Appu Taxi.Film News

Friday, March 21, 2025

42

 

ಪುನೀತ್ ರಾಜ್‌ಕುಮಾರ್‌ಗೆ ಗೌರವ ಸೂಚಕವಾಗಿ ’ಅಪ್ಪು ಟ್ಯಾಕ್ಸಿ’ ಚಿತ್ರ ಘೋಷಣೆ; ಜಗ್ಗು ಸಿರ್ಸಿ ಆ್ಯಕ್ಷನ್ ಕಟ್!

ಚಿತ್ರದ ಶೀರ್ಷಿಕೆ ವಿನ್ಯಾಸವು ಹೃದಯಸ್ಪರ್ಶಿಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಒಳಗೊಂಡಿದೆ. ಅಪ್ಪು ಟ್ಯಾಕ್ಸಿ ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬಿಟ್ಟ ಆಳವಾದ ಪ್ರಭಾವದ ಕುರಿತು ಹೇಳಲು ಪ್ರಯತ್ನಿಸುತ್ತದೆ.

ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟುಹಬ್ಬದಂದು ದಿಲೀಪ್ ಕುಮಾರ್ ಎಚ್‌ಆರ್ ತಮ್ಮ ಮುಂಬರುವ ಚಿತ್ರ ’ಅಪ್ಪು ಟ್ಯಾಕ್ಸಿ’ಯನ್ನು ಘೋಷಿಸಿದ್ದಾರೆ. ಮಾರ್ಚ್ 17 ರಂದು ಈ ಘೋಷಣೆ ಮಾಡಲಾಗಿದೆ. ಸಿನಿಮಾ ಪತ್ರಿಕೋದ್ಯಮ, ಪ್ರೊಡಕ್ಷನ್ ಮತ್ತು ವಿತರಣೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ದಿಲೀಪ್ ಕುಮಾರ್ ಎಚ್‌ಆರ್ ಭಾರತೀಯ ಚಲನಚಿತ್ರ ತಯಾರಕರ ಸಂಘದ ಸಹ ಸಂಸ್ಥಾಪಕರಾಗಿದ್ದಾರೆ. ಅಪ್ಪು ಟ್ಯಾಕ್ಸಿ ಪುನೀತ್ ಅವರನ್ನು ಆಚರಿಸುವ ಗುರಿಯನ್ನು ಹೊಂದಿದೆ.

 

ಚಿತ್ರದ ಶೀರ್ಷಿಕೆ ವಿನ್ಯಾಸವು ಹೃದಯಸ್ಪರ್ಶಿಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನು ಒಳಗೊಂಡಿದೆ. ಅಪ್ಪು ಟ್ಯಾಕ್ಸಿ ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬಿಟ್ಟ ಆಳವಾದ ಪ್ರಭಾವದ ಕುರಿತು ಹೇಳಲು ಪ್ರಯತ್ನಿಸುತ್ತದೆ. ಸ್ಕೈಲೈನ್ ಮ್ಯೂಸಿಕ್‌ನ ಸಹಯೋಗದೊಂದಿಗೆ ಚಿತ್ರ ನಿರ್ಮಾಣವಾಗಲಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಅನುಭವಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ಜಗ್ಗು ಸಿರ್ಸಿ ’ಅಪ್ಪು ಟ್ಯಾಕ್ಸಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಲಿವುಡ್‌ನಲ್ಲಿ ತರಬೇತಿ ಪಡೆದ ತಾಂತ್ರಿಕ ತಜ್ಞ ಶಾಮ್ ರೇ, ಅನಿಮೇಟೆಡ್ ಗ್ರಾಫಿಕ್ಸ್ ಅನ್ನು ನೋಡಿಕೊಳ್ಳುತ್ತಾರೆ. ಬರಹಗಾರ ವೈದ್ ಬರೆದ ಚಿತ್ರಕಥೆಯು ಪುನೀತ್ ಅವರ ಪರಂಪರೆಯ ಆಳ ಮತ್ತು ಸೌಂದರ್ಯವನ್ನು ತೆರೆ ಮೇಲೆ ತರುವ ಗುರಿಯನ್ನು ಹೊಂದಿದೆ.

 

ನಿಜ ಜೀವನದ ಘಟನೆಗಳನ್ನು ಆಧರಿಸಿದ ’ಅಪ್ಪು ಟ್ಯಾಕ್ಸಿ’ ಚಿತ್ರವು, ಪುನೀತ್ ಸ್ವತಃ ಪ್ರತಿನಿಧಿಸಿದ ಮೌಲ್ಯಗಳು ಮತ್ತು ಆದರ್ಶಗಳ ಮೂಲಕ, ಮನುಷ್ಯನ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಟ್ಯಾಕ್ಸಿ ಚಾಲಕನ ಪ್ರಯಾಣದ ಕುರಿತು ಹೇಳುತ್ತದೆ. ಈ ಚಿತ್ರವು ನಟ ತನ್ನ ಕಾರ್ಯಗಳು ಮತ್ತು ಮಾತುಗಳ ಮೂಲಕ ಅನೇಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದರು ಎಂಬುದನ್ನು ಎತ್ತಿ ತೋರಿಸುತ್ತದೆ.

 

ಅಪ್ಪು ಟ್ಯಾಕ್ಸಿ ಚಿತ್ರವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು 2026ರ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,