ಹುಂಡಿ ನಮ್ದು ಸುದ್ದಿ ನಿಮ್ದು
‘ಗೋವಿಂದಗೋವಿಂದ’ ಅಡಿಬರಹದಲ್ಲಿ ಹುಂಡಿ ನಮ್ದು ಕಾಸು ನಿಮ್ದು ಅಂತ ಹೇಳಿಕೊಂಡಿರುವ ಹಾಸ್ಯಚಿತ್ರವು ಶೇಕಡ ೭೫ ರಷ್ಟುಚಿತ್ರೀಕರಣವನ್ನು ಬಿಜಾಪುರ, ಚಿಂತಾಮಣಿ, ಏಕಶಿಲಾಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ, ಎರಡು ಹಾಡುಗಳನ್ನು ಸದ್ಯದಲ್ಲೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಾರಂಭದಲ್ಲಿ ಪುಟ್ಟ ಹೆಜ್ಜೆಯನ್ನುಇಡುತ್ತಾ ಈಗ ದೊಡ್ಡ ಹೆಜ್ಜೆಇಡಲು ಹಾಗೆಯೇ ಹುಂಡಿ ನಮ್ದು ಸುದ್ದಿ ನಿಮ್ದು ಅಂತ ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾದ ಸಂಕ್ಷಿಪ್ತ ವಿವರವನ್ನುಕೈಪಿಡಿ ಪುಸ್ತಕದಲ್ಲಿಇರುವುದರಿಂದಎಲ್ಲರೂ ಅನುಭವಗಳನ್ನು ಹಂಚಿಕೊಂಡರು. ಕಥೆಯೊಳಗೊಂದು ಕಥೆಇರಲಿದ್ದು, ನಿರ್ದೇಶಕನಾಗುವ ಹಂಬಲದೊಂದಿಗೆ ನಿರ್ಮಾಪಕನಿಗೆಕಥೆ ಹೇಳುತ್ತಾ ತಾನು ಮಾಡಿದಕಿರುಚಿತ್ರ ತೋರಿಸಿ ಇಂಪ್ರೆಸ್ ಮಾಡುವುದರಿಂದಸನ್ನಿವೇಶಗಳು ತೆರೆದುಕೊಳ್ಳುತ್ತದೆ.
ಗೋಲುಗಳೇ ಇಲ್ಲದ ಹುಡುಗರು ನಾಯಕಿಯನ್ನುಡ್ಯಾನ್ಸರ್ ಮಾಡುವ ಕನಸಿನೊಂದಿಗೆ ಅಪಹರಿಸಿ, ಆಕೆಯತಂದೆಯೊಂದಿಗೆ ಹಣ ವಸೂಲು ಮಾಡಿ ಸಿಟಿಗೆ ಕಳುಹಿಸಿ ಸಹಾಯ ಮಾಡುವಯೋಜನೆ ಹಾಕಿಕೊಳ್ಳುತ್ತಾರೆ.ಆದರೆ ನಿಜವಾಗಿಯೂಅಪಹರಣವಾಗಿಬಂದಿತಳಾಗುತ್ತಾಳೆ. ಅವಳನ್ನು ಬಿಡುಗಡೆ ಮಾಡಿಸುವ ಸಲುವಾಗಿ ಹಣ ಹೊಂದಿಸಲು ಪರದಾಟುವ ಸಂಕಟಗಳು ಒಂದೊಂದೇ ಪಾತ್ರಗಳ ಮೂಲಕ ಸಂದಿಸುತ್ತಾ ಸಾಗುತ್ತದೆ.ಎಲ್ಲಾ ಪಾತ್ರಧಾರಿಗಳು ಗೋವಿಂದನ ನಾನಾ ಹೆಸರಿನಲ್ಲಿಇರುವುದರಕಾರಣಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಕಿರುತೆರೆಗೆ ಸಾಕಷ್ಟು ಯಶಸ್ವಿ ಧಾರವಾಹಿಗಳಿಗೆ ಆಕ್ಷನ್‌ಕಟ್ ಹೇಳಿರುವ ತಿಲಕ್ ಹೊಸ ಅನುಭವಎನ್ನುವಂತೆ ಹಿರಿತೆರೆಗೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿಗೆ ಹಿತನ್‌ಹಾಸನ್ ಸಂಗೀತವಿದೆ.ಬಿಜಾಪುರ, ಧಾರವಾಡ ಭಾಷೆಯ ಸಂಭಾಷೆಣೆಗೆ ಶ್ರೀದೇವ್‌ರಂಗಭೂಮಿ ಮಾತುಗಳನ್ನು ಪೋಣಿಸಿದ್ದಾರೆ.
ಅನುತ್ತೀರ್ಣಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿ ಸುಮಂತ್‌ಶೈಲೇಂದ್ರ ನಾಯಕನಾಗಿ ಏಳನೇ ಚಿತ್ರ. ಕಡಿಮೆ ಮಾತುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವಕವಿತಾಗೌಡ ನಾಯಕಿ.ಉಡಾಳ ಗೆಳೆಯರುಗಳಾಗಿ ವಿಜಯ್‌ಚಂಡೂರ್, ಪವನ್‌ಕುಮಾರ್, ಮತ್ತೋಂದು ಮುಖ್ಯ ಪಾತ್ರದಲ್ಲಿ ಭಾವನಾಮೆನನ್ ನಟಿಸಿದ್ದಾರೆ.ತಾರಗಣದಲ್ಲಿರೂಪೇಶ್‌ಶೆಟ್ಟಿ, ಅಚ್ಯುತ್‌ಕುಮಾರ್, ಶೋಭರಾಜ್, ಪದ್ಮವಾಸಂತಿ, ಗೋವಿಂದೇಗೌಡ, ಶ್ರೀನಿವಾಸಪ್ರಭು, ಸುನೇತ್ರಪಂಡಿತ್ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣಕೆ.ಎಸ್.ಚಂದ್ರಶೇಖರ್, ಸಂಕಲನ ಸಿ.ರವಿಚಂದ್ರನ್, ಸಾಹಸ ಥ್ರಿಲ್ಲರ್‌ಮಂಜುಅವರದಾಗಿದೆ. ಸ್ಟಾರ್ ಚಿತ್ರಗಳನ್ನು ನಿರ್ಮಾಣ ಮಾಡಿರುವಎಸ್.ಶೈಲೇಂದ್ರಬಾಬು ಮೊದಲಬಾರಿ ಪಾಲುದಾರಿಕೆಯಲ್ಲಿಬಂಡವಾಳ ಹೂಡಿದ್ದು, ಇವರೊಂದಿಗೆ ಹಿಟ್ ಸೀರಿಯಲ್ ನಿರ್ದೇಶಕ,ನಿರ್ಮಾಪಕರವಿ.ಆರ್.ಗರಣಿ ಮತ್ತು ಕಿಶೋರ್.ಎಂ.ಕೆ.ಮಧುಗಿರಿ ಸೇರಿಕೊಂಡಿದ್ದಾರೆ.