Maduve maadri Serihogthane.Film Press Meet.

Tuesday, January 07, 2020

274

ಆಡು  ಭಾಷೆಚಿತ್ರದ  ಶೀರ್ಷಿಕೆ

ಮಾರುದ್ದ ಟೈಟಲ್‌ಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಕೊಂಡಿಯಾಗಿ ‘ಮದುವೆ ಮಾಡ್ರೀ ಸರಿ  ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದಎದುರು ಹಾಜರಾಗಿತ್ತು.  ತುರ್ತು ಕೆಲಸ ಇರುವಕಾರಣ ಮೈಕ್‌ತೆಗೆದುಕೊಂಡಕೃಷ್ಣಮೂರ್ತಿಕವತಾರ್‌ಯಾರದೋ ಪಾತ್ರೆಯಲ್ಲಿತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಪಾತ್ರ, ಒಂದುರೀತಿಯಲ್ಲಿ ಖೂಳ ಅನ್ನಲು ಬಹುದೆಂದು ಹೇಳಿಕೊಂಡು ನಿರ್ಗಮಿಸಿದರು. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಆ ಭಾಷೆಧಾಟಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.ನಮ್ಮಕಡೆಯಲ್ಲಿ ಲಗ್ನ ಮಾಡಿ ಸರಿ ಹೋಗ್ತಾನೆ ಎನ್ನುತ್ತಾರೆ. ನಿರ್ದೇಶಕರು ಮದುವೆ ಪದಯಾಕೆ ಬಳಸಿದರೆಂದು ತಿಳಿದಿಲ್ಲ. ನಾಯಕನತಾಯಿ ಗೆಳತಿಯಾಗಿ, ಸ್ನೇಹ ಸಂಸಾರಕ್ಕೆ ಎಷ್ಟು ಮುಖ್ಯವೆಂಬುದನ್ನುತನ್ನ ಮೂಲಕ ತೋರಿಸಲಾಗಿದೆಎಂದುಚಿತ್ಕಲಾಬಿರದಾರ್ ಮಾತಿಗೆ ವಿರಾಮತೆಗೆದುಕೊಂಡರು.

ವಿಠಲನಾಗಿ ಅಮ್ಮ ನೀಡಿದ ಕೆಲಸ ಮಾಡದೆ ಉಡಾಳನಾಗಿ ಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ,ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ  ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು.  ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ಹೇಳುವಂತೆ ಮುಖ್ಯ ಪಾತ್ರಗಳು ಹೊಸಬರಾಗಿದ್ದರೂ,  ಅನುಭವಿ ತಂತ್ರಜ್ಘರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್‌ಆಗಿದೆ. ಹೆಸರಿನಲ್ಲೇಎಲ್ಲವುಇರುವುದರಿಂದ ವಿವರ ಹೇಳುವ ಅಗತ್ಯವಿಲ್ಲ. ಕ್ಯಾಚಿಇರಲೆಂದು ಮದುವೆ ಪದ ಬಳಸಿದೆ. 

ಪ್ರತಿಯೊಬ್ಬರಜೀವನದಲ್ಲಿಕಲ್ಯಾಣಎನ್ನುವುದು ದಿಬ್ಬಣಇದ್ದಂತೆ. ಆ ಸಿದ್ದಾಂತಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು  ಎಂದರು.

ರಾಗ, ಸಂಗೀತಚೆನ್ನಾಗಿ ಬರಲೆಂದು ನಿರ್ದೇಶಕರು ಸ್ಥಳಕ್ಕೆ ಕರೆದುಕೊಂಡು ಹೋಗಿರುವುದು ಹೊಸ ಅನುಭವ. ಅಲ್ಲಿನ ಸೊಗಡಿಗೆತಕ್ಕಂತೆ ನ್ಯಾಯ ಒದಗಿಸಿದ್ದೇನೆಂಬ ನೆಮ್ಮದಿ ಇದೆಅಂತಾರೆ ಅವಿನಾಶ್‌ಬಾಸೂತ್ಕರ್. ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಲಹರಿವೇಲು  ಎಂದಿನಂತೆ ಶುಭ ಹಾರೈಸಿ, ಯೌವ್ವನದಲ್ಲಿಲಗ್ನವಾದಬಗೆಯನ್ನು ನೆನಪಿಸಿಕೊಂಡು ಸಭಾಂಗಣವನ್ನುನಗಿಸಿದರು. ಅಂದಹಾಗೆಇವರ ಸಂಸ್ಥೆಯಿಂದ ಕಳೆದ ಸಾಲಿನಲ್ಲಿ ನಾಲ್ಕು ಭಾಷೆಗಳು ಸೇರಿದಂತೆ ೧೮೪ ಚಿತ್ರಗಳ ಹಾಡುಗಳನ್ನು ತೆಗೆದುಕೊಂಡಿದೆಯಂತೆ. ತಾರಗಣದಲ್ಲಿರಮೇಶ್‌ಭಟ್, ಅರುಣ್‌ಬಾಲರಾಜ್, ಮಿಮಿಕ್ರಿಗೋಪಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಸುರೇಶ್‌ಬಾಬು, ಸಂಕಲನ ವೆಂಕಿ, ಸಾಹಸ ಕೌರವವೆಂಕಟೇಶ್, ನೃತ್ಯರಾಮು-ಕಿಶೋರ್ ಮತ್ತುಡಾ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಗೋಪಿಕೆರೂರ್‌ಲೇಖನಿಯಿಂದ ಸಾಹಿತ್ಯಒದಗಿಬಂದಿದೆ. ಗಂಗಾವತಿಯಉದ್ಯಮಿಶಿವರಾಜ್ ಲಕ್ಷಣರಾವ್‌ದೇಸಾಯಿಎಸ್.ಎಲ್.ಡಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವುದು ನೂತನ ಪ್ರಯತ್ನ. ನಾಯಕಿಆರಾಧ್ಯ ಅನುಪಸ್ಥಿತಿಗೆ ಕಾರಣವನ್ನುನಾವು  ಕೇಳಲಿಲ್ಲ  ಅವರು  ಹೇಳಲಿಲ್ಲ. 

 

Copyright@2018 Chitralahari | All Rights Reserved. Photo Journalist K.S. Mokshendra,