Suthradaari.Film News

Tuesday, March 18, 2025

35

 

ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ "ಸೂತ್ರಧಾರಿ". ಮೇ ತಿಂಗಳ 9 ರಂದು ಬಿಡುಗಡೆ

 

ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ " ಸೂತ್ರದಾರಿ" ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು ಗಮನ‌ ಸೆಳೆದಿದೆ.

 

ನಿರ್ಮಾಪಕರಾದ ಚೇತನ್, ಮುನೇಗೌಡ,  ರಾಜೇಶ್ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದರು. ಮೇ 9 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

 

ನಟ ,ನಿರ್ಮಾಪಕ ನವರಸನ್ ನಿರ್ಮಾಣ ದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಕಿರಣ್ ಕುಮಾರ್ ಆಕ್ಷನ್‌ಕಟ್ ಹೇಳಿದ್ದು ರಾಪರ್‌ ಚಂದನ್‌ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಇದು. ನಾಯಕಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ.

ಹಾಡಿನಲ್ಲಿ ಸಂಜನಾ‌ ಆನಂದ್ ಕಾಣಿಸಿಕೊಂಡಿದ್ದು ಗಮನ ಸೆಳೆದಿದ್ದಾರೆ.

 

ಟ್ರೆಂಡಿಂಗ್ ನಲ್ಲಿ‌ ಬರಬೇಕು ಅಂದ್ರೇ ಏನ್ ಮಾಡಬೇಕು.. ಹಾಗು ಡ್ಯಾಶ್ ಹಾಡು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ನಟ ಚಂದನ್ ಶೆಟ್ಟಿ ಬೇಡಿ ಹಾಕಿದ ಕೈ ನಲ್ಲಿ‌ ಗನ್ ಹಿಡಿದು ಪೊಲೀಸ್ ಡ್ರೆಸ್ ನಲ್ಲಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

 

ಬಳಿಕ‌ ಮಾತಿಗಿಳಿದ‌ ನಿರ್ಮಾಪಕ ನವರಸನ್, ಮಾದ್ಯಮದ ಮಂದಿ  ಪ್ರತಿಯೊಂದಕ್ಕೂ ಬೆನ್ಮೆಲುಬಾಗಿ ನಿಂತಿದ್ದಾರೆ. ಸೂತ್ರದಾರಿ ಕಳೆದ ವರ್ಷ ಬಿಡುಗಡೆ ಮಾಡುವ ಉದ್ದೇಶವಿತ್ತು. ನಟ,ನಿರ್ದೇಶನದ ಜೊತೆ ವಿತರಕ ಕೂಡ. ಇದುವರೆಗೂ 200 ಚಿತ್ರ ವಿತರಣೆ ಮಾಡಿದ್ದೇನೆ. ಮೇ‌ ತಿಂಗಳ 9 ರಂದು ಚಿತ್ರ ಬಿಡುಗಡೆ ದಿನಾಂಕ‌ ಪ್ರಕಟಿಸಿದ್ದೇನೆ.  ಎಲ್ಲವೂ ಆಚಾನಕ್ ಆಗಿ ಮೂಡಿ ಬರುತ್ತಿದೆ. ಚಂದನ್ ಶೆಟ್ಟಿ ಅವರು ಇದುವರೆಗೆ ಮೂಡಿ ಕಾಣಿಸಿಕೊಂಡಿರುವುದೇ ಬೇರೆ ಈ ಚಿತ್ರದಲ್ಲಿ ಬೇರೆ ರೀತಿ ಕಾಣಿಸಿಕೊಂಡಿದ್ದಾರೆ. ಕಷ್ಟದಲ್ಲಿ ಹಲವರು ಜೊತೆ ನಿಂತಿದ್ದಾರೆ. ಅದರಲ್ಲಿ ಚಂದನ್ ಕೂಡ ಒಬ್ಬರು. ಬಹಳಷ್ಟು ಕಲಾವಿದರು ನಟಿಸಿದ್ದಾರೆ. ಮೇ.9 ರಂದು ಚಿತ್ರ ಬಿಡುಗಡೆ ಆಗಲಿದೆ ಎಂದರು

ನಟ ಚಂದನ್ ಶೆಟ್ಟಿ,ನಾಯಕನಾಗಿ ಮೊದಲ ಸಿನಿಮಾ, ಚಿತ್ರದಲ್ಲಿ ನಟಿಸಿದ ನಂತರ ನನ್ನ ಜೀವನದಲ್ಲಿ ಏನೇನೋ ಆಗಿ ಹೋಯ್ತು. ನಟಿ ಸಂಜನಾ ಜೊತೆ ಮದುವೆ ಅಂತ ಹಬ್ಬಿಸಿದರು. ನಾವಿಬ್ಬರೂ ಮದುವೆ ಆಗುತ್ತಿಲ್ಲ. ಮೇ. 9 ರಂದು ಬಿಡುಗಡೆಯಾಗಲಿದೆ ಎಂದು ಸ್ಪಷ್ಡಪಡಿಸಿದರು.

