Veshadhari.Film Press Meet.

Monday, December 30, 2019

741

                       

ಬದುಕಿನಲ್ಲಿ  ಎಲ್ಲರು  ವೇಷಧಾರಿಗಳು

        ಖಾಕಿ,ಖಾದಿ,ಖಾವಿ ಧರಿಸುವವರನ್ನು ವೇಷಧಾರಿಗಳು ಅಂತ ಕರೆಯುತ್ತಾರೆ. ನಿಜ ಹೇಳಬೇಕೆಂದರೆ  ಜೀವನದಲ್ಲಿ ನಾವೆಲ್ಲರೂ  ಇದೇ ರೀತಿಯಲ್ಲಿ ಗುರುತಿಸಿಕೊಂಡಿದ್ದೇವೆ.  ಇದನ್ನು ಹೇಳಲು ಪೀಠಿಕೆ ಇದೆ.  ಇವನು ಅವ್ನನಲ್ಲ  ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಹೊಸಬರ ‘ವೇಷಧಾರಿ’  ಸಿನಿಮಾವೊಂದು ಸದ್ದಿಲ್ಲದೆ ಬೆಳಗಾಂ, ಬೆಂಗಳೂರು, ಮಂಡ್ಯಾ, ಕೊಡಗು, ಮಂಗಳೂರು, ಇಳಕಲ್ ಡ್ಯಾಂ, ಗೋಕಾಕ್ ಫಾಲ್ಸ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ವೇಷ ಧರಿಸಿಕೊಂಡು  ಆಷಾಡಭೂತಿಯಂತೆ  ನಾಟಕವಾಡುವ ಸ್ವಾಮೀಜಿಗಳು, ಮಠಾಧೀಕ್ಷರ ಕುರಿತಂತೆ ವಾಹಿನಿಯಲ್ಲಿ ತೋರಿಸಿ, ನಂತರ ಶೀರ್ಷಿಕೆ ಹೆಸರಿನಲ್ಲೆ ಕಾದಂಬರಿ ಬರೆದಿರುವ ಶಿವಾನಂದ್‌ಭೂಷಿ ಇದೆಲ್ಲಾ  ಸಂವೇದನೆಯಿಂದ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.  ಸಾಮಾಜಿಕ ವಿಡಂಭನೆವುಳ್ಳ ಕತೆಯಲ್ಲಿ ಹುಡುಗನೊಬ್ಬ ತನ್ನ ಆಸೆಯನ್ನು ತೀರಿಸಿಕೊಳ್ಳಲು ನಾನಾ ವೇಷಗಳನ್ನು ಹಾಕಿಕೊಂಡರೂ ಸಿಗುವುದಿಲ್ಲ. ಕೊನೆಗೆ ಜಿಗುಪ್ಸೆ ಹೊಂದಿ ಎಲ್ಲವನ್ನು ತ್ಯಜಿಸಿ ಮುಂದದಾಗ ಇವನ ಬಯಕೆಗಳು ಬೆನ್ನಟ್ಟಿ ಬರುತ್ತವೆ. ಅಂತಿಮವಾಗಿ ಇದರಿಂದ ಬದುಕುತ್ತಾನಾ ಇಲ್ಲವಾ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಪೋಸ್ಟರ್‌ದಲ್ಲಿ ಕಾಲೆಳೆದವರ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ. ಇದರ ಬಗ್ಗೆ ವಿವರಣೆ ಕೊಡುವ ನಿರ್ದೇಶಕರು ದೇವರಿಂದ ಮನುಷ್ಯನವರೆಗೂ ವಿಘ್ನಗಳು ಬಂದಿದೆ. ಅದೆಲ್ಲಾವನ್ನು ಎದುರಿಸಿ ಸಿನಿಮಾ ಮುಗಿಸಿದ್ದು ಸಾಧನೆ ಎನ್ನಬಹುದು ಅಂತಾರೆ.

        ಹರಿಷಡ್ವರ್ಗಗಳು ಇರುವಂತೆ ಬದುಕಿನಲ್ಲಿ ಬಂದಾಗ ಅದನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ. ಹಳ್ಳಿ ಹುಡುಗನಾಗಿ ಆಸೆಗಳ ಹಿಂದೆ ಬಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ  ಎನ್ನುವ ಪಾತ್ರದಲ್ಲಿ ನಾಯಕ ಆರ್ಯನ್ ನಟನೆ ಇದೆ. ನಾನಾ ವೇಷಗಳ ಪಾತ್ರಧಾರಿಗಳನ್ನು  ಇವರ ಮೂಲಕ ತೋರಿಸಲಾಗಿದೆ. ಶೃತಿರಾಜೇಂದ್ರ ಹಳ್ಳಿ ಹುಡುಗಿ,  ಶಾಸಕರ ಮಗಳು ದರ್ಪವನ್ನು  ತೋರಿಸುವ ಸೋನಂರೈ, ಎರಡು ಶೇಡ್‌ಗಳಲ್ಲಿ ಕಾಣುವ ರಿತನ್ಯಕೃಪ ನಾಯಕಿಯರು.   ತಾರಗಣದಲ್ಲಿ ಕುರಿರಂಗ, ಮೈಕಲ್‌ಮಧು, ಮೋಹನ್‌ಜುನೇಜ ಮುಂತಾದವರು ಅಭಿನಯಿಸಿದ್ದಾರೆ. ಎರಡು ಗೀತೆಗಳೆಗೆ ಸಾಹಿತ್ಯ  ಮತ್ತು ಸಂಗೀತ ಮನೋಹರ್, ಹಿನ್ನಲೆ ಶಬ್ದವನ್ನು  ಅತಿಶಯಜೈನ್  ಒದಗಿಸಿದ್ದಾರೆ. ಛಾಯಾಗ್ರಹಣ ಚಂದ್ರುಬೆಳವಂಗಲ, ಸಂಕಲನ  ಭರತ್‌ಗೌಡ, ಸಾಹಸ ಚಿಕ್ಕಮಗಳೂರು ಲೋಕೇಶ್, ನೃತ್ಯ ಸ್ಟಾರ್ ನಾಗಿ ಅವರದಾಗಿದೆ. ಹುಕ್ಕೇರಿಯ ಎಸ್.ಎನ್.ವೀರಣ್ಣ, ಅನಿಲ್.ಹೆಚ್.ಅಂಬಿ ಮತ್ತು ಹೆಚ್.ಕೆ.ಫ್ರೆಂಡ್ಸ್  ಸಹಭಾಗಿತ್ವದಲ್ಲಿ ಸಾಯಿಭಗವಾನ್ ಕಂಬೈನ್ಸ್‌ದಲ್ಲಿ  ನಿರ್ಮಾಣ ಮಾಡಿರುವ ಚಿತ್ರವು ಜನವರಿ ೩ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,