*ಹೊಸಬರ ಬೆನ್ನಿಗೆ ನಿಂತ ಸ್ಯಾಂಡಲ್ ವುಡ್ ಸಲಗ*
*'ಲವ್ ರೆಡ್ಡಿ’ಗೆ ’ಭೀಮ’ ಬಲ: ದುಬೈನಲ್ಲೂ ರಿಲೀಸ್*
ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ’ಲವ್ ರೆಡ್ಡಿ’ ಸಿನಿಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಆಗಿದೆ. ಸ್ಮರಣ್ ರೆಡ್ಡಿ ಮೂಲತಃ ಹೈದರಾಬಾದ್ ನವರು ಲವ್ ರೆಡ್ಡಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಸಿನಿಮಾಗೆ ನಟ ಅಂಜನ್ ಕುಟುಂಬದವರೇ ಬಂಡವಾಳ ಹೂಡಿದ್ದಾರೆ. ನಟಿಯಾಗಿ ಶ್ರಾವಣಿ ಅಭಿನಯಿಸಿಸ್ದಾರೆ. ವಿಶೇಷ ಅಂತಂದ್ರೆ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಸಿನಿಮಾವನ್ನು ನೋಡಿ, ಕಂಟೆಂಟ್ ಇಷ್ಟವಾಗಿ ಲವ್ ರೆಡ್ಡಿ ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡ್ತಿದ್ದಾರೆ. ಜೊತೆಗೆ ಹೊಂಬಾಳೆ ಸಂಸ್ಥೆ ಕನ್ನಡದ ಡಿಸ್ಟ್ರೀಬ್ಯೂಷನ್ ಜವಾಬ್ದಾರಿಯನ್ನು ಹೊತ್ತಿದೆ.
ಲವ್ ರೆಡ್ಡಿ ತೆಲುಗು ಸಿನಿಮಾ ಇದಾಗಿದ್ದು, ಇದೀಗ ಕನ್ನಡದಲ್ಲಿ ಡಬ್ ಆಗಿ, ಪ್ರತಿ ಹಾಡುಗಳು, ಡೈಲಾಗ್ಸ್ ಎಲ್ಲವೂ ಕನ್ನಡದಲ್ಲೆ ಮೂಡಿಬಂದಿದೆ. ಮೂಲತಃ ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. *ಲವ್ ರೆಡ್ಡಿ* ಕನ್ನಡ ವರ್ಷನ್ ನ ಟ್ರೈಲರ್ ನನ್ನು *ಸ್ಯಾಂಡಲ್ ವುಡ್ ಸಲಗ ನಟ ವಿಜಯ್ ಕುಮಾರ್* ರಿಲೀಸ್ ಮಾಡುವುದರ ಮೂಲಕ ಹೊಸಬರಿಗೆ, ಹೊಸತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಪ್ರೊಡ್ಯೂಸರ್ಸ್, ನಮಗ್ಯಾವ ಸಿನಿಮಾದ ಬ್ಯಾಗ್ರೌಂಡ್ ಇಲ್ಲ, ಈ ಸಿನಿಮಾದ ನಟ ಅಂಜನ್ ರಾಮಚಂದ್ರ ನಮ್ಮ ಕುಟುಂಬದವರು, ಹೊಸಬರು ಸಿನಿಮಾ ಮಾಡ್ತಾರೆ ಅಂದ್ರೆ ಯಾರು ಬಂಡವಾಳ ಹಾಕೋಕೆ ಮುಂದೆ ಬರಲ್ಲ, ಹಾಗಾಗಿ ನಾವೆಲ್ಲರೂ ಸೇರಿ ಫಂಡ್ ಮಾಡಿ ಈ ಸಿನಿಮಾಗೆ ಬಂಡವಾಳ ಹೂಡಿದ್ದೀವಿ. ಒಳ್ಳೆ ಕಂಟೆಂಟ್ ಗೆ ಸೋಲಿಲ್ಲ, ತೆಲುಗಿನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗ ಕನ್ನಡದಲ್ಲೂ ಬರ್ತಿದ್ದೀವಿ ನಿಮ್ಮೆಲ್ಲರ ಸಪೋರ್ಟ್ ಹೀಗೆ ಇರಲಿ. ಸಿನಿಮಾದ ಕಂಟೆಂಟ್ ಗೆ ಮನಸ್ಸೋತ ಪ್ರಭಾಸ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕನ್ನಡದಲ್ಲಿ ನಮ್ಮ ಸಲಗ ನಮ್ಮ ಬೆನ್ನಿಗೆ ನಿಂತಿದ್ದಾರೆ. ವಿಜಯ್ ಕುಮಾರ್ ಗೆ ನಾವು ಚಿರ ಋಣಿ ಎಂದರು.
ಇನ್ನೂ ಕನ್ನಡದಲ್ಲಿ ಕುರುತೆರೆ ಮೂಲಕ ಹೆಚ್ಚು ಮನೆಮಾತಾಗಿರುವ ಕನ್ನಡದ ನಟ ಎನ್ ಟಿ ರಾಮಸ್ವಾಮಿ ಮಾತನಾಡಿ, ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಹೊಸಬರಿಗೆ ಈ ರೀತಿ ರೆಸ್ಪಾನ್ಸ್ ಸಿಕ್ತಿರೋದು ಖುಷಿಯ ವಿಚಾರ. ನಾನೆಲ್ಲೂ ಪ್ರಮೋಷನ್ ಗೆ ಹೋಗಿರ್ಲಿಲ್ಲ, ಚಿತ್ರತಂಡ ನನ್ನ ಪಾತ್ರಕ್ಕೆ ಹೆಚ್ಚು ಪ್ರಶಂಸೆ ಸಿಕ್ತಿದೆ, ಜನರಿಗೆ ಕನೆಕ್ಟ್ ಆಗ್ತಿದೆ ನೀವು ಪ್ರಮೋಶನ್ ಗೆ ಬನ್ನಿ ಅಂತ ಹೇಳಿದ್ರು. ಹೀಗೆ ಹೈದರಾಬಾದ್ ನಲ್ಲಿ ಒಂದು ಥಿಯೇಟರ್ ವಿಸಿಟ್ ಮಾಡ್ದಾಗ ಸಿನಿಮಾ ನೋಡಿ, ಏಕಾಏಕಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಬಾರಿಸೋಕೆ ಶುರು ಮಾಡಿದ್ರು, ಬಹುಶಃ ಅವರ ಜೀವನದಲ್ಲಿ ಏನಾಗಿತ್ತೋ, ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದು ನನ್ನ ಮೇಲೆ ಕೈ ಮಾಡಿದ್ರು. ಇದು ಒಂದು ರೀತಿಲಿ ವರ ಹೌದು. ಕಾರಣ ಜನರಿಗೆ ನನ್ನ ಪಾತ್ರ ಮುಟ್ಟಿದೆ. ನನ್ನ ಸಿನಿಮಾವನ್ನು ವಿಜಯ್ ಕುನಾರ್ ಪ್ರೆಸೆಂಟ್ ಮಾಡ್ತಿರೋದು ಖುಷಿಯ ವಿಚಾರ. ಎಲ್ಲ ಹೊಸಬರಿಗೂ ವಿಜಯ್ ಹೀಗೆ ಸಪೋರ್ಟ್ ಮಾಡ್ತಾರೆ. ಅವರಿಗೂ ಇಂಡಸ್ಟ್ರೀಯಲ್ಲಿ ಯಾವದೇ ಸಪೋರ್ಟ್ ಇಲ್ಲದೆ, ಆ ಕಷ್ಟನ ಅನುಭವಿಸಿದ್ದಾರೆ. ಹಾಗಾಗಿ ಸದಾ ಹೊಸಬರಿಗೆ ಅವಕಾಶ ಕೊಡ್ತಾರೆ. ಸಲಗ ವಿಜಯ್ ಬರೀ ನಟನಲ್ಲ, ದೈತ್ಯ ಕನ್ನಡದ ಪ್ರತಿಭೆ.
ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ತೆಲುಗಿನಲ್ಲಿ ಸೆನ್ಸೇಷನಲ್ ಹಿಟ್ ಆಗಿದೆ. ನಮ್ಮ ಲವ್ ರೆಡ್ಡಿ ಈಗ ಇದೇ 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ. ಈಗಾಗಲೇ ತೆಲುಗಿನ ಸ್ಟಾರ್ ನಟ ಪ್ರಭಾಸ್, ಹಾಗೂ ಸ್ಟಾರ್ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಸಲಗ ಇದು ಬರೀ ಹೆಸರಲ್ಲ, ನಮ್ಮ ಬದುಕು ಎಂಬ ಮಾತುಗಳನ್ನಾಡಿದ್ರು.
ನಟಿ ಶ್ರಾವಣಿ ಮತ್ತು ನಟ ಅಂಜನ್ ರಾಮಚಂದ್ರ ಮಾತನಾಡಿ, ನಾವು ಕನ್ನಡದವರೇ, ದಯವಿಟ್ಟು ಸಿನಿಮಾನ ನೋಡಿ. ಲವ್ ರೆಡ್ಡಿಗೆ ನಿಮ್ಮ ಬೆಂಬಲವಿರಲಿ. ಯುವ ಪೀಳಿಗೆಗೆ
ಸಲಗ ವಿಜಯ್ ಉದಾಹರಣೆ. ವಿಜಯ್ ಕುಮಾರ್ ನಂಬಿದವರ ಕೈ ಯಾವತ್ತು ಬಿಡಲ್ಲ. ಅವರು ಬರೀ ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಹೀರೋ ಎಂದು ಕೊಂಡಾಡಿದ್ರು.
ಕೊನೇದಾಗಿ ನಟ ವಿಜಯ್ ಕುಮಾರ್ ಮಾತನಾಡಿ, ಲವ್ ರೆಡ್ಡಿ ಸಿನಿಮಾ ನೋಡಿ ನಾಲ್ಕು ದಿನ ಆಯ್ತು. ಪ್ರತೀ ಪಾತ್ರಗಳು ಈಗಲೂ ನನಗೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಲವ್ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಸ್ವಲ್ಪ ಕೆಲಸಗಳಿಗೆ ದುಬೈಗೆ ಹೋಗ್ತಾ ಇದ್ದೀನಿ, ಸಾಧ್ಯ ಆದಷ್ಟು ಅಲ್ಲಿನವರನ್ನು ಭೇಟಿಯಾಗಿ ದುಬೈನಲ್ಲಿ ಲವ್ ರೆಡ್ಡಿ ರಿಲೀಸ್ ಮಾಡುವ ಯೋಚನೆ ಮಾಡ್ತೀನಿ. ಎಂದು ಹೇಳುತ್ತಾ, ಪ್ರತಿ ಪಾತ್ರದಾರಿಗಳನ್ನು ವೇದಿಕೆಗೆ ಬರಮಾಡಿಕೊಂಡು, ನೋಡ್ರಪ್ಪಾ ಸಿನಿಮಾ ಚೆನಾಗಿಲ್ಲ ಅಂದ್ರೆ ಹಠ ಮಾಡ್ಬೇಡಿ, ನಮ್ಮ ಸಿನಿಮಾ ಚೆನ್ನಾಗಿದೆ ಅಂತ, ಸಿನಿಮಾ ಚೆನ್ನಾಗಿದ್ದಾಗ ಹಿಗ್ಗೋದು ಬೇಡ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ ಎಂದು ಕಿವಿ ಮಾತೇಳುತ್ತಾ. ನಿಮ್ಮ ಜೊತೆ ನಾನು ಯಾವಾಗಲೂ ಇರ್ತೀನಿ ಎಂದು ಚಿತ್ರತಂಡಕ್ಕೆ ವಿಜಯ್ ಕುಮಾರ್ ಭರವಸೆ ನೀಡಿದ್ರು.