Naavelru.Movie Press Meet.

Friday, January 10, 2020

309

ಬಾಹುಬಲಿ  ತಂತ್ರಜ್ಘರ  ನಾವೆಲ್ರೂ

ವಿಶ್ವದಾದ್ಯಂತ ಹೆಸರು ಮಾಡಿದ್ದತೆಲುಗುಚಿತ್ರ ‘ಬಾಹುಬಲಿ’ಗೆ ಕೆಲಸ ಮಾಡಿರುವಇಬ್ಬರುತಂತ್ರಜ್ಘರು  ‘ನಾವೆಲ್ರೂ’ ಸಿನಿಮಾದಲ್ಲಿತೊಡಗಿಕೊಂಡಿದ್ದಾರೆ.  ಸಹ ಛಾಯಾಗ್ರಾಹಕಕುಶೇಂದ್ರರೆಡ್ಡಿ ಮತ್ತು ನೃತ್ಯ ನಿರ್ದೇಶಕ ಪ್ರೇಮ್‌ರಕ್ಷಿತ್‌ಒಂದು ಹಾಡಿಗೆಕೋರಿಯೋಗ್ರಾಫ್ ಮಾಡುವುದಾಗಿ ಹೇಳಿ, ನಂತರ ಗೀತೆಗಳು ಚೆನ್ನಾಗಿರುವುದಕ್ಕೆ ಮೂರು ಹಾಡುಗಳಿಗೆ ಕಲಾವಿದರನ್ನು ಕುಣಿಸಿರುವುದು ವಿಶೇಷ. ಪ್ರಸಕ್ತಯುವಕರುಜೀವನವನ್ನುಅರ್ಧಅರ್ಥ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಹಾಫ್ ಬಾಯಲ್ಡ್‌ಅಂತಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮದುಡಿಮೆ ನಮಗೆ ಸಿಗೋದಿಲ್ಲ. ಯುವಕರಿಗೆ ಹೇಳೋರು, ಕೇಳೋರು, ತಿದ್ದೋರುಇಲ್ಲದಿದ್ದರೆಅವರುಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗೆ ನಾಲ್ಕು ಹುಡುಗರಜೀವನದಲ್ಲಿ ಏನು ನಡೆಯುತ್ತೆ?ಯಾವತರಹಇರುತ್ತಾರೆ?ಇಂತಹ ಅಂಶಗಳನ್ನು ಚಿತ್ರವು ಒಳಗೊಂಡಿದೆ.

ಅನಾಗತ ಹುಡುಗರುಗಳಾಗಿ ದೀಪಕ್, ಹಂಪೇಶ್‌ಅರಸೂರು, ಮಂಜುಬದ್ರಿ ಮತ್ತು ಸುನಿಲ್‌ಕುಮಾರ್. ನಾಯಕಿಯರುಗಳಾಗಿ ಮಾತಂಗಿಪ್ರಸನ್ನ, ವಿನ್ಯಾಶೆಟ್ಟಿಇವರಿಬ್ಬರಿಂದಲೇಕತೆಗೆತಿರುವುಕೊಡುತ್ತದೆ. ಡವ್‌ರಾಜಚಿಕ್ಕಪ್ಪನಾಗಿತಬಲನಾಣಿ ನಟಿಸುವುದರಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ. ಉಳಿದಂತೆ ಪವನ್‌ಕುಮಾರ್, ದೇವರಾಜ್‌ಕಾಪಿಕರ್, ಅನಂತ್ ಮುಂತಾದವರು ನಟಿಸಿದ್ದಾರೆ.ಬಿ.ಶಿವರಾಜ್‌ವೆಂಕಟಾಚ್ಚ ನಿರ್ದೇಶಕರಾಗಿ ಹೊಸ ಅನುಭವ. ಚೇತನ್‌ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ವಿಜೇತ್‌ಕೃಷ್ಣ ಸಂಗೀತವಿದೆ.ಇಲ್ಲಿ ಹೇಳಬೇಕಾಗಿರುವುದು ನಿರ್ಮಾಪಕರ ವಿಷಯ.ದಾವಣಗೆರೆಯಕೆ.ಅಮೀರ್‌ಅಹಮದ್‌ಟ್ರಾವಲ್‌ಏಜನ್ಸಿ, ರೈತ, ಉದ್ಯಮಿಯಾಗಿಅಪ್ಪಟರವಿಚಂದ್ರನ್‌ಅಭಿಮಾನಿ. ಚಿತ್ರರಂಗಕ್ಕೆ ಬರಬೇಕೆಂಬ ಬಯಕೆ ಹೊಂದಿದ್ದರು. ಒಮ್ಮೆತಂಡವು  ಶೂಟಿಂಗ್ ಮಾಡುವ ಸಲುವಾಗಿ ನಿರ್ಮಾಪಕರಊರಿಗೆ ಭೇಟಿ ನೀಡಿಅಲ್ಲಿನ ಹೋಟೆಲ್‌ವೊಂದರಲ್ಲಿ ಹಣದಕೊರತೆಇರುವುದರಕುರಿತಂತೆಚರ್ಚೆ ನಡೆಸುತ್ತಿದ್ದಾರೆ. ಇದನ್ನು ಕೇಳಿಸಿಕೊಂಡ ಅಮೀರ್‌ಅಹಮದ್‌ಖುದ್ದಾಗಿಅವರ ಬಳಿ ಬಂದುಯೋಚಿಸಬೇಡಿ, ನಾನು ನಿರ್ಮಾಣ ಮಾಡುತ್ತೆನೆಂದು ಮುಂಗಡಎರಡು ಲಕ್ಷ ನೀಡಿದ್ದಾರೆ. ಮುಂದೆ ಸಿನಿಮಾವುಇದೇ ೨೪ರಂದು ತೆರೆಗೆ ಬರುವ ಹೊತ್ತಿಗೆ ಸುಮಾರು ಮೂರುಕೋಟಿಖರ್ಚಾಗಿದೆಅಂತಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,