಾವ್
‘ಲಕ್ಷೀ’ ಎಂಬ ಕಿರುಚಿತ್ರಕ್ಕೆ ರಚನೆ,ಚಿತ್ರಕಥೆ, ಸಂಭಾಷಣೆ, ಸಂಕಲನ, ನಿರ್ದೇಶನ ಜೊತೆಗೆ ಪುರೋಹಿತ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಪ್ರದರ್ಶನ ನಡೆಯಿತು. ಇದರಲ್ಲಿ ಅಭಿಜಿತ್, ಒಬ್ಬ ಮಗ ತನ್ನ ತಾಯಿಯ ಕನಸನ್ನು ನನಸು ಮಾಡುವ ಹಾಗೂ ಪೂರ್ವಜರ ಸಂಸ್ಕ್ರತಿ, ಆಚಾರ ವಿಚಾರಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ ಇದು ನಿರ್ದೇಶಕರ ತಾಯಿ ಲಕ್ಷೀಕಂಬದ ನೈಜ ಘಟನೆ ಎಂಬುದು ವಿಶೇಷ. ಅವರ ಪ್ರತಿರೂಪವಾಗಿ ಹಿರಿಯ ನಟಿ ಪದ್ಮಜರಾವ್ ನಟಿಸಿದ್ದಾರೆ.
೬೮ ವರ್ಷದ ನಳಿನಿ ಪುರೋಹಿತ್ ಮನೆಯ ಲಕ್ಷಿಕಂಬದ ನಡುವಿನ ಭಾವನಾತ್ಮಕ ಸಂಬಂದ. ಅವರಿಬ್ಬರ ಮಧ್ಯೆ ಆಗುವ ಮನದ ಮಾತುಗಳು, ಆಕೆಯ ಚಿತ್ರಕಲೆಯ ಕನಸನ್ನು ನನಸು ಮಾಡುವ ಮಗ ಇದಿಷ್ಟನ್ನು ಅರ್ಧ ಗಂಟೆಯಲ್ಲಿ ಮನಮುಟ್ಟುವ ಹಾಗೆ ಹೇಳಿದ್ದಾರೆ. ಪ್ರಣವ್ ಅಯ್ಯಂಗಾರ್ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಸ್ನೇಹ ತೆಗ್ಗಿಹಾಳ್ ಸಾಹಿತ್ಯವಿದೆ.