Kaliveera.Film Press Meet.

Saturday, January 11, 2020

313

ಸಕಲಕಲಾವಲ್ಲಭ  ಏಕಲವ್ಯ

ಮಹಾಭಾರತದಲ್ಲಿ ಬರುವ ಏಕಲವ್ಯ ಬಿಲ್ಲುವಿದ್ಯೆಯಲ್ಲಿ ಪರಣಿತರಾಗಿದ್ದನು.ಉತ್ತರಕರ್ನಾಟಕದಆಧುನಿಕಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಅದಕ್ಕಾಗಿಯೇಇಂಡಿಯನ್ ವಾರಿಯರ್‌ಎಂದುಅಡಿಬರಹದಲ್ಲಿ ಹೇಳಲಾಗಿದೆ. ನಿರ್ದೇಶಕ  ಅವಿನಾಶ್‌ಭೂಷಣ್‌ಇವರಿಗೆ ಸೂಟ್‌ಆಗುವಂತೆಕತೆಯನ್ನು  ಸೃಷ್ಟಿಸಿದ್ದಾರೆ. ಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು  ಸಿದ್ದಪಡಿಸಿರುವುದು ವಿಶೇಷ. ಆದರೆಚಿತ್ರದ ಸಾರಾಂಶವನ್ನುತಂಡವುಒಂದು ಏಳೆಯನ್ನು ಬಿಟ್ಟುಕೊಡದೆಗುಟ್ಟನ್ನುಕಾಪಾಡಿಕೊಂಡಿದೆ. ೩೦ ವರ್ಷಅನುಭವ, ೬೦೦ ಚಿತ್ರಗಳಿಗೆ ಆಕ್ಷನ್  ಮಾಡಿಸಿರುವ ಡಿಫರೆಂಟ್‌ಡ್ಯಾನಿ ಇವರ ಸಾಹಸ ಕಂಡು ಸೋಜಿಗಗೊಂಡಿದ್ದಾರೆ. ಅದಕ್ಕಾಗಿ ಬಾಳೆಹಣ್ಣು ಮಂಡಿ, ಮಳೆ, ಬೆಂಕಿ, ಕಲರಿಯಲ್ಲಿ ಫೈಟ್ಸ್‌ಗಳನ್ನು ಮಾಡಿಸಿದ್ದಾರೆ.

ರಿಯಲ್,ರೀಲ್‌ದಲ್ಲಿಅನಾಥನಾಗಿರುವ ನಾಯಕಕಾಡಿನ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿರಶ್ರೀಅಂಚನ್ ನಾಯಕಿ.ವಕೀಲೆಯಾಗಿ ಪಾವನಗೌಡ, ಭ್ರಷ್ಟ ಪೋಲೀಸ್‌ಅಧಿಕಾರಿಯಾಗಿ ನೀನಾಸಂಅಶ್ವಥ್, ನಾಯಕನಂತಯೇಇರುವತಬಲನಾಣಿ ಪ್ರೋತ್ಸಾಹ, ಸಲಹೆ ನೀಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ದಾಂಡೇಲಿ ಅರಣ್ಯ ಪ್ರದೇಶಗಳು, ಶಿವಮೊಗ್ಗ, ಕನಕಪುರ, ಬೆಂಗಳೂರು ಹಾಗೂ ಮುತ್ತ್ತೆತ್ತಿ  ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಡಾ.ನಾಗೇಂದ್ರಪ್ರಸಾದ್, ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತದಜೊತೆಗೆ ಹಾಡಿಗೆ ಲೇಖನಿ ಹಿಡಿದಿದ್ದಾರೆ.  ಛಾಯಾಗ್ರಹಣ ಹಾಲೇಶ್.ಎಸ್., ಸಂಕಲನ ಎ.ಆರ್.ಕೃಷ್ಣ, ನೃತ್ಯ ಮುರಳಿ ನಿರ್ವಹಿಸಿದ್ದಾರೆ. ಹುಡುಗನ ಪ್ರದರ್ಶನ ನೋಡಿದ ನಾಲ್ವರು ಸಮಾನಮನಸ್ಕರಾಗಿರುವರಾಣೆಬೆನ್ನೂರಿನ ಶ್ರೀನಿವಾಸ್‌ಮತ್ತುಗೆಳಯರು ಸೇರಿಕೊಂಡುಜ್ಯೋತಿಆರ್ಟ್ಸ್ ಮುಖಾಂತರ ಬಂಡವಾಳ ಹೂಡಿರುವುದು ಹೊಸ ಅನುಭವ.

 

Copyright@2018 Chitralahari | All Rights Reserved. Photo Journalist K.S. Mokshendra,