CWKL.Celebrity Kabaddi.News

Tuesday, April 01, 2025

31

 

*ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿದೆ ನವರಸನ್ ನೇತೃತ್ವದ "CWKL" "ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್.* .

 

 *ಇತ್ತೀಚೆಗೆ ಅದ್ದೂರಿಯಾಗಿ ಅನಾವರಣವಾಯಿತು "CWKL" ನ ಜರ್ಸಿ ಹಾಗೂ ಟ್ರೋಫಿ* .                        

 

ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಅನೇಕ ಇವೆಂಟ್ ಗಳನ್ನು ಆಯೋಜಿಸಿ ಜನಪ್ರಿಯರಾಗಿರುವ ನವರಸನ್ ಇದೇ ಮೊದಲ ಬಾರಿಗೆ ನೂರಕ್ಕೂ ಹೆಚ್ಚು ವುಮೆನ್ಸ್ ಸೆಲೆಬ್ರಿಟಿ ಗಳು ಭಾಗವಹಿಸುತ್ತಿರುವ "ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್" ಆಯೋಜಿಸಿದ್ದಾರೆ.  ಈ ಲೀಗ್ ನ ಉದ್ಘಾಟನೆ ಏಪ್ರಿಲ್ 5ರಂದು ನಡೆಯಲಿದೆ. ಏಪ್ರಿಲ್ 5, 6(ಶನಿವಾರ, ಭಾನುವಾರ) ಪಂದ್ಯಗಳು ನಡೆಯಲಿದೆ. ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಸದ್ದು ಮಾಡಿರುವ "CWKL" ಜರ್ಸಿ‌ ಹಾಗೂ ಟ್ರೋಫಿ ಬಿಡುಗಡೆ ಸಮಾರಂಭ ಸಹ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ತಂಡಗಳ ಮಾಲೀಕರಾದ ಸಾಯಿ ಗೋಲ್ಡ್ ಪ್ಯಾಲೆಸ್ ನ ಸರವಣ, "ವಾಮನ" ಚಿತ್ರದ ನಿರ್ಮಾಪಕ ಚೇತನ್ ಗೌಡ, ನಿರ್ಮಾಪಕ ಸುರೇಶ್ ಗೌಡ, ನಿರ್ಮಾಪಕ ರಾಜೇಶ್ ಗೌಡ, ನಿರ್ಮಾಪಕ ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು. ರಾಯಭಾರಿ ರಾಗಿಣಿ ದ್ವಿವೇದಿ ಅವರು "CWKL"  ಗೆ  ಶುಭ ಕೋರಿದರು. "CWKL" ನ ಏಳು ತಂಡಗಳ ನಾಯಕಿಯರು. ಪಂದ್ಯಗಳಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿ ಆಟಗಾರರು ಹಾಗೂ ಅನೇಕ ಗಣ್ಯರು ಸಮಾರಂಭದಲ್ಲಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,