Dhehi.Film Audio Rel.

Monday, January 13, 2020

744

ಮಹಿಳೆಯ ಅಂತರಂಗದ ಶಕ್ತಿ ದೇಹಿ

ಪುರಾತನ ಸಮರ ಕಲೆ ‘ಕಳರಿಪಯುಟ್ಟು’ ವಿಶ್ವದಾದ್ಯಂತಪರಿಚಿತವಾಗಿದೆ. ಕಳರಿಯು ದೇಹದ ಶಕ್ತಿಯನ್ನುಒಗ್ಗೂಡಿಸುವ ಹಾಗೂ ಮನಸ್ಸನ್ನುಏಕಾಗ್ರತೆಗೆಒಯ್ಯುವ ಕೆಲಸ ಮಾಡುತ್ತದೆ.ಪ್ರಸಕ್ತಯುವಜನಾಂಗದವರಿಗೆಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸಲಿದ್ದುಕಲೆಯುಬೌದ್ದಿಕ ಸ್ಥಿರತೆಯ ವೃದ್ದಿಗೂ ಸಹಕಾರಿಆಗುತ್ತದೆ.ಇದರಕುರಿತಂತೆ ‘ದೇಹಿ’ ಎನ್ನುವಚಿತ್ರದಲ್ಲಿಇzರವಿದ್ಯೆ ಪರಿಚಯ ಮಾಡಿಸಿದ್ದಾರೆ.ಎರಡು ತಮಿಳು ಚಿತ್ರಗಳಿಗೆ ಕೆಲಸ ಮಾಡಿರುವಧನಾ ನಿರ್ದೇಶನವಿದೆ.ರಚನೆ,ಚಿತ್ರಕತೆ ಮತ್ತು ಸಂಭಾಷಣೆ ಬಿ.ಜಯಮೋಹನ್‌ಅವರದಾಗಿದೆ. ಕತೆಯಲ್ಲಿ  ದಿವ್ಯಾ ಮಾಡೆಲಿಂಗ್‌ಕ್ಷೇತ್ರದಲ್ಲಿ ಗುರುತಿಸಿಕೊಂಡಿರುತ್ತಾರೆ. ಭವಿಷ್ಯದಲ್ಲಿಉನ್ನತ ಬದುಕು ಕಟ್ಟಿಕೊಳ್ಳುವ ಬಯಕೆ ಹೊಂದಿರುತ್ತಾಳೆ.ಆದರೆ ಸಮಾಜದಲ್ಲಿ ನಡೆಯುವ ಕೆಲವು ಅಹಿತಕರ ಘಟನೆಗಳು ಅವಳ ಮನಸ್ಸನ್ನು ಘಾಸಿ ಮಾಡುತ್ತದೆ. ಆಗ ಅವಳಿಗೆ ನೆರವು ಬರುವುದುಇದೇ ಕಲೆ. ಇದರ ಮೂಲಕ ಬದುಕನ್ನು ಹೇಗೆ ಸುಂದರವಾಗಿಸಿಕೊಳ್ಳುತ್ತಾಳೆ ಎನ್ನುವುದು  ಸಿನಿಮಾದಸಾರಾಂಶವಾಗಿದೆ.

ಉಪಾಸನಾ ನಾಯಕಿ.ಈಕೆಯಗುರುವಾಗಿಕಿಶೋರ್ ಮತ್ತುಗುರುಕುಲಂನ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಣ್ಣ ಹಚ್ಚಿದ್ದಾರೆ.ಚಿಕ್ಕಗುಬ್ಬಿಯಲ್ಲಿರುವಗುರುಕುಲಂ, ಹಂಪಿ, ಬೇಲೂರು ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ. ಹಾಡುಗಳಿಗೆ ನೊಬಿನ್‌ಪೌಲ್ ಸಂಗೀತ, ಆನಂದ್‌ಸುಂದರೇಶ್‌ಛಾಯಾಗ್ರಹಣ, ಎಸ್.ನಾಗೇಂದ್ರಅರಸ್ ಸಂಕಲನವಿದೆ. ಇತೀಚೆಗಷ್ಟೇ ನಟ ವಿಜಯರಾಘವೇಂದ್ರಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದರು.ಅವರು ಮಾತನಾಡುತ್ತಾ ‘ಕಲ್ಲರಳಿಹೂವಾಗಿ’ ಪಾತ್ರದ ಸಲುವಾಗಿ  ರಂಜನ್‌ಮುಲ್ಲರತ್ ಬಳಿ ಸದರಿ ಪಟುಗಳನ್ನು ಕಲಿತುಕೊಂಡಿದ್ದೆ. ಇಂದುಅವರು ನಿರ್ಮಾಣ ಮಾಡಿರುವುದು ಸಂತಸತಂದಿದೆ.ಇದನ್ನುಕಲಿತವರಿಗೆ ಮಾನಸಿಕ ಮಟ್ಟದಲ್ಲಿದೊಡ್ಡ ವಿಶ್ವಾಸ ಬರುತ್ತದೆ. ಜೊತೆಗೆ ನಮ್ಮನ್ನು ರಕ್ಷಿಸಿಕೊಳ್ಳಲು ಉಪಯೋಗವಾಗುತ್ತದೆ. ಅದರಲ್ಲೂ ಮಹಿಳೆಯರು ತರಭೇತಿ ಪಡೆದುಕೊಂಡರೆಒಂಟಿಯಾಗಿ ಹೋರಾಡಬಹುದೆಂದುತಂಡಕ್ಕೆ ಶುಭ ಹಾರೈಸಿದರು. ಹಲವು ಅಂತರರಾಷ್ಟ್ರೀಯ ಸಿನಿಮೋತ್ಸವಗಳ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿನೂತನಚಿತ್ರವುಜನವರಿ ೨೪ರಂದು ತೆರೆಕಾಣುತ್ತಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ  ಕಳರಿ ಪ್ರದರ್ಶನ  ಮೈ ಜುಂ ಅನಿಸಿತು.

 

Copyright@2018 Chitralahari | All Rights Reserved. Photo Journalist K.S. Mokshendra,