ನಾನೆಂದೂ ನಿರ್ದೇಶಕನಾಗಲಾರೆ - ಶಿವಣ್ಣ
ಶಿವರಾಜ್‌ಕುಮಾರ್ ನಿರ್ದೇಶಕಆಗುತ್ತಾರೆ ಎಂಬ ಸುದ್ದಿಗಳಿಗೆ ಸ್ವತ: ಶಿವಣ್ಣ ಅದಕ್ಕೆತೆರೆ ಏಳೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಿರ್ದೇಶನ ಮಾಡಲುಯಾರು ಬಿಡುತ್ತಿಲ್ಲ. ಒಂದಾದ ಮೇಲೆ ಅವಕಾಶಗಳು ಬರುತ್ತಿದೆ. ಇನ್ನುಇಪ್ಪತ್ತು ವರ್ಷ ಹೀಗೆಯೇಇರಲು ಬಯಸುತ್ತೇನೆಎಂದು ‘ಸಲಗ’ ಚಿತ್ರದ ‘ಸೂರಿಯಣ್ಣ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಂತರ ಮಾತು ಮುಂದು ವರೆಸುತ್ತಾ ಶ್ರೀಕಾಂತ್ ನಮ್ಮಕುಟುಂಬದಲ್ಲಿಇದ್ದಾರೆ. ಫ್ಯಾಮಿಲಿ ಅಂದರೆ ಮನಸ್ತಾಪ, ಬೇಜಾರುಆಗುತ್ತಿರುತ್ತದೆ. ಇವೆಲ್ಲಾಇದ್ದರೆಅದಕ್ಕೊಂದು ಬೆಲೆ ಇರುತ್ತದೆ. ಹೃದಯದಿಂದ ಹೇಳುವುದರಿಂದ ಫಿಲ್ಟರ್‌ಇರುವುದಿಲ್ಲ. ಅದುಒಮ್ಮೆಖೇದತರಿಸಬಹುದು. ಅವೆಲ್ಲಾ ಮರೆತು ಬಾಳುವುದೇ ಚೆಂದ.ತಂಡವನ್ನು ನೋಡುತ್ತಿದ್ದರೆಟಗರು ನೆನಪಿಗೆ ಬರುತ್ತದೆ. ಚರಣ್‌ರಾಜ್‌ದೇಶದ ಕೆಲವೇ ನಿರ್ದೇಶಕರಲ್ಲಿಇವರು ಸೇರುತ್ತಾರೆ. ಏನೇ ಕೊಟ್ಟರೂಅದಕ್ಕೆಉತ್ತಮ ಸಂಗೀತಒದಗಿಸುವ ಸಾಮರ್ಥ್ಯವಿದೆ. ವಿಜಿರವರು ನಟನೆಜೊತೆಗೆಆಕ್ಷನ್‌ಕಟ್ ಹೇಳಿರುವುದು ಸಂತಸತಂದಿದೆ.ಯಾವತ್ತೇಕರೆದರೂ ಪ್ರಚಾರಕ್ಕೆ ಬರಲು ಸಿದ್ದ ಎಂದರು.
ಸಿನಿಮಾ ಬಿಡುಗಡೆ ನಂತರ ಮಾತನಾಡಿದರೆಚೆನ್ನಾಗಿರುತ್ತದೆಂದು ನಾಯಕ, ನಿರ್ದೇಶಕದುನಿಯಾವಿಜಯ್ ಮಿತಭಾಷಿಯಾಗಿದ್ದರು.ನಾಯಕಿ ಸಂಜನಾಆನಂದ್, ಚರಣ್‌ರಾಜ್, ಧನಂಜಯ್, ಅಚ್ಯುತರಾವ್‌ಕಡಿಮೆ ಸಮಯತೆಗೆದುಕೊಂಡರು. ಅಭಿಮಾನಿಯಾಗಿ ನಿರ್ಮಾಪಕನಾಗುವುದಕ್ಕೆಶಿವಣ್ಣ ಕಾರಣರಾಗಿರುತ್ತಾರೆಂದು ಭಾವುಕರಾಗುತ್ತಾ, ಮುಂದೆಯೂ ಒಳ್ಳೆಯ ಚಿತ್ರಕೊಡಬೇಕನ್ನುವುದೇಧ್ಯೇಯವೆಂದುಕೆ.ಪಿ.ಶ್ರೀಕಾಂತ್ ಹೇಳಿಕೊಂಡರು. ನೂತನ ನಿರ್ಮಾಪಕ ಸಂಘದಅಧ್ಯಕ್ಷಡಿ.ಕೆ.ರಾಮಕೃಷ್ಣ, ಉಪಾಧ್ಯಕ್ಷ ಬಿ.ಕೆ.ರಾಮಮೂರ್ತಿ, ನಿರ್ದೇಶಕರುಗಳಾದ ತರುಣ್‌ಸುದೀರ್, ಗುರುದತ್, ಯೋಗಿ.ಬಿ.ರಾಜ್, ನವೀನ್, ಡಾ.ಸೂರಿ, ಎ.ಪಿ.ಅರ್ಜುನ್, ಪವನ್‌ಒಡೆಯರ್, ಚೇತನ್‌ಕುಮಾರ್, ಮಹೇಶ್‌ಕುಮಾರ್‌ತಂಡಕ್ಕೆ ಶುಭ ಹಾರೈಸಿದರು. ದುನಿಯವಿಜಯ್-ಕಿರಣ್ ಸಾಹಿತ್ಯದಗೀತೆಗೆಆಂತೋಣಿದಾಸ್‌ಧ್ವನಿಯಾಗಿದ್ದಾರೆ. ಉಳಿದ ನಾಲ್ಕು ಹಾಡುಗಳು ಸದ್ಯದಲ್ಲೆ ಹೊರಬರಲಿದೆ. ಹಿರಿಯ ಪೋಲೀಸ್ ಅಧಿಕಾರಿಗಳು,ಕೆಆರ್‌ಜಿಯಕಾರ್ತಿಕ್‌ಗೌಡ, ಸಾರಾ.ಗೋವಿಂದು, ಕೆ.ಮಂಜು, ವಸಿಷ್ಟಸಿಂಹ, ಗಾಯಕ ಸಂಚಿತ್‌ಹೆಗ್ಗಡೆ, ಅಪಾರ ಅಭಿಮಾನಿಗಳು ಕಾರ್ಯಕ್ರಮಕ್ಕೆಸಾಕ್ಷಿಯಾಗಿದ್ದರು.