Sri Bharath Bahubali.Movie Press Meet.

Friday, January 10, 2020

291

ಶ್ರೀ ಭರತ ಬಾಹುಬಲಿಗೆ  ಚರಣ್ರಾಜ್  ಪುತ್ರ

ಕನ್ನಡಚಿತ್ರರಂಗ ಹಿರಿಯ ನಟಚರಣ್‌ರಾಜ್ ಪುತ್ರತೇಜ್‌ಚರಣ್‌ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್‌ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ನಾಗರಹಾವುದಲ್ಲಿಜಯಂತಿ ಕಾಣಿಸಿಕೊಂಡಂತೆಎನ್ನಬಹುದು.ಕಳೆದವಾರ ಭರತನಾಗಿ ಮಂಜುಮಾಂಡವ್ಯ, ಬಾಹುಬಲಿಯಾಗಿಚಿಕ್ಕಣ್ಣ ನಟಿಸಿದ್ದಾರೆಂದು ತಂಡವು ಹೇಳಿಕೊಂಡಿತ್ತು.ಇದು ಹೇಗೆ ಸಾದ್ಯವೆಂದುಅಚ್ಚರಿ ಪಡುವಅಗತ್ಯವಿಲ್ಲ. ಸಿನಿಮಾದಲ್ಲಿಇವೆರಡು ಪಾತ್ರಗಳು  ಪೌರಾಣಿಕದಲ್ಲಿ ಬರಲಿದೆ. ಮೊದಲು ಪುರಾಣದ ಹಿನ್ನಲೆಯಲ್ಲಿ ಬಾಹುಬಲಿ ಪಾತ್ರವನ್ನುಉಪೇಂದ್ರ ಮಾಡಬೇಕಾಗಿತ್ತು.ಅವರುಚುನಾವಣೆಯಲ್ಲಿ ಬ್ಯುಸಿ ಇದ್ದಕಾರಣ ಆಗಲಿಲ್ಲ. ಕೊನೆಗೆ ಕಟ್ಟು ಮಸ್ತಾಗಿ ಇರುವ ಹುಡುಗನನ್ನುತಲಾಷ್ ಮಾಡುತ್ತಿರುವ ಸಂದರ್ಭದಲ್ಲಿಅಕಸ್ಮಾತ್‌ಚರಣ್‌ರಾಜ್ ಸಿಕ್ಕಿದ್ದಾರೆ. ಹಾಗೆ ನಾಯಕ, ನಿರ್ದೇಶಕ, ಸಂಭಾಷಣೆ,ಸಾಹಿತ್ಯ ಬರೆದಿರುವ ಮಂಜುಮಾಂಡವ್ಯ ಬಳಿ ಉಭಯಕುಶಲೋಪರಿ ನಡೆಸುತ್ತಿರುವಾಗ ಮಗನ ಫೋಟೋ ತೋರಿಸಿದ್ದಾರೆ.

ಇಂತಹ ಹುಡುಗನೇ ಬೇಕೆಂದುಕೊಂಡುಅವರನ್ನು ಒಪ್ಪಿಸಿದ್ದು ಅಲ್ಲದೆಚಿತ್ರೀಕರಣ ಮುಗಿಸಿದ್ದಾರೆ. ಹತ್ತು ನಿಮಿಷಪಾತ್ರವಾದರೂಕತೆಗೆ ಪ್ರಮುಖವಾಗಿ ಬರುತ್ತದೆ. ಅವರು ಬಾಹುಬಲಿಯಾಗಿ ಮಲ್ಲಯುದ್ದ ಮಾಡಿದ್ದಾರೆ.ಸದರಿ ಸನ್ನಿವೇಶಕ್ಕೆ ಸುಮಾರು ೯೦ ಲಕ್ಷಖರ್ಚುಆಗಿರುತ್ತದೆ.ಮೊನ್ನೆತಾನೆ ಪುತ್ರನೊಂದಿಗೆ ಆಗಮಿಸಿದ್ದ ಚರಣ್‌ರಾಜ್‌ತನಗೆ ಸಿಕ್ಕ ಪ್ರೋತ್ಸಾಹ ಅವನಿಗೂ ಸಿಗಲು ಮಾದ್ಯಮದ ಸಹಕಾರಬೇಕೆಂದುಕೋರಿದರು.ಇನ್ನು ಪ್ರಚಾರಕ್ಕೆಂದೇ  ನಿರ್ಮಾಪಕ ಶಿವಪ್ರಕಾಶ್  ಒಂದುಕೋಟಿ ಮೀಸಲಿರಿಸಿದ್ದಾರೆ. ಸಿನಿಮಾಟಿಕೆಟ್‌ಖರೀದಿಸುವವರಿಗೆಒಂದುಕೂಪನ್ ನೀಡಲಿದೆ.ಅದನ್ನು ವೀಕ್ಷಕರುಟಿಕೆಟ್‌ಜೊತೆಗೆ ಸುರಕ್ಷಿತವಾಗಿಕೂಪನ್‌ನ್ನುಇಟ್ಟುಕೊಂಡಿರಬೇಕು. ಲಕ್ಕಿ ಡ್ರಾದಲ್ಲಿಆಯ್ಕೆಯಾದವರಿಗೆಕಾರು, ಚಿನ್ನ  ನೀಡಲಾಗುವುದು. ಈ ಆಫರ್ ಬಿಡುಗಡೆಯಾದಎರಡು ವಾರದವರೆಗೆ ಸೀಮಿತ.ಇದಕ್ಕಾಗಿ ೨೫ ಲಕ್ಷಖರ್ಚು ಮಾಡಿ ೮೦ ಲಕ್ಷಕೂಪನ್  ಮುದ್ರಣ ಮಾಡಿಸದ್ದುಅಲ್ಲದೆ, ಐದು ಲಕ್ಷ ಬಾಳುವ ೧೦ ಚಿನ್ನದ ಒಡೆವೆಗಳು, ೧೦ ಕಾರುಗಳನ್ನು ಖರೀದಿಸಿದೆ. ಶುಕ್ರವಾರದಿಂದ ಸಿನಿಮಾವು ಬಿಡುಗೆರಯಾಗಲಿದ್ದು, ಅದೃಷ್ಟಶಾಲಿಗಳು ಯಾರಾಗಬಹುದೆಂದು ಹದಿನೈದು ನಂತರ ತಿಳಿಯಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,