Dinga.Film Audio Rel.

Saturday, January 04, 2020

739

ಡಿಂಗನಿಗೆಅರ್ಜುನ್‌ಜನ್ಯಾ ಸಾಥ್

       ವಿನೂತನಕತೆಇರುವ ‘ಡಿಂಗ’ ಚಿತ್ರಕ್ಕೆ ಸಾಹಿತಿಡಾ.ನಾಗೇಂದ್ರಪ್ರಸಾದ್ ಸಲಹೆ, ಪ್ರೋತ್ಸಾಹ ನೀಡಿದ್ದಾರೆಂದುತಂಡವು ಹೇಳಿಕೊಂಡಿತ್ತು.  ಇವರದೆ ಸಾಹಿತ್ಯದಗೀತೆಯು ವೈರಲ್‌ಆಗಿದ್ದು ಪ್ಲಸ್ ಪಾಯಿಂಟ್‌ಆಗಿದೆ.ಜನರಿಗೆ ಮೊದಲ ಆಹ್ವಾನಪತ್ರಿಕೆ ಹಾಡುಗಳು ಅಂತಾರೆ. ಅದರಂತೆ ಶನಿವಾರಚಾಮುಂಡೇಶ್ವರಿ ಸ್ಟುಡಿಯೋದಲ್ಲಿಆಡಿಯೋ ಸಿಡಿ ಅನಾವರಣಗೊಂಡಿತು.ಅತಿಥಿಯಾಗಿ ಆಗಮಿಸಿದ್ದ ಅರ್ಜುನ್‌ಜನ್ಯಾ ಮಾತನಾಡಿ ಐ ಫೋನ್‌ದಲ್ಲಿ ಸಿನಿಮಾ ಮಾಡಿರುವುದು ಅಷ್ಟು ಸುಲಭವಲ್ಲ. ಗೀತೆ ಹಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆಥ್ಯಾಂಕ್ಸ್.ಜೀವನದಲ್ಲಿ ಹೀರೋಆದವರು ಮಾತ್ರಇಂತಹ ಕೆಲಸ ಮಾಡಲು ಸಾದ್ಯವೆಂದುಅಭಿಪ್ರಾಯಪಟ್ಟರು.ಇವರ ನುಡಿಗೆ ಧ್ವನಿಗೂಡಿಸಿದ ನಾಗೇಂದ್ರಪ್ರಸಾದ್ ನಿರ್ಮಾಪಕರಲ್ಲಿಒಬ್ಬರಾಗಿರುವಡಾ.ಮೂಗೂರುಮಧು ದೀಕ್ಷಿತ್‌ಕ್ರಾಂತಿಕಾರಿಆಲೋಚಕರು.ಪುರೋಹಿತಿರಕ್ರಿಕೆಟ್ ಪಂದ್ಯಏರ್ಪಾಟು ಮಾಡಿಸಿದ್ದರು.ಆಧ್ಯಾತ್ಮ-ವಿಜ್ಘಾನಎರಡನ್ನು ವೈಜ್ಘಾನಿಕವಾಗಿ ಹೇಳಿಕೊಡುತ್ತಾರೆ.ನಾಯಿ ಬಗ್ಗೆ ತಾಯಿತರ ಪ್ರೀತಿಇಟ್ಟುಕೊಂಡು ಹಾಡು ಬರೆಯಲಾಗಿದೆಎಂದರು.

ಐವತ್ತೈದುಲಕ್ಷಖರ್ಚುಆಗಿದೆ. ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ.ಭಾರತದಲ್ಲಿಇದೇ ಮೊದಲುಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುರದಲ್ಲಿಚಿತ್ರೀಕರಣ ನಡೆಸಲಾಗಿದೆ.ಇಂತಹ ಸಾಹಸಕ್ಕೆ ಧೈರ್ಯ ಮಾಡಿರುವಅಭಿಷೇಕ್‌ಜೈನ್‌ರಚನೆ, 

ನಿರ್ದೇಶನ ಮತ್ತುಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕಥಾನಾಯಕಕ್ಯಾನ್ಸರ್‌ರೋಗಿ. ಸಾಯುವಮುಂಚೆ ತಾನು ಸಾಕಿರುವ ನಾಯಿಯನ್ನುತನ್ನಷ್ಟೇಅದನ್ನು ಪ್ರೀತಿ ಮಾಡುವ ವ್ಯಕ್ತಿಗೆಕೊಡಬೇಕೆಂಬುದು ಅವನ ಕೊನೆ ಆಸೆಯಾಗಿರುತ್ತದೆ.ಕೇವಲ ಶ್ವಾನವನ್ನುಇಷ್ಟಪಟ್ಟರೆ ಸಾಲದು.ಅದಕ್ಕೂಅವರಿಗೂಜಾತಕ, ಬ್ಲಡ್‌ಗ್ರೂಪ್ ಸೇರಿದಂತೆಬೇರೆರೀತಿಯ ಹೊಂದಾಣಿಕೆಗಳು ಸರಿಹೊಂದಬೇಕು.ಇವೆಲ್ಲಾವನ್ನು ಆವನು ಹುಡುಕುವುದಕ್ಕೆಏನೆಲ್ಲಾಕಷ್ಟಪಡುತ್ತಾನೆಎಂಬುದು ಸಿನಿಮಾದ ತಿರುಳಾಗಿದೆ.

ಆರವ್‌ಗೌಡನಾಯಕ. ಪಾತ್ರಕ್ಕೆತಕ್ಕಂತೆ ಸಿಗರೇಟು ಬಳಕೆ, ಪಬ್‌ಗೆ ಹೋಗುವ ಹವ್ಯಾಸ, ಆಗತಾನೆ ಪ್ರೀತಿಗೆ ಬಿದ್ದು ಭಾವನೆಗಳನ್ನು ನೋಡಿರುವ, ಏಳು ಬೀಳುಗಳನ್ನು ಕಂಡಿರುವ. ಮದ್ಯ ವಯಸ್ಸಿನ ಅನುಭವಿ ಮಹಿಳೆ ಹೀಗೆ ಎರಡು ಶೇಡ್‌ಗಳಲ್ಲಿಅನುಷಾರೋಡ್ರಿಗಸ್‌ನಾಯಕಿ. ಉಳಿದಂತೆ ಗಣೇಶ್‌ರಾವ್, ರಾಘುರಮಣಕೊಪ್ಪ, ನಾಗೇಂದ್ರಷಾ, ವಿಜಯ್‌ಈಶ್ವರ್ ನಟನೆಇದೆ. ಶುದ್ದೋರಾಯ್ ಸಂಗೀತಕ್ಕೆ ನವೀನ್‌ಸಜ್ಜು, ಸಂಚಿತ್‌ಹೆಗ್ಡೆ,ಅನುರಾಧಭಟ್‌ಕಂಠದಾನ ಮಾಡಿದ್ದಾರೆ. ಹನ್ನೋಂದು ಸಿನಿಮಾ ಮೋಹಿಗಳು  ಶ್ರೀ ಮಾಯಾಕರ ಪ್ರೊಡಕ್ಷನ್ಸ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯು ಪ್ರಮಾಣಪತ್ರ ಪಡೆದುಕೊಂಡಿರುವ ಸಿನಿಮಾವುಜನವರಿ ಕೊನೆ ದಿನದಂದುತೆರೆಗೆ ಬರಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,