OTT Player.News

Thursday, October 24, 2024

31

 

ಓಟಿಟಿ ಪ್ಲೇಯರ್

ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನ

 

ಸಿನಿಪ್ರಿಯರಿಗೆ ಮತ್ತೊಂದು ಓಟಿಟಿ ವೇದಿಕೆ

 

  ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಓಟಿಟಿ ಪ್ಲಾಟ್ ಫಾರಂಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಓಟಿಟಿ ಪ್ಲಾಟ್ ಫಾರಂಗಳು ಸನ್ನದ್ದವಾಗುತ್ತಿವೆ. ಇದೀಗ ಗ್ರಾಹಕರ ಬಡ್ಜೆಟ್ ಫ್ರೆಂಡ್ಲಿ ಓಟಿಟಿ ಯಾಗಿ "ಓಟಿಟಿ ಪ್ಲೇಯರ್" ಪ್ರಾರಂಭವಾಗಿದೆ. ಇದು ಆ್ಯಪ್ ಅಲ್ಲ,  ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆಯಡಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಅಭಿವೃದ್ದಿಪಡಿಸಿರುವ ವೆಬ್ ಸೈಟ್ ಆಗಿದ್ದು ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

ಈ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ನಿರ್ದೇಶಕ, ನಿರ್ಮಾಪಕರಾದ ಓಂ ಸಾಯಿಪ್ರಕಾಶ್ ಹಾಗೂ ಎಸ್.ಎ.ಚಿನ್ನೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ‌ ಮುರಳಿರಾವ್ ಇದೊಂದು ಪ್ರಯೋಗ, ಪ್ರಯತ್ನ. ನಿರ್ಮಾಪಕರೊಬ್ಬರು ನಮ್ಮನ್ನು  ಭೇಟಿ ಮಾಡಿ  ತಮ್ಮ ಕಷ್ಟ ಹೇಳಿಕೊಂಡಾಗ ಈ ಆಲೋಚನೆ ಬಂತು. ಈಗ ಎಲ್ಲರೂ ಓಟಿಟಿಯಲ್ಲಿ ಚಿತ್ರ ಯಾವಾಗ ಬರುತ್ತೆ ಅಂತ ಕಾಯುತ್ತಾರೆ. ನಮ್ಮ ವೆಬ್ ಸೈಟ್ ಗೆ ಲಾಗಿನ್ನ ಆಗಿ  ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು  ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು‌. ಬಂದ ಹಣದಲ್ಲಿ ನಿರ್ಮಾಪಕರಿಗೆ 70% ಶೇರ್ ಕೊಡುತ್ತೇವೆ. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್ ನಲ್ಲಿ ಹಾಕುತ್ತೇವೆ ಎಂದು ವಿವರಿಸಿದರು.

    ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಮಾತನಾಡಿ ಇಂಥ ಪ್ರಯತ್ನಗಳು ನಡೆದರೆ ಬಡ ನಿರ್ಮಾಪಕರಿಗೆ ಒಂದಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.       

 

       ನಿರ್ದೇಶಕ ಸಾಯಿಪ್ರಕಾಶ್ ಮಾತನಾಡುತ್ತ ರೆಗ್ಯುಲರ್ ಓಟಿಟಿ ಗಿಂತ ಇದು ವಿಭಿನ್ನವಾಗಿದೆ. ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವ ಅವಕಾಶ ಸಿಗುತ್ತದೆ‌. ಯಾವುದೇ ಹೊಸ ಸಿನಿಮಾ ಬಂದ ಕೂಡಲೇ ನಾನು ನೋಡುತ್ತೇನೆ. ಇದೊಂದು ಬಂಟಿಂಗ್ ಸ್ಟೇಜ್, ನಂತರ ಸಕ್ಸಸ್ ಆಗುತ್ತದೆ. ಇದರ ಬಗ್ಗೆ ಕ್ರೇಜ್ ಹುಟ್ಟಬೇಕಂದ್ರೆ ಒಳ್ಳೊಳ್ಳೆ ಸಿನಿಮಾ ಬರಬೇಕು ಎಂದು ಹೇಳಿದರು.

Copyright@2018 Chitralahari | All Rights Reserved. Photo Journalist K.S. Mokshendra,