Max.Film News

Sunday, December 01, 2024

480

ಸುದೀಪ್ ಮಾತಲ್ಲಿ ಮ್ಯಾಕ್ಸ್ ಅನುಭವಗಳು

      ಈ ವರ್ಷದ ಡಿಸೆಂಬರ್ ತಿಂಗಳ ಬಹು ನಿರೀಕ್ಷೆಯ ಚಿತ್ರಗಳಲ್ಲಿ  ‘ಮ್ಯಾಕ್ಸ್’ ಕೂಡ ಸೇರ್ಪಡೆಯಾಗಿದೆ. ಇದೇ ೨೫ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿರುವುದರಿಂದ, ತಂಡವು ಮೊದಲ ಬಾರಿ ಮಾಧ್ಯಮದ ಮುಂದೆ ಹಾಜರಾಗಿ ಅನುಭವಗಳನ್ನು ಹೇಳಿಕೊಂಡರು.

       ಕಿಚ್ಚ ಸುದೀಪ್ ಮಾತನಾಡಿ ಕಲೈಪುಲಿ ಥನು ಈಗಾಗಲೇ ನಲವತ್ತೇಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಬಂದಿರುವುದು ಹೆಮ್ಮೆಯ ವಿಷಯ. ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಥೆ ಹೇಳಲು ಚೆನ್ನೈನಿಂದ ಬೆಂಗಳೂರಿಗೆ ಬಂದವರು. ನನಗೆ ಇಷ್ಟವಾಗದಿದ್ದಲ್ಲಿ ಮಾತುಕತೆ ಸ್ಪಲ್ಪ ಹೊತ್ತಿನಲ್ಲೆ ಮುಗಿದು ಹೋಗುತ್ತಿತು. 

. ಹೀಗೆ ಒಂದು ವಾರ ಕಳೆದು ಹೋಯಿತು. ಮುಂದೆ ಆತನ ಪ್ರತಿಭೆ, ಕಥೆ ಹೇಳುವ ರೀತಿ ತಾನು ಅವರಿಗೆ ಕೊಟ್ಟ ಗೌರವ.

      ಸಿನಿಮಾವು ಒಂದು ರಾತ್ರಿ ನಡೆಯುತ್ತದೆಂದು ಬಹಿರಂಗವಾಗಿದೆ. ಆದರೂ ಇದರಲ್ಲಿ ಕುತೂಹಲಗಳು ತುಂಬಿಕೊಂಡಿದೆ. ಮುಖ್ಯವಾಗಿ ಇದರ ಪ್ರಕ್ರಿಯೆ ಇಷ್ಟವಾಗಿದೆ. ಯಾರದ್ದೂ ಬಂದು ಹೋಗುವ ಪಾತ್ರವಾಗಿರದೆ, ಎಲ್ಲವು ಅದರದ್ದೇ ವಿವರಣೆ ಕೊಡುತ್ತಾ ಜೀವಂತವಾಗಿಸುತ್ತದೆ. ಅಮ್ಮ ಚಿತ್ರ ನೋಡಬೇಕೆಂದು ಆಸೆ ಪಟ್ಟಿದ್ದರು. ಮೊಬೈಲ್‌ದಲ್ಲಿ ತುಂಬಿಸಿಕೊಂಡಿದ್ದ ಒಂದಷ್ಟು  ರನ್ನಿಂಗ್ ಕ್ಯಾರೆಕ್ಟರ್‌ಗಳನ್ನು ನೋಡಿ ಖುಷಿ ಪಟ್ಟಿದ್ದರು. ಇನ್ನೆನಿದ್ದರೂ ನೀವುಗಳು ನೋಡಿ ಹರಸಬೇಕೆಂದು ಸುದೀಪ್ ಕೋರಿದರು.

      ಮಾತಿನ ಮನೆಯಲ್ಲಿ ಕರಿಸುಬ್ಬು, ವಿಜಯ್‌ಚೆಂಡೂರು, ಸುಧಾಬೆಳವಾಡಿ, ಸಂಯುಕ್ತ ಹೊರನಾಡು, ಸಂಗೀತ ಸಂಯೋಜಕ ಅಜನೀಶ್‌ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಮುಂತಾದವರು ಉಪಸ್ತಿತರಿದ್ದು ಸಂತಸ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,