ಬ್ಲಿಂಕ್ ತಂಡದಿಂದ ಮತ್ತೊಂದು ವಿನೂತನ ಸಾಹಸ ವಿಡಿಯೋ ಹಾರರ್ ಫಿಲಂ
ಬ್ಲಿಂಕ್ ಹಿಟ್ ಕೊಟ್ಟ ದೀಕ್ಷಿತ್ ಶೆಟ್ಟಿ ಮತ್ತು
ನಿಧಿ ಬೆಂಗಳೂರು ಜೊತೆಯಾಗಿ ಎರಡನೇ ಸಿನ್ಮಾ ವಿಡಿಯೋ
ವೀಡಿಯೋ ಚಿತ್ರದ ಮೊದಲ ಟೀಸರ್ ಹಾಗೂ ಥೀಮ್ ಮ್ಯೂಸಿಕ್ ಬಿಡುಗಡೆ
ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರಿಂದ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷ.
ದೆವ್ವದ ಹಾಡು ಹಾಡೋ ಮೂಲಕ ವಿಡಿಯೋ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವಿಡಿಯೋ ಚಿತ್ರತಂಡ.
ಧೀ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚೊಚ್ಚಲ ನಿರ್ಮಾಣ ವಿಡಿಯೋ ಚಿತ್ರವನ್ನ ಬ್ಲಿಂಕ್ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿದ್ದಾರೆ.
ಭರತ,ಜೀವನ್ ಶಿವಕುಮಾರ್,ತೇಜೇಶ್,ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಗ್ರಣವಿರೋ ಈ ಚಿತ್ರಕ್ಕೆ
ಖ್ಯಾತ ವಸ್ತ್ರವಿನ್ಯಾಸಕ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಸದ್ಯ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ ಇಲ್ಲಿಂದ ಚಿತ್ರೀಕರಣ ಆರಂಭಿಸಲಿದ್ದು, ಇದೇ ವರ್ಷ ಚಿತ್ರವನ್ನ ತೆರೆಗೆತರುವ ಸನ್ನಾಹದಲ್ಲಿದೆ.