Samhita Vinya.News

Friday, March 14, 2025

139

 

*IIFA 2025 ಬಾಲಿವುಡ್ ನ ಅತೀ ದೊಡ್ಡ ಪ್ರಶಸ್ತಿ ಸಮಾರಂಭದ ಗ್ರೀನ್ ಕಾರ್ಪೆಟ್ ನಲ್ಲಿ ಮಿಂಚಿದ ಕನ್ನಡದ ನಟಿ ಹಾಗೂ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ* .  

 

 *ಕನ್ನಡದ ನಟಿಗೆ ಬಾಲಿವುಡ್ ನಿಂದಲೂ ಬರುತ್ತಿದೆ ಆಫರ್* .

 

"ವಿಷ್ಣು ಸರ್ಕಲ್", "ಮೆಜೆಸ್ಟಿಕ್ ೨" ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲೂ ತನ್ನದೇ ಆದ ಚಾಪು ಮೂಡಿಸಿರುವ ನಟಿ ಸಂಹಿತಾ ವಿನ್ಯಾ ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಬಾಲಿವುಡ್ ಅತೀ ದೊಡ್ಡ ಪ್ರಶಸ್ತಿ ಸಮಾರಂಭ "IIFA 2025" ನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದಾರೆ. ಖ್ಯಾತ ವಸ್ತ್ರ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಅವರು ಸಿದ್ದಪಡಿಸಿದ ವಿನೂತನ ಉಡುಗೆಯಲ್ಲಿ ಸಂಹಿತಾ ವಿನ್ಯಾ IIFA 2025 ಗ್ರೀನ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ.       

 "IIFA 2025" ಬಾಲಿವುಡ್ ನ ದೊಡ್ಡ ಪ್ರಶಸ್ತಿ ಸಮಾರಂಭ. ಅದರಲ್ಲೂ ಬಾಲಿವುಡ್ ನ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್(IIFA) ಗೆ ಇದು 25ನೇ ವರ್ಷ. ಹಾಗಾಗಿ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಬಾಲಿವುಡ್ ಖ್ಯಾತ ಕಲಾವಿದರಾದ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮುಂತಾದದವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇಂತಹ ವರ್ಣರಂಜಿತ ಸಮಾರಂಭದಲ್ಲಿ ಕನ್ನಡದ ನಟಿಯಾಗಿ ನಾನು ಪಾಲ್ಗೊಂಡಿದ್ದು ಬಹಳ ಸಂತೋಷವಾಗಿದೆ. ಇತ್ತೀಚೆಗೆ ಬಾಲಿವುಡ್ ನಿಂದಲೂ ನನಗೆ ತುಂಬಾ ಆಫರ್ ಬರುತ್ತಿದೆ ಎನ್ನುತ್ತಾರೆ ಸಂಹಿತಾ ವಿನ್ಯಾ.

 

Copyright@2018 Chitralahari | All Rights Reserved. Photo Journalist K.S. Mokshendra,