Kaalantaka.Movie Teaser Rel.

Thursday, January 09, 2020

276

ಶಿವನಹೆಸರುಚಿತ್ರದ ಶೀರ್ಷಿಕೆ

ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ.  ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು  ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ.  ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ಶಿವ. ಅದಕ್ಕೆ ಆ ಸಮಯದಲ್ಲಿಕಾಲಂತಕಎಂದುಕರೆಯುತ್ತಾರೆ.

ಅದೇರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿಯಾರು ಶೀರ್ಷಿಕೆಯಾಗುತ್ತಾರೆ ಎಂಬುದನ್ನುಹೇಳಲಾಗಿದೆ. ಕತೆಯುಅಬಚೂರು ಎಂಬ ಕಾಲ್ಪನಿಕಊರಿನಲ್ಲಿ ನಡೆಯುತ್ತದೆ.ಆ ಸ್ಥಳದಲ್ಲಿ ನಡೆಯುವಂಥಕೆಲವು ಘಟನೆಗಳಿಗೆ ಯಾರು ಸ್ಪೂರ್ತಿಯಾಗಿರುತ್ತಾರೆ.ಮಾದಕ ದ್ರವ್ಯಗಳನ್ನು ಸಾಗಾಣಿಕೆ ಮಾಡುವ ಸಣ್ಣ ವ್ಯಾಪಾರಿಊರನ್ನುಯಾವರೀತಿಯಲ್ಲಿ ಹತೋಟಿಯಲ್ಲಿಇಟ್ಟುಕೊಂಡಿರುತ್ತಾನೆ.  ಅವನು ಮಾಡುವ ಕೃತ್ಯಗಳು, ಅಲ್ಲಿ ನಡೆಯುವಂತವಸ್ತು ವಿಷಯಗಳಆಧಾರದ ಮೇಲೆ  ಬರಯಲಿಕ್ಕೆ ಶುರು ಮಾಡುತ್ತಾಳೆ. ಇವರಿಬ್ಬರಘರ್ಷಣೆ ಮುಂದೆ ಹೇಗೆ ರೂಪ ಪಡೆದುಕೊಳ್ಳುತ್ತದೆ.ಪೆನ್ನು ಬರಹ, ಸಿಗರೇಟು ಗಾಂಜ.ಇವರೆಡುಕತೆಯಲ್ಲಿ ಪ್ರಮುಖವಾಗಿ ಬರುವುದರಿಂದ ಪೋಸ್ಟರ್‌ನಲ್ಲಿಇದನ್ನೆತೋರಿಸಲಾಗಿದೆ.

ಚಿತ್ರದಲ್ಲಿ ನಿರ್ದೇಶಕನಾಗಿ ಕೆ.ಎಸ್.ಶ್ರೀಧರ್, ಪೆಡ್ಲರ್ ಪಾತ್ರದಲ್ಲಿಯಶ್‌ವಂತ್‌ಶೆಟ್ಟಿ, ಬರಹಗಾರ್ತಿಯಾಗಿಅರ್ಚನಾಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶನಿ ಧಾರವಾಹಿಯಲ್ಲಿಇಂದ್ರನಾಗಿ ಕಾಣಿಸಿಕೊಂಡಿದ್ದ ಕಾರ್ತಿಕ್‌ಸಮಗ ನಟನಾಗಿ ಅಭಿನಯಿಸಿದ್ದಾರೆ.ಉಳಿದಂತೆ ಸುಷ್ಠಿತಜೋಷಿ, ಧರ್ಮೇಂದ್ರಅರಸ್ ಮುಂತಾದವರುಇದ್ದಾರೆ.ಸೆಟ್ ಹಾಕದೆ ಚಿಕ್ಕಮಗಳೂರು ಸಮೀಪದ ನೈಜ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ರಚನೆ ನಿರ್ದೇಶನ ಮಾಡಿರುವಅಂಬರೀಷ.ಎಂಅವರಿಗೆ ಹೊಸ ಅನುಭವ. ಜಯಂತ್‌ಕಾಯ್ಕಣಿ, ಕಿನ್ನಲ್‌ರಾಜ್‌ಅವರ ಸಾಹಿತ್ಯದಎರಡು ಗೀತೆಗಳಿಗೆ ಜ್ಯೂಡಸ್ಯಾಂಡಿಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣಎಸ್. ಹಾಲೇಶ್, ಸಂಕಲನ ಹರೀಶ್‌ಕೊಮ್ಮೆ, ಸಾಹಸ ಮಾಸ್‌ಮಾದ ನಿರ್ವಹಿಸಿದ್ದಾರೆ. ಎರಡನೇ ಬಾರಿ ನಿರ್ಮಾಣ ಮಾಡಿರುವ ಶಾಂತಕುಮಾರ್, ಹಾಗೂ ಸಹ ನಿರ್ಮಾಪಕರಾಗಿರುವ ಹರಿನಾಥ್.ಎಲ್‌ಅವರಿಗೆನೂತನ ಪ್ರಯತ್ನ. ಶ್ರೀ ಭಾಸ್ಕರ ಮೂವಿ ಲೈನ್ಸ್ ಮುಖಾಂತರಚಿತ್ರವು ಸಿದ್ದಗೊಂಡಿದ್ದು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,