ರಾಜ್ಯ ಚಲನಚಿತ್ರಆಯ್ಕೆಯಲ್ಲಿಅಪಸ್ವರ
೨೦೧೮ರ ರಾಜ್ಯ ಚಲನಚಿತ್ರ ಪ್ರಶಸ್ತಿ ಹೊರಬಂದಿದೆ.ಎಂದಿನಿಂತೆ ಈ ಬಾರಿಯೂ ಪ್ರಶಸ್ತಿ ಸಿಗದವರಿಗೆ ಬೇಸರ ತರಿಸಿದೆ.ಅದರಲ್ಲೂ ‘ಬಿಂಬ’ ಚಿತ್ರದ ನಿರ್ದೇಶಕ ಜಿ.ಮೂರ್ತಿ, ನಾಯಕ ಶ್ರೀನಿವಾಸಮೂರ್ತಿ, ನಿರ್ಮಾಪಕಿ ಮಂಜುಳಾಮೂರ್ತಿ ನೇರವಾಗಿಆಯ್ಕೆ ಸಮಿತಿಯವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರು ಹೇಳುವಂತೆ ಒಂದೇ ಶಾಟ್, ಕಲಾವಿದ, ಸ್ಥಳ ಮತ್ತು ಫ್ಲೂಟ್ ಬಳಸಿರುವ ಆ ತೊಂಬತ್ತು ನಿಮಿಷದಚಿತ್ರದಲ್ಲಿ ಹೆಸರು ಮಾಡಿರುವಅನುಭವಿ ತಂತ್ರಜೃರು ಕೆಲಸ ಮಾಡಿದ್ದಾರೆ.ಇದರ ಬಗ್ಗೆ ಮುಂಚಿತವಾಗಿ ಮಾಹಿತಿಗಳನ್ನು ಒದಗಿಸಲಾಗಿತ್ತು. ಆದರೂಅವರುಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ನೋವು ಕಾಡುತ್ತಿದೆಎನ್ನುತ್ತಾರೆ.
ಹಿರಿಯ ಸಾಹಿತಿ ಸಂಸ ಅವರ ವ್ಯಕ್ತಿತ್ವ, ಬದುಕನ್ನುಒಬ್ಬ ನಟನಿಂದತೋರಿಸಲಾಗಿದೆ.ಇದಕ್ಕೆರಾಜಸ್ಥಾನ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡು, ಫ್ರಾನ್ಸ್, ಸ್ಪೈನ್‌ದೇಶದಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಅರ್ಹಗೊಂಡಿರುವುದೇ ಮೆಚ್ಚುಗೆಯಾಗಿದೆ. ಭಾರತದಲ್ಲೆ ಈ ರೀತಿಯ ಪ್ರಯತ್ನ ಮಾಡಿಲ್ಲವೆಂದುಇಂಡಿಯಾ ಬುಕ್ಸ್‌ಆಫ್‌ರೆಕಾರ್ಡ್ ಸಂಸ್ಥೆಯುವರು ಪ್ರಮಾಣ ಪತ್ರ ನೀಡಿದ್ದಾರೆ. ಶ್ರೀ ರಾಘವೇಂದ್ರಚಿತ್ರವಾಣಿಪ್ರತಿ ವರ್ಷ ನೀಡುವಗೌರವಕ್ಕೆ ಪಾತ್ರವಾಗಿದೆ.ಲಂಡನ್‌ದಲ್ಲಿಎರಡು ಬಾರಿ ಷೋ ಆಗಿದೆ. ಬೆಂಗಳೂರಿನಲ್ಲಿ ನಡೆದಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕಾರಿಗಳ ಧೋರಣೆಯಿಂದ ಅವಕಾಶ ಸಿಗಲಿಲ್ಲ. ಸಂಸ ಅವರಊರುಮೈಸೂರುದಸರಾ ಪ್ರದರ್ಶನದಲ್ಲೂ ಹೀಗೆಯೇಆಗಿದೆ. ನಾವು ಮಾಡಿದ ನಂತರ ಕಾಲಿವುಡ್‌ದಲ್ಲಿಇದೇ ಪ್ರಯತ್ನ ಮಾಡಿದಾಗ ಲೆಜಂಡರಿಕಲಾವಿದರು ಪ್ರಶಂಸಿದ್ದಾರೆ.ನಮ್ಮಲ್ಲಿಯಾರುಇದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿಲ್ಲ. ಅಂದರೆ ಪ್ರಯೋಗಶೀಲಕ್ಕೆ ಬೆಲೆಯೇಇಲ್ಲವಾ