Ugravathara,News

Thursday, October 31, 2024

70

 

ಉಗ್ರಾವತಾರ ಹಾಡುಗಳ ಲೋಕಾರ್ಪಣೆ

 

      ಎಸ್‌ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ, ಎಸ್.ಜಿ.ಸತೀಶ್ ನಿರ್ಮಾಣ, ಗುರುಮೂರ್ತಿ ರಚನೆ ಮತ್ತು ನಿರ್ದೇಶನದ ’ಉಗ್ರಾವತಾರ’ ಚಿತ್ರದ ನಾಯಕಿ ಪರಿಚಯದ ಹಾಡಿನ  ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.

 

        ಪ್ರಿಯಾಂಕಉಪೇಂದ್ರ ಹೇಳುವಂತೆ ಸಮಾಜದಲ್ಲಿ ಹೆಣ್ಣಿಗೆ ಶೋಷಣೆ ನಡೆಯುತ್ತಲೇ ಇದೆ. ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತಿಲ್ಲ. ಇವರುಗಳ ಧ್ವನಿಯಾಗಿ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಸಮಾಜದಲ್ಲಿ ನಡೆಯತಕ್ಕಂತ ಅನ್ಯಾಯಗಳನ್ನು ತಡೆಗಟ್ಟುವಲ್ಲಿ ಪ್ರಯತ್ನ ಮಾಡಿರುತ್ತೇನೆ. ನಿರ್ದೇಶಕರು ಹೇಳಿದಂತೆ ತೆರೆ ಮೇಲೆ ತೋರಿಸಿದ್ದಾರೆ. ನಿಮ್ಮಗಳ ಪ್ರೋತ್ಸಾಹ ಬೇಕೆಂದು ಕೋರಿದರು.

     ನಟ ಸಂಗಮೇಶಉಪಾಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಪುರುಷ ಪ್ರಧಾನ ರಾಜ್ಯದಲ್ಲಿ ಶಾಸಕಾಂಗ, ನ್ಯಾಯಾಂಗ ಉತ್ತಮವಾಗಿ ಕೆಲಸ ಮಾಡಿದರೆ ಅಪರಾಧಗಳು ಕಡಿಮೆಯಾಗುತ್ತದೆ. ದುಷ್ಟರು ನೀಚ ಕಾರ್ಯಗಳನ್ನು ಮಾಡಲು ಹೆದರುತ್ತಾರೆ. ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯಗಳನ್ನು ಇಟ್ಟುಕೊಂಡು, ಒಬ್ಬ ಮಹಿಳೆಯಾಗಿಯೇ ಸರ್ಕಾರಿ ಅಧಿಕಾರಿಯಾಗಿ ಪ್ರಿಯಾಂಕರವರು ಪಾತ್ರವಾಗಿ ನಿರೂಪಣೆ ಮಾಡಿದ್ದಾರೆ. ನಿಜ ಜೀವನದಲ್ಲಿ ಆಫೀಸರ್ ಆಗಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ತಡೆಗಟ್ಟುವುದು ಕಷ್ಟವಾಗುತ್ತದೆ. ಅದೇ ಸಿನಿಮಾದಲ್ಲಿ ಇದೆಲ್ಲಾವನ್ನು ತೋರಿಸಿ ಜನರಿಗೆ ಅರಿವು ಮೂಡಿಸಬಹುದು. ಸದ್ಯ ಶಿಕ್ಷೆ ಪ್ರಮಾಣ ಶೇಕಡ ಐದರಷ್ಟು ಇಲ್ಲ. ಇದರಿಂದ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಚಿತ್ರವು ಎಲ್ಲರಿಗೂ ತಲುಪಲಿ ಎಂದರು.

       

        ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ, ಹೊರಗಡೆ ಅದೇ ರೀತಿಯಲ್ಲಿ ಕಾಣಬೇಕು. ಸಮಾಜದಲ್ಲಿ ನಡೆಯತಕ್ಕಂತ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಮೇಡಂಗೆ ಈ ಚಿತ್ರದಿಂದ ಆಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿದೆ. ದಯವಿಟ್ಟು ಟಾಕೀಸ್‌ಗೆ ಬನ್ನಿರೆಂದು ನಿರ್ದೇಶಕ ಗುರುಮೂರ್ತಿ ಕೇಳಿಕೊಂಡರು.

 

       ಕಲಾವಿದರುಗಳಾದ ರೋಬೋಗಣೇಶ್, ದರ್ಶನ್‌ಸೂರ್ಯ, ಅಂಕಿತಾ, ವರ್ಧನ್  ಮುಂತಾದವರು ಸಂತಸ ಹಂಚಿಕೊಂಡರು.

Copyright@2018 Chitralahari | All Rights Reserved. Photo Journalist K.S. Mokshendra,