ಕಿರುಚಿತ್ರ ಕೆ೩
ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಆಗುತ್ತಿದೆ.ಚಿತ್ರ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಹಿರಿತೆರೆಗೆ ಕೈ ಹಾಕುತ್ತಾರೆ. ಸ್ಟಾರ್ ನಿರ್ದೇಶಕಆರ್.ಚಂದ್ರುಗರಡಿಯಲ್ಲಿ ಪಳಗಿರುವ ಸಂಜಯ್ ‘ಕೆ೩’ಚಿತ್ರಕ್ಕೆಕತೆ ಬರೆದುಆಕ್ಷನ್‌ಕಟ್ ಹೇಳಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮೊನ್ನೆಚಿತ್ರದ ಪ್ರದರ್ಶನ ಏರ್ಪಡಿಸಿದ್ದು, ನಿರ್ದೇಶಕರುತಮ್ಮ ಮೊದಲ ಪ್ರಯತ್ನಕುರಿತು ಹೇಳಿದ್ದಿಷ್ಟು:
ಇದು ಮೂವತ್ತು ನಿಮಿಷದಕಿರುಚಿತ್ರವಾಗಿದೆ.ಕೆ೨ ಎನ್ನುವ ವಿಟಮಿನ್‌ಇದೆ.ನನ್ನಕಲ್ಪನೆಯಲ್ಲಿ ಕೆ೩ ಸೃಷ್ಟಿಸಲಾಗಿದೆ. ಕೆ೨ಗೆ ಕೆ೩ ಡ್ರಗ್ಸ್‌ಇರುವಕೆಮಿಕಲ್ ಸೇರಿಸಿ ಮನುಷ್ಯನಿಗೆ ನೀಡಿದರೆ ಅವನು ಅಪರಾಧ ಚಟುವಟಿಕೆಗಳನ್ನು ಮಾಡುತ್ತಾನೆ. ನಾಯಕನಅಣ್ಣ, ಗೆಳೆಯ ವೈದ್ಯ ಸೇರಿಕೊಂಡು ಹಣ ಆಸೆಗೆ ಸುಪಾರಿತೆಗೆದುಕೊಂಡುತಮ್ಮನಿಂದಇಂತಹ ಕೃತ್ಯಗಳನ್ನು ಮಾಡಿಸುತ್ತಿರುತ್ತಾರೆ.
. ಒಂದು ಹಂತದಲ್ಲಿತನಿಖೆ ನಡೆಸುವ ಅಧಿಕಾರಿಗಳಿಗೆ ಸಣ್ಣ ಸುಳಿವು ದೊರೆತು ಅಪರಾಧಿಗಳನ್ನು ಬಂದಿಸಿದಾಗ ಎಲ್ಲವು ಹೊರಗೆ ಬರುತ್ತದೆ. ಇದರಮಧ್ಯೆ ನವಿರಾದಪ್ರೀತಿಕತೆಯನ್ನು ಹೇಳಲಾಗಿದೆ. ಪ್ರಾರಂಭದಲ್ಲಿಯಾರೊಬ್ಬರು ನಿರ್ಮಾಣ ಮಾಡಲು ಮುಂದೆ ಬರಲಿಲ್ಲ. ನಮ್ಮಗಳ ಕಷ್ಟ ಕಂಡು ಶಿಕ್ಷಕಿ ಶಿಲ್ಪಶ್ರೀನಾಥ್ ಎರಡು ಲಕ್ಷ ಬಂಡವಾಳ ಹೂಡಿದರು.ಒಂದೂವರೆ ನಿಮಿಷದ ಮಳೆ ದೃಶ್ಯಚಿತ್ರೀಕರಿಸಲು ಏಳು ಗಂಟೆ ಸಮಯತೆಗೆದುಕೊಂಡಿತುಎಂದರು.
ಬರಹಗಾರನಕನಸನ್ನುಚಿತ್ರಕತೆ ಮೂಲಕ ತೋರಿಸಬಹುದಾಗಿದೆ. ಹೊಸವಿಷಯವನ್ನುತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ. ಆದಷ್ಟು ಬೇಗನೆ ಹಿರಿತೆರೆಗೆ ಬರಲೆಂದು ಭರ್ಜರಿಚೇತನ್‌ಕುಮಾರ್ ಶುಭಹಾರೈಸಿದರು.ಮುಖ್ಯ ಪಾತ್ರದಲ್ಲಿ ಜೋಡಿಗಳಾಗಿ ಲೋಕೇಶ್‌ಗೌಡ, ಸುವಿನ್‌ವಾಲ್ಸನ್,ಅಣ್ಣನಾಗಿ ಶ್ರೀನಾಥ್,ತನಿಖಾದಿಕಾರಿಯಾಗಿಯುಗಚಂದ್ರು, ಗೆಳಯನಾಗಿ ಪುನೀತ್, ವೈದ್ಯ ಪಾತ್ರದಲ್ಲಿಬಾಲಿವುಡ್ ನಟಅಜಯ್‌ದತ್ತ ಮುಂತಾದವರು ನಟಿಸಿದ್ದಾರೆ.ಸಂಕಷ್ಟಕರಗಣಪತಿಖ್ಯಾತಿಯ ರುತ್ವಿಕ್‌ಮುರಳಿಧರ ಸಂಗೀತ, ಸಂತೋಷ್ ವಿಜಯ್‌ಕುಮಾರ್‌ಛಾಯಾಗ್ರಹಣ, ಮಹೇಶ್ ಸಂಕಲನವಿದೆ.