Mane Maratakkide.Film 50 Days.

Saturday, January 11, 2020

325

ರಿಕ್ಕಿಚಿತ್ರಕ್ಕೆ ಮತ್ತೆ ಚಾಲನೆ

        ಹಾಸ್ಯಚಿತ್ರ‘ಮನೆ ಮಾರಟಕ್ಕಿದೆ’ ಯಶಸ್ವಿ ೫೦ ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದರಿಂದಖುಷಿಯಾಗಿರುವ ನಿರ್ಮಾಪಕಎಸ್.ವಿ.ಬಾಬು ಸಿನಿಮಾಕ್ಕೆದುಡಿದಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ನೀಡುವಕಾರ್ಯಕ್ರಮ ಹಮ್ಮಿಕೊಂಡಿದ್ದರು.  ಪ್ರಸಕ್ತ ಚಿತ್ರಗಳು ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿದೆ.ಈ ಸಿನಿಮಾವುಇತರೆ ಭಾಷೆಗಳ ಮಧ್ಯೆ ಸವಾಲನ್ನು ಸ್ವೀಕರಿಸಿ ಹಿಟ್‌ಆಗಿರುವುದು ಸಂತಸತಂದಿದೆ. ಕೇವಲ ಸಹಾಯಧನಕ್ಕೆಅಂತಲೇ ನಿರ್ಮಾಣ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು, ಚಿತ್ರರಂಗಎರಡುಒಂದೇ.ನಿರ್ಮಾಪಕರುಕೊಡುಗೈದಾನಿ ಅಂತ ಸಾ.ರಾ.ಗೋವಿಂದು ಶ್ಲಾಘಿಸಿದರು.

ನಿರ್ದೇಶನ ಮಾಡಿದಎರಡು ಚಿತ್ರಗಳು ಹಿಟ್‌ಆಗಿದ್ದರೂ ಫಲಕ ಸ್ವೀಕರಿಸಿರಲಿಲ್ಲ. ಇದೇ ಮೊದಲುಎನ್ನಬಹುದು.ಇಂತಹ ನಿರ್ಮಾಪಕರುಇದ್ದರೆ ಒಳ್ಳೆಯ ಸಿನಿಮಾತೆಗೆಯಬಹುದು.ಅವರುತಂತ್ರಜ್ಘರಿಗೆ ಪೂರ್ಣ ಸ್ವಾತಂತ್ರಕೊಡುತ್ತಾರೆ.ತಂಡವು ಸಹಕಾರ ನೀಡಿದ್ದರಿಂದಲೇ,ಇದರಯಶಸ್ಸುಅವರಿಗೂ ಸಲ್ಲಬೇಕುಅಂತಾರೆ ನಿರ್ದೇಶಕ ಮಂಜುಸ್ವಾರಾಜ್.

ರಿಶಬ್‌ಶೆಟ್ಟಿ ‘ರಿಕ್ಕಿ’ ಚಿತ್ರವನ್ನುಚೆನ್ನಾಗಿತೆಗೆದಿದ್ದರೂಜನರಿಗೆತಲುಪಲಿಲ್ಲ. ಅದಕ್ಕೆಂದೆ ಮರುಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.ಆ ಚಿತ್ರದ ಹಾಡುಗಳು ಹಿಟ್‌ಆಗಿತ್ತು.ಇಂದುಕಾರಿನಲ್ಲಿಅದನ್ನೇ ಕೇಳುತ್ತೆನೆ. ನಿರ್ದೇಶಕ, ರಕ್ಷಿತ್‌ಶೆಟ್ಟಿಇಂದುಖ್ಯಾತಿಗೊಂಡಿರುವುದರಿಂದ ಮತ್ತೆತರೆಗೆತರಲು ಸಿದ್ದತೆಗಳು ನಡೆಯುತ್ತಿದೆಎಂದು ನಿರ್ಮಾಪಕಎಸ್.ವಿ.ಬಾಬು ಹೇಳಿದರು. ಇವರ ಮಾತಿಗೆಧ್ವನಿಗೂಡಿಸಿದ ರಿಶಬ್‌ಶೆಟ್ಟಿಹನ್ನೊಂದು ವರ್ಷಗಳ ಅನುಭವದಲ್ಲಿಕತೆಯನ್ನು ಸಾಕಷ್ಟು ನಿರ್ಮಾಪಕರಿಗೆ ಹೇಳಲಾಗಿತ್ತು. ಸೂಕ್ತಸ್ಪಂದನೆಸಿಗಲಿಲ್ಲ. ಕೊನೆಗೆ ಇವರ ಬಳಿ ಬಂದಾಗಮುಂದೆ ನಿಂತಿದ್ದುಅಲ್ಲದೆಎಲ್ಲಾ  ವಿಧದಲ್ಲಿ ಸಹಕಾರ ನೀಡಿದರು.  ಕೆಲವೇ ನಿರ್ಮಾಪಕರಲ್ಲಿಇಂತಹವರು ಸಿಗುತ್ತಾರೆಂದು  ಅವರ ಬಗ್ಗೆ ಔನ್ನತ್ಯದ ಮಾತುಗಳನ್ನು ನುಡಿದರು.

ಕಲಾವಿದರುಗಳಾದ ಶಿವರಾಂ, ಚಿಕ್ಕಣ್ಣ, ರವಿಶಂಕರ್, ಗಿರಿ, ಕಾರುಣ್ಯರಾಮ್, ತಬಲನಾಣಿ, ನೀನಾಸಂಅಶ್ವಥ್, ರಾಜೇಶ್‌ನಟರಂಗ ಸಂಗೀತಗಾರಅಭಿಮನ್‌ರಾಯ್, ಗಾಯಕ ಹರಿಕೃಷ್ಣ ಮುಂತಾದವರುಗೌರವ ಫಲಕವನ್ನು ಸ್ವೀಕರಿಸಿದರು.

 

Copyright@2018 Chitralahari | All Rights Reserved. Photo Journalist K.S. Mokshendra,