Martin.Film News

Wednesday, October 02, 2024

57

 

**ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರ ಅಕ್ಟೋಬರ್ 11 ರಂದು ತೆರೆಗೆ* .

 

 *ಬಿಡುಗಡೆಗೂ ಮುನ್ನ ಸಾಲುಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಚಿತ್ರತಂಡ* .*

 

 ಉದಯ್ ಕೆ ಮೆಹ್ತಾ ನಿರ್ಮಾಣದ, ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಬಹು ನಿರೀಕ್ಷಿತ ಈ ಪ್ಯಾನ್ ಇಂಡಿಯಾ ಚಿತ್ರ ಅಕ್ಟೋಬರ್ 11ರಂದು ತೆರೆಗೆ ಬರಲಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.     

 

"ಮಾರ್ಟಿನ್", ನನ್ನ ಸಿನಿಜರ್ನಿಯ ಬಿಗ್ ಬಜೆಟ್ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆಯಿಟ್ಟು ಇಷ್ಟು ದುಡ್ಡನ್ನು ಹಾಕಿದ್ದಾರೆ. ನಮ್ಮ ಮಾವ ಅರ್ಜುನ್ ಸರ್ಜಾ ಅವರು ಉತ್ತಮ ಕಥೆ ಮಾಡಿ ಕೊಟ್ಟಿದ್ದಾರೆ. ಪ್ರತಿಯೊಬ್ಬ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ "ಮಾರ್ಟಿನ್" ಉತ್ತಮವಾಗಿ ಮೂಡಿಬಂದಿದೆ. ನನ್ನ ಚಿತ್ರ ಮೂರು ವರ್ಷಗಳ ನಂತರ ಅಕ್ಟೋಬರ್ 11ರಂದು ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅಕ್ಟೋಬರ್ 4ರಂದು ಹೈದರಾಬಾದ್ ನಲ್ಲಿ ಹಾಡೊಂದರ ಬಿಡುಗಡೆಯಾಗಲಿದೆ.  ಅಕ್ಟೋಬರ್ 5 ರಂದು ನನ್ನ ಚಿತ್ರವನ್ನು ಪ್ರೀತಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಭೇಟಿ ನೀಡಲಿದ್ದೇವೆ. ಅಕ್ಟೋಬರ್ 6ರಂದು ನನ್ನ ಹುಟ್ಟುಹಬ್ಬ. ಅಂದು ದಾವಣಗೆರೆಯಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಅಕ್ಟೋಬರ್ 8 ರಂದು ಮುಂಬೈನಲ್ಲಿ ಮತ್ತೊಂದು ಹಾಡು ರಿಲೀಸ್ ಆಗಲಿದೆ‌. ಈ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಧ್ರುವ ಸರ್ಜಾ ತಿಳಿಸಿದರು.               

 ನಮ್ಮ "ಮಾರ್ಟಿನ್" ಚಿತ್ರ ಅಕ್ಟೋಬರ್ 11 ರಂದು ಭಾರತದಾದ್ಯಂತ ಸುಮಾರು 3000 ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಮಾತನಾಡಿದ ನಿರ್ಮಾಪಕ ಉದಯ್ ಕೆ ಮೆಹ್ತಾ,  ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ.  ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

 

ನಟಿ ವೈಭವಿ ಶಾಂಡಿಲ್ಯ ಅವರು "ಮಾರ್ಟಿನ್" ಚಿತ್ರವನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು.

 

"ಮಾರ್ಟಿನ್" ಚಿತ್ರದ ನನ್ನ ಪಾತ್ರ ಚೆನ್ನಾಗಿದೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೊದಲ ಸಿನಿಮಾ ಕೂಡ ಇದು ಎಂದರು ನಟ ಚಿಕ್ಕಣ್ಣ.

 

ಛಾಯಾಗ್ರಾಹಕ ಸತ್ಯ ಹೆಗ್ಡೆ, ನೃತ್ಯ ನಿರ್ದೇಶಕರಾದ ಮುರಳಿ, ಇಮ್ರಾನ್ ಸರ್ದಾರಿಯಾ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.                  

 

ಮಣಿ ಶರ್ಮ ಸಂಗೀತ ನಿರ್ದೇಶನ, ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,