 

ಮತ್ತೊಬ್ಬ ನಟಿ ಸಂಜನಾ ಆನಂದ್ ಮಾತನಾಡಿ , ನಾನು ಮತ್ತು ಚಂದನ್ ಒಳ್ಳೆಯ ಸ್ನೇಹಿತರು ಮೇಲಾಗಿ ಅವರು ನನ್ನ ಸಹೋದರ ಇದ್ದಂತೆ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು

 

ನಟಿ ಅಪೂರ್ವ ಮಾತನಾಡಿ, ನಟ ಚಂದನ್ ಶೆಟ್ಟಿ ಜೊತೆ ನಟಿಸಿದ್ದು ಒಳ್ಳೆಯ ಅನುಭವ, ಒಳ್ಳೆಯ ಪಾತ್ರ ಸಿಕ್ಕಿದೆ. ಮೇ 9 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು ಬಿಡುಗಡಯಾಗುವ ತನಕ ಹಬ್ಬ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ ಅದಕ್ಕಾಗಿ ಕಾಯುತ್ತಿದ್ದೇವೆ ಎಂದರು

 

ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ,ಮೊದಲ‌ ನಿರ್ದೇಶನದ ಸಿನಿಮಾ. ಚಿತ್ರ ಚೆನ್ನಾಗಿ ‌ಮೂಡಿಬಂದಿದೆ.‌ಸಂಗೀತ, ಹಿನ್ನೆಲೆ ಸಂಗೀತ ಅದ್ಬುತವಾಗಿ ಮೂಡಿಬಂದಿದೆ.ನಿರ್ಮಾಪಕ‌ ನವರಸನ್ ಅವರು.. ಪಿಕೆ‌‌ಎಚ್ ದಾಸ್ ಅವರ ಜೊತೆ ಸಹಾಯಕನಾಗಿ ಕೆಲಸ‌ಮಾಡಿದ್ದೆ. ನನ್ಮ ಚಿತ್ರಕ್ಕೆ ಛಾಯಾಗ್ರಾಹಣ ಮಾಡಿರುವುದು ನೀಡಿರುವುದು ಖುಷಿಯ ವಿಚಾರ ಎಂದರು

 

ಗಣೇಶ್ ನಾರಾಯಣ್ ಮಾತನಾಡಿ ಚಿಕ್ಕ ಪಾತ್ರ ಇದೆ ಮಾಡ್ತೀರ ಆಂದರು. ಈಗ ನಟನಾ ವೃತ್ತಿ ಆರಂಭಿಸಿದ್ದೇನೆ. ನಟ‌‌ ಚಂದನ್ ಶೆಟ್ಟಿ ಉತ್ತಮವಾಗಿ ನಟಿಸಿದ್ದಾರೆ ಎಂದರು

 

ಕಲಾವಿದ ಪ್ರಶಾಂತ್ ನಟನಾ ಮಾತನಾಡಿ, ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಖುಷಿ ಆಗಿದೆ. ಪ್ರತಿ ಭಾರಿ‌ ನವರಸನ್ ಸಿಕ್ಕಾಗ ಚಿತ್ರ ಯಾವಾಗ ಎಂದು ಕೇಳ್ತಾ ಇದ್ದೆ. ಮೇ 9ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು‌ ಮಾಹಿತಿ ಹಂಚಿಕೊಂಡರು

 

ನಟಿ ಮೀರಾಶ್ರೀ, ತುಂಬಾ ಗ್ಯಾಪ್ ಆಗಿರುವುದರಿಂದ ಪಾತ್ರ ಏನು ಎನ್ನುವುದನ್ನು ಮರೆತು ಹೋಗಿದ್ದೇನೆ ಎಂದರು.

 

ಸುಶ್ಮಿತಾ ಹಾಗು ಪಲ್ಲವಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣವಿದೆ. ಚಂದನ್ ಶೆಟ್ಟಿ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

 

ನಟ ಚಂದನ್ ಶೆಟ್ಟಿ,ನಾಯಕನಾಗಿ ಮೊದಲ ಸಿನಿಮಾ, ಚಿತ್ರದಲ್ಲಿ ನಟಿಸಿದ ನಂತರ ನನ್ನ ಜೀವನದಲ್ಲಿ ಏನೇನೋ ಆಗಿ ಹೋಯ್ತು. ನಟಿ ಸಂಜನಾ ಜೊತೆ ಮದುವೆ ಅಂತ ಹಬ್ಬಿಸಿದರು. ನಾವಿಬ್ಬರೂ ಮದುವೆ ಆಗುತ್ತಿಲ್ಲ. ಮೇ. 9 ರಂದು ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

 

ಮತ್ತೊಬ್ಬ ನಟಿ ಸಂಜನಾ ಆನಂದ್ ಮಾತನಾಡಿ, ನಾನು ಮತ್ತು ಚಂದನ್ ಒಳ್ಳೆಯ ಸ್ನೇಹಿತರು ಮೇಲಾಗಿ ಅವರು ನನ್ನ ಸಹೋದರ ಇದ್ದಂತೆ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು

 

ನಟಿ ಅಪೂರ್ವ ಮಾತನಾಡಿ, ನಟ ಚಂದನ್ ಶೆಟ್ಟಿ ಜೊತೆ ನಟಿಸಿದ್ದು ಒಳ್ಳೆಯ ಅನುಭವ, ಒಳ್ಳೆಯ ಪಾತ್ರ ಸಿಕ್ಕಿದೆ. ಮೇ 9 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು ಬಿಡುಗಡಯಾಗುವ ತನಕ ಹಬ್ಬ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ ಅದಕ್ಕಾಗಿ ಕಾಯುತ್ತಿದ್ದೇವೆ ಎಂದರು

 

ನಿರ್ದೇಶಕ ಕಿರಣ್ ಕುಮಾರ್‌ ಮಾತನಾಡಿ,ಮೊದಲ ನಿರ್ದೇಶನದ ಸಿನಿಮಾ. ಚಿತ್ರ ಚೆನ್ನಾಗಿ ಮೂಡಿಬಂದಿದೆ.ಸಂಗೀತ, ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ನಿರ್ಮಾಪಕ ನವರಸನ್ ಅವರು.. ಪಿಕೆಎಚ್ ದಾಸ್ ಅವರ ಜೊತೆ ಸಹಾಯಕನಾಗಿ ಕೆಲಸಮಾಡಿದ್ದೆ. ನನ್ನ ಚಿತ್ರಕ್ಕೆ ಛಾಯಾಗ್ರಾಹಣ ಮಾಡಿರುವುದು ನೀಡಿರುವುದು ಖುಷಿಯ ವಿಚಾರ ಎಂದರು

 

ಗಣೇಶ್ ನಾರಾಯಣ್ ಮಾತನಾಡಿ ಚಿಕ್ಕ ಪಾತ್ರ ಇದೆ ಮಾಡ್ತೀರ ಆಂದರು. ಈಗ ನಟನಾ ವೃತ್ತಿ ಆರಂಭಿಸಿದ್ದೇನೆ. ನಟ ಚಂದನ್ ಶೆಟ್ಟಿ ಉತ್ತಮವಾಗಿ ನಟಿಸಿದ್ದಾರೆ ಎಂದರು

 

ಕಲಾವಿದ ಪ್ರಶಾಂತ್ ನಟನಾ ಮಾತನಾಡಿ, ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಖುಷಿ ಆಗಿದೆ. ಪ್ರತಿ ಭಾರಿ ನವರಸನ್ ಸಿಕ್ಕಾಗ ಚಿತ್ರ ಯಾವಾಗ ಎಂದು ಕೇಳ್ತಾ ಇದ್ದೆ. ಮೇ 9ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು

 

ನಟಿ ಮೀರಾಶ್ರೀ, ತುಂಬಾ ಗ್ಯಾಪ್ ಆಗಿರುವುದರಿಂದ ಪಾತ್ರ ಏನು ಎನ್ನುವುದನ್ನು ಮರೆತು ಹೋಗಿದ್ದೇನೆ ಎಂದರು.

 

ಸುಶ್ಮಿತಾ ಹಾಗು ಪಲ್ಲವಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣವಿದೆ. ಚಂದನ್ ಶೆಟ್ಟಿ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ

 

Copyright@2018 Chitralahari | All Rights Reserved. Photo Journalist K.S. Mokshendra,