Gadi Naadu.Film Press Meet.

Monday, January 06, 2020

273

ಬಿಡುಗಡೆಯ ಸನಿಹದಲ್ಲಿಗಡಿನಾಡು

ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆಉದ್ಬವವಾಗುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ  ಕೆಲವೊಂದು ಕ್ರಮಗಳನ್ನು ಕೈಗೊಂಡರೂಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದುಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.  ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆಹೋಗುವ ಕಥಾನಾಯಕಅಲ್ಲಿನಗಡಿ ಸಮಸ್ಯೆಗಳನ್ನು ಕಂಡುಗಡಿನಾಡ ಸೇನೆಯನ್ನುಕಟ್ಟುತ್ತಾನೆ.ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದದುಷ್ಟರುಗಲಾಟೆ ಮಾಡುತ್ತಾನೈಚ್ಯತನದಿಂದಕಾಣುತ್ತಾರೆ. 

ದಿನಗಳು ಉರುಳಿದಂತೆ ಇಬ್ಬರಲ್ಲಿ ಬಾಂದವ್ಯಉಂಟಾಗಿಆರೋಗ್ಯಕರ ಸಂಬಂದಆಗುವುದೇಕತೆಯ ಹೂರಣ.ಇದರಲ್ಲಿ ಮಹಾಜನ್ ವರದಿ ಅಂಶಗಳು ಇರಲಿದ್ದು, ಇದಕ್ಕೆ ಸಮುಜಾಯಷಿ ಕೊಡುತ್ತಾಉತ್ತರಕೊಡುವ ಪ್ರಯತ್ನ ಮಾಡಲಾಗಿದೆ.

ಪ್ರಭುಸೂರ್ಯ ನಾಯಕನಾಗಿಎರಡನೆಚಿತ್ರ.ಮರಾಠಿ ಹುಡುಗಿ, ವಾಗ್ಮಿ ಪಾತ್ರದಲ್ಲಿ ಸಂಚಿತಾಪಡುಕೋಣೆ ನಾಯಕಿ.ಚರಣ್‌ರಾಜ್,ಶೋಭರಾಜ್, ದೀಪಕ್‌ಶೆಟ್ಟಿ, ಮತ್ತುರಘುರಾಜುಖಳನಾಯಕರುಗಳಾಗಿ ನಟಿಸಿರುವುದು ವಿಶೇಷ. ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಘುಸೀರುಂಡೆ, ಮಮತ, ಪುಷ್ಟ ಮುಂತಾದವರುಅಭಿನಯವಿದೆ. ಶಿವಮೊಗ್ಗದ ನಾಗ್‌ಹುಣಸೋಡುರಚನೆ, ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳಿದ್ದಾರೆ. ನಾಲ್ಕು ಹಾಡುಗಳಿಗೆ ಎಲ್ವಿನ್‌ಜೋಶ್ವಾ ಸಂಗೀತ,  ಈ ಪೈಕಿ  ಸಂತೋಷ್‌ನಾಯಕ್ ಸಾಹಿತ್ಯದಕನ್ನಡ ಭಾಷೆಯಗೀತೆಗೆರಘುದೀಕ್ಷಿತ್‌ಕಂಠದಾನ ಮಾಡಿರುವುದು ಮತ್ತೋಂದು ಹಿರಿಮೆಯಾಗಿದೆ. ನಾಲ್ಕು ಸಾಹಸಗಳಿಗೆ ಥ್ರಿಲ್ಲರ್‌ಮಂಜು-ಡಿಫರೆಂಟ್‌ಡ್ಯಾನಿ ನಿರ್ದೇಶನ, ಸಂಕಲನ ವೆಂಕಿ, ಛಾಯಾಗ್ರಹಣಗೌರಿವೆಂಕಟೇಶ್-ರವಿಸುವರ್ಣ, ನೃತ್ಯಧನಂಜಯ್-ಹರಿಕೃಷ್ಣನಿರ್ವಹಿಸಿದ್ದಾರೆ.  ಅಲುಗಾಡದ ಬಂಡೆಅಂತಅಡಿಬರಹದಲ್ಲಿರುವಚಿತ್ರಕ್ಕೆಬೆಳಗಾವಿಯ ವಸಂತ್‌ಮುರಾರಿ ದಳವಾಯಿ ಅವರುಅಕ್ಷಯ್ ಫಿಲ್ಮ್ ಮೇಕರ‍್ಸ್ ಮುಖಾಂತರಬಂಡವಾಳ ಹೂಡಿರುವುದು ಹೊಸ ಅನುಭವ.ಯುಎ ಪ್ರಮಾಣಪತ್ರತೆಗೆದುಕೊಂಡಿರುವಚಿತ್ರವು ಸುಮಾರು ೧೦೦ ಕೇಂದ್ರಗಳಲ್ಲಿ ಜನವರಿ ೨೪ರಂದು ತೆರೆಗೆ ಬರುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,