ಮೊಬೈಲ್, ಇಂಗ್ಲೀಷ್ಇಲ್ಲದಚಿತ್ರ
ಗ್ರಾಮೀಣ ಸೊಗಡು, ಮಾತಿನ ಭಾಗದ ದೃಶ್ಯಗಳಲ್ಲಿ ಆಂಗ್ಲ ಭಾಷೆ ಮತ್ತು ಮೊಬೈಲ್ ಬಳಸದಿರುವ ಚಿತ್ರ ‘ಪ್ರೇಮಯುದ್ದಂ’ಗೆಗೌರವ ಸಲ್ಲುತ್ತದೆ. ಕನ್ನಡಿಗರು ನಮ್ಮ ಸಿನಿಮಾವನ್ನು ನೋಡುತ್ತಾರೆ.ಬೇರೆ ಭಾಷೆಯವರು ವೀಕ್ಷಿಸಲಿ ಎನ್ನುವಕಾರಣಕ್ಕೆಇದೇ ಶೀರ್ಷಿಕೆ ಇಡಲಾಗಿದ್ದರೂ, ಇದು ಸಂಸ್ಕ್ರತ ಪದವೆಂದುನಾಲ್ಕು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಸಮಂಜಸಉತ್ತರಕೊಡುತ್ತಾರೆ.ಒಮ್ಮೆ ನಿರ್ದೇಶಕ, ನಿರ್ಮಾಪಕರು ಸಿನಿಮಾ ಮಾಡುವ ಸಲುವಾಗಿ ಲೋಕೇಶನ್ ನೋಡಲುಪ್ರಯಾಣ ಬೆಳೆಸಿದ್ದಾರೆ. ದಾರಿಯಲ್ಲಿಕಾರುದೇವಸ್ಥಾನ ಬಳಿ ಕೆಟ್ಟು ನಿಂತುಕೊಳ್ಳುತ್ತದೆ. ಆ ಸಮಯಲ್ಲಿಔಪಚಾರಿಕವಾಗಿ ಮಾತನಾಡುವಾಗಅಲ್ಲಿನ ಪರಿಸರಕಂಡಿದ್ದೇಕತೆ ಹುಟ್ಟಿಕೊಂಡು, ಬಿಡುಗಡೆ ಹಂತದವರೆಗೂತಂದು ನಿಲ್ಲಿಸಿದೆಯಂತೆ.ಹಳ್ಳಿ ಹಿನ್ನಲೆಯ ಶುದ್ದಪ್ರೀತಿಕತೆಯಲ್ಲಿಪ್ರೇಮಿಗಳು ಕೇವಲ ಕಣ್ಣಲ್ಲೇ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾರೆ.ಕನಸಿನಲ್ಲೂ ಹಾಡನ್ನುತುರುಕಿಲ್ಲ. ಕನ್ನಡ ಭಾಷೆ, ಸಂಸ್ಕ್ರತಿಯನ್ನುಹೇಳಲಾಗಿದೆ.
. ಲವ್‌ಅಂದರೆ ಹೀಗೂ ಇರಬಹುದಾ ಎಂಬ ಪ್ರಶ್ನೆ ಮೂಡುವಂತ ಸನ್ನಿವೇಶಗಳು ಇರುವುದು ಪ್ಲಸ್ ಪಾಯಿಂಟ್.
ರಿಯಲ್‌ದಲ್ಲಿಟೆಕ್ಕಿ, ರೀಲ್‌ದಲ್ಲಿ ಹಳ್ಳಿ ಹುಡುಗನಾಗಿ ಅನಿಲ್ ನಾಯಕ.ಚಿತ್ರದುರ್ಗದಕಿರುತೆರೆಯ ಪಲ್ಲವಿ ನಾಯಕಿ. ಇವರೊಂದಿಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.ರಚನೆ-ಚಿತ್ರಕತೆ-ಸಂಭಾಷಣೆ ಮತ್ತು ನಿರ್ದೇಶನ ಶ್ರೀಮಂಜು ನಿರ್ವಹಿಸಿದ್ದಾರೆ. ಛಾಯಾಗ್ರಹಣ ರಾಮುನರಹಳ್ಳಿ, ನೃತ್ಯರವಿ, ಸಾಹಸ ವೈಲೆಂಟ್‌ವೇಲು, ಸಂಕಲನ ಅರವಿಂದ್.ಜೆ.ಪಿ ಅವರದಾಗಿದೆ. ಮಂಡ್ಯಾ, ಪಾಂಡವಪುರ, ಕನಕನಮಾರುಡಿ ಹಾಗೂ ಬ್ಯಾಡರಹಳ್ಳಿಯ ಸುಂದರ ವಾತವರಣದಲ್ಲಿಚಿತ್ರೀಕರಣ ನಡೆಸಲಾಗಿದೆ. ಗುರುಮೂರ್ತಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿರುವ ಹಾಡುಗಳನ್ನು ನಟಿಸ್ಪರ್ಶಾರೇಖಾ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ನಂತರ ಲಿರಿಕಲ್ ಹಾಡುಗಳನ್ನು ತೋರಿಸಲಾಯಿತು.