Raaju Jeams Bond.Film Press Meet.

Friday, January 10, 2020

293

ಜೇಮ್ಸ್ಬಾಂಡ್ರಾಜುವಿನ ಮಥರಗಳು

ಫಸ್ಟ್‌ರ‍್ಯಾಂಕ್‌ರಾಜು, ರಾಜುಕನ್ನಡ ಮೀಡಿಯಂ ಚಿತ್ರಗಳ ನಾಯಕಗುರುನಂದನ್ ಈಗ ‘ರಾಜುಜೇಮ್ಸ್ ಬಾಂಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ ೭೦ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ  ಹಾಗೂ ಮೊದಲುಎನ್ನುವಂತೆ ಲಂಡನ್ ಸೆಂಟ್ರಲ್‌ರಸ್ತೆ, ಒಟ್ಟಾರೆ೫೦ ದಿನಗಳ ಕಾಲ ಚಿತ್ರೀಕರಣ ನಡೆಸಿ, ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ.  ಕತೆಯಕುರಿತು ಹೇಳುವುದಾದರೆ ಸುವರ್ಣಪುರಊರಿನಲ್ಲಿರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್‌ದಲ್ಲಿಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ಮತ್ತೋಂದುಕಡೆಅಪ್ಪ ಮಾಡಿದ ಮನೆಯ ಸಾಲ ತೀರಿಸಲು ಪಣತೊಡುತ್ತಾನೆ. ಅದೇಊರಿನ ಶಿಕ್ಷಕಿ ಮೇಲೆ ಪ್ರೀತಿ ಹುಟ್ಟುತ್ತದೆ. ಮುಂದೆ ಶಾಸಕನಿಂದಈತನಜೀವನದಲ್ಲಿಏರುಪೇರುಆಗುತ್ತದೆ.ಕೊನೆಗೆ ಹುದ್ದೆಗಿಟ್ಟಿಸುತ್ತಾನಾ?ಪ್ರೀತಿಸಿದ ಹುಡುಗಿ ಸಿಗುತ್ತಾಳಾ?ಶಾಸಕನೊಂದಿಗೆ ನ್ಯಾಯಕ್ಕಾಗಿ ಹೋರಾಡುತ್ತಾನಾ?ಹೀಗೆ ತನ್ನ ಮುಂದಿರುವ ಮೂರನ್ನುತನ್ನಿಚ್ಚೆಯಂತೆ ಪಡೆಯುವನೇಅಥವಾಜೇಮ್ಸ್‌ಬಾಂಡ್ ಆಗುವನೇ ಎಂಬುದುಒಂದು ಏಳೆಯ ಸಾರಾಂಶವಾಗಿದೆ.ಮುಕ್ಕಾಲು ಭಾಗ ಹಾಸ್ಯ, ಕಾಲ ಭಾಗ ಭಾವನೆಗಳು ತುಂಬಿಕೊಂಡಿದೆ.

ಮೃದುಲಾ ನಾಯಕಿಯಾಗಿಆರಂಗೇಟ್ರಂ, ಮಾವನಾಗಿಅಚ್ಯುತ್‌ಕುಮಾರ್, ಗೆಳಯನಾಗಿ ಚಿಕ್ಕಣ್ಣ, ಶಾಸಕನಾಗಿ ರವಿಶಂಕರ್ ಉಳಿದಂತೆ ತಬಲನಾಣಿ, ಜೈಜಗದೀಶ್, ವಿಜಯ್‌ಚೆಂಡೂರ್, ಮಂಜುನಾಥಹೆಗ್ಡೆ, ಜಯಸಿಂಹನ್ ನಟಿಸಿದ್ದಾರೆ. ಅನೂಪ್‌ಸೀಳನ್ ಸಂಗೀತದ  ನಾಲ್ಕು ಹಾಡುಗಳ ಪೈಕಿ ಎರಡರಲ್ಲಿಚಂದನ್‌ಶೆಟ್ಟಿ, ಅಂತೋಣಿದಾಸ್‌ಧ್ವನಿಯಾಗಿದ್ದಾರೆ. ಸಂಕಲನ  ಅಮಿತ್‌ಜವಾಲ್ಕರ್, ಸಾಹಸ ಮಾಸ್ ಮಾದ, ನೃತ್ಯ ಮುರಳಿ ಅವರದಾಗಿದೆ. ಅನಿವಾಸಿ ಭಾರತಿಯರಾದ ಲಂಡನ್ ನಿವಾಸಿ ಕನ್ನಡಿಗಮಂಜುನಾಥ್‌ವಿಶ್ವಕರ್ಮಎರಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದು, ಅದರಂತೆಕೆನಡಾದಲ್ಲಿಕನ್ನಡ ಸಿನಿಮಾಗಳನ್ನು ವಿತರಣೆ ಮಾಡುತ್ತಿರುವಕಿರಣ್‌ಬಾರ್ತೋಡ್‌ಸೇರಿಕೊಂಡುಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆಡಿಯೋಅನಾವರಣ, ಫೆಬ್ರವರಿಯಲ್ಲಿಚಿತ್ರವನ್ನು ಬಿಡುಗಡೆಮಾಡಲುತಂಡವು ಸನ್ನಾಹ ಮಾಡಿಕೊಂಡಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,