ಸಿನಿಮಾ ನೋಡಿರಿದುಬಾರಿ ಬಹುಮಾನ ತಮ್ಮದಾಗಿಸಿಕೊಳ್ಳಿ
ಜನರನ್ನುಚಿತ್ರಮಂದಿರದತ್ತ ಸೆಳೆಯಲು ನಾನಾ ರೀತಿಯ ವಿನೂತನ ಪ್ರಯತ್ನಗಳನ್ನು ಸಿನಿಮಾತಂಡವು ಮಾಡುತ್ತಾಬಂದಿದೆ. ಇದುಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ. ನಾವು ಹೇಳಹೂರಟಿರುವುದು ‘ಶ್ರೀ ಭರತ ಬಾಹುಬಲಿ’ ಚಿತ್ರದಕುರಿತಂತೆ.ಯಸ್, ಐಶ್ವರ್ಯಡೆವಲಪರ‍್ಸ್ ಮಾಲೀಕ ಶಿವಪ್ರಕಾಶ್ ಆರುಕೋಟಿಖರ್ಚು ಮಾಡುವುದರ ಮೂಲಕ ಪ್ರಥಮಅನುಭವಎನ್ನುವಂತೆನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್‌ಆಗಿದ್ದು, ಯಶ್ ತುಣುಕುಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.ಜನವರಿ ೧೭ರಂದು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರು ಪ್ರೇಕ್ಷಕರಿಗೆಕೋಟಿ ಬಹುಮಾನ ನೀಡಲು ನಿರ್ಣಯತೆಗೆದುಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಬರುವ ಪ್ರತಿಯೊಬ್ಬರಿಗೂಟಿಕೆಟ್‌ಜೊತೆಗೆಒಂದುಕೂಪನ್‌ಎರಡು ವಾರಗಳವರಗೆ ಕೊಡಲಾಗುತ್ತದೆ. ನಂತರ ಲಕ್ಕಿಡ್ರಾದಲ್ಲಿಆಯ್ಕೆಯಾದವರಿಗೆಕಾರು, ಚಿನ್ನವನ್ನು ನೀಡಲಾಗುವುದು. ಇದಕ್ಕಾಗಿಐದು ಲಕ್ಷದ ೧೦ ಕಾರುಗಳು ಮತ್ತುಇದೇ ಮೌಲ್ಯದಚಿನ್ನ.ಒಟ್ಟು ೨೦ ಮಂದಿಗೆ ಅದೃಷ್ಟದ ಸೌಲಭ್ಯ ಸಿಗುವ ಅವಕಾಶ ಕಲ್ಪಿಸಲಾಗಿದೆ.ಕತೆ ಬಗ್ಗೆ ತಂಡವುಎಲ್ಲವನ್ನುಗೌಪ್ಯವಾಗಿಟ್ಟಿದೆ.
ಮೂವತ್ತೈದು ಚಿತ್ರಗಳಿಗೆ ಸಂಭಾಷಣೆ, ಮಾಸ್ಟರ್ ಪೀಸ್‌ಚಿತ್ರ ನಿರ್ದೇಶನ ಮಾಡಿರುವ ಮಂಜುಮಾಂಡವ್ಯರಚನೆ,ಚಿತ್ರಕತೆ,ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ,ಒಂದುಗೀತೆಗೆಗಾಯನ,ಆಕ್ಷನ್‌ಕಟ್ ಹೇಳುವ ಜೊತೆಗೆ ಮೊದಲಬಾರಿ ನಾಯಕನಾಗಿ ಭರತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಾಹುಬಲಿಯಾಗಿಚಿಕ್ಕಣ್ಣ.ಅನಿವಾಸಿಭಾರತೀಯಳಾಗಿ ಸಾರಾಹರೀಶ್ ಮತ್ತುಶ್ರೇಯಾಶೆಟ್ಟಿನಾಯಕಿಯರು. ಭರತನತಂದೆಯಾಗಿ ಶ್ರೀನಿವಾಸಮೂರ್ತಿ, ಕವಲುದಾರಿಯ ರಿಶಿ, ಅಚ್ಯುತ್‌ರಾವ್, ಶೃತಿಪ್ರಕಾಶ್, ಬಾಹುಬಲಿ ಅಪ್ಪನಾಗಿಕರಿಸುಬ್ಬು, ಉಳಿದಂತೆ ಪುಷ್ಪಸ್ವಾಮಿ, ನಿಖಿತಾದತ್ತೋಡಿ,ಭವ್ಯಾ, ತೇಜ್‌ರಾಜ್, ಜಾನ್‌ಕೋಕೇನ್, ಅನಂತು, ಪ್ರಶಾಂತ್, ಪ್ರಖ್ಯಾತ್, ಪುಟಾಣಿಗಳಾದ ಗೀತಾ, ಆರಾಧ್ಯ ಮುಂತಾದವರು ನಟಿಸಿದ್ದಾರೆ. ಪ್ರಾರಂಭದಕತೆಗೆಉಪೇಂದ್ರ ಮುನ್ನಡಿ ಹೇಳಿರುವುದು ವಿಶೇಷ.ಸಾಹಿತ್ಯಕ್ಕೆ ಸಂಗೀತ ಒದಗಿಸಿರುವ ಮಣಿಕಾಂತ್‌ಕದ್ರಿ ಚೂಚ್ಚಲಬಾರಿ ಪೋಲೀಸ್‌ಅಧಿಕಾರಿಯಾಗಿಕ್ಯಾಮಾರ ಮುಂದೆ ನಿಂತಿದ್ದಾರೆ.ಛಾಯಾಗ್ರಹಣ ಪರ್ವಿಜ್.ಕೆ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ವಿಜಯ್-ಮಾಸ್‌ಮಾದ-ವಿನೋಧ್, ನೃತ್ಯಕಲೈಕುಮಾರ್-ಮುರಳಿ, ಕಲೆ ಶಿವಕುಮಾರ್-ಅರುಣ್‌ಸಾಗರ್ ನಿರ್ವಹಿಸಿದ್ದಾರೆ. ವಾಹನ, ಒಡವೆ ಪಡೆಯಬಯಸುವವರು ಭಬಾನೋಡಬಹುದು.