Mixing Preethi.News

Wednesday, April 02, 2025

74

 

*ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ "MIXING ಪ್ರೀತಿ" ಚಿತ್ರ* .

 

 *ಎನ್ ಪಿ ಇಸ್ಮಾಯಿಲ್ ನಿರ್ದೇಶನದ ಪ್ರೇಮ ಕಥಾನಕದಲ್ಲಿ ಸಂಹಿತಾ ವಿನ್ಯಾ, ಪಾವನ ಸೇರಿದಂತೆ ನಾಲ್ವರು ನಾಯಕಿಯರು. ಸಿಂಡೊ ಜೇಕಬ್ ನಾಯಕ* .

 

ಫ್ರೆಂಡ್ಸ್ ಪಿಕ್ಚರ್ಸ್ ಲಾಂಛನದಲ್ಲಿ ಎನ್ ಪಿ ಇಸ್ಮಾಯಿಲ್ ಅವರು ನರ್ಮಿಸಿ, ನಿರ್ದೇಶಿಸಿರುವ,  ಪೊಲ್ಲಾಚಿ ಮಹಾಲಿಂಗಂ ಮತ್ತು ಕಣ್ಣನ್ ಅವರ ಸಹ ನಿರ್ಮಾಣವಿರುವ "MIXING ಪ್ರೀತಿ" ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ, ಸಿರಿ ಮ್ಯಾಸಿಕ್ ನ ಸುರೇಶ್ ಚಿಕ್ಕಣ್ಣ,‌ ಡಿವೈಎಸ್ಪಿ ರಾಜೇಶ್, ನಿರ್ಮಾಪಕ - ನಿರ್ದೇಶಕ ಡೇವಿಡ್ ಮುಂತಾದ ಗಣ್ಯರು ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಅನ್ನು ಅನಾವರಣ ಮಾಡಿದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಪ್ರೇಮ ಪ್ರಧಾನ ಈ ಚಿತ್ರದ ನಾಯಕನಾಗಿ ಸಿಂಡೊ ಜೇಕಬ್ ನಟಿಸಿದ್ದು, ನಾಯಕಿಯರಾಗಿ ಸಂಹಿತಾ ವಿನ್ಯ, ಪಾವನ, ದಿವ್ಯ ಹಾಗೂ ಪ್ರಿಯಾಂಕ ಅಭಿನಯಿಸಿದ್ದಾರೆ.

 

ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ನಿರ್ದೇಶಕರು ಟ್ರೇಲರ್ ನಲ್ಲಿ ಕಥೆಯ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಹಾಡುಗಳು ಚೆನ್ನಾಗಿದೆ. ಪಕ್ಕದ ರಾಜ್ಯಗಳ ನಿರ್ಮಾಪಕರು ಸೇರಿ ಕನ್ನಡ ಚಿತ್ರ ನಿರ್ಮಿಸಿರುವುದು ಖುಷಿಯಾಗಿದೆ ಎಂದರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ.

 ಹಾಡುಗಳು ಹಾಗೂ ಟ್ರೇಲರ್ ಮೂಲಕ ಚಿತ್ರ ಗಮನ‌ ಸೆಳೆಯುತ್ತಿದೆ. ಹಾಡುಗಳು ನಮ್ಮ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ ಎಂದು ಸುರೇಶ್ ಚಿಕ್ಕಣ್ಣ ತಿಳಿಸಿದರು. ಡಿವೈಎಸ್ಪಿ ರಾಜೇಶ್ ಹಾಗೂ ನಿರ್ದೇಶಕ ಡೇವಿಡ್ ಅವರು ಚಿತ್ರಕ್ಕೆ ಶುಭ ಕೋರಿದರು.

 

 ನಿರ್ಮಾಪಕ ಹಾಗೂ ನಿರ್ದೇಶಕ ಎನ್ ಪಿ ಇಸ್ಮಾಯಿಲ್ ಅವರು ಮಾತನಾಡಿ "MIXING ಪ್ರೀತಿ" ಲವ್ ಜಾನರ್ ನ‌ ಚಿತ್ರ.  ಹಾಗಾಗಿ ಚಿತ್ರಕ್ಕೆ 100% ಲವ್ ಎಂಬ ಅಡಿಬರಹವಿದೆ. ಲವ್ ಜಾನರ್ ನ ಚಿತ್ರವಾದರೂ ಈ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.  

 

ಪ್ರೀತಿಯ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ ಎಂದು ನಾಯಕ ಸಿಂಡೊ ತಿಳಿಸಿದರು.   

 

ನಿರ್ದೇಶಕ ಇಸ್ಮಾಯಿಲ್ ಅವರ ಕನ್ನಡ ಪ್ರೀತಿಗೆ ಧನ್ಯವಾದ ತಿಳಿಸಿದ ಕನ್ನಡದ ನಾಯಕಿಯರಾದ ಸಂಹಿತ ವಿನ್ಯಾ, ಪಾವನ, ದಿವ್ಯ ಹಾಗೂ ಪ್ರಿಯಾಂಕ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದರು ಹಾಗೂ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು.

 

ಸಂಗೀತ ನಿರ್ದೇಶಕರಾದ ರಾಜೇಶ್ ಮೋಹನ್ ಮತ್ತು ಗೋಣೇಶ್ವರನ್, ಗೀತರಚನೆಕಾರ ಹಾಗೂ ಗಾಯಕ ಸಚಿನ್, ಛಾಯಾಗ್ರಾಹಕ ಸಾದಿಕ್ ಕಬೀರ್, ನೃತ್ಯ ನಿರ್ದೇಶಕಿ ಡಯಾನ‌ ಹಾಗೂ ಕಾರ್ಯಕಾರಿ ನಿರ್ಮಾಪಕ - ವಿತರಕ ಮರಿಸ್ವಾಮಿ "MIXING ಪ್ರೀತಿ" ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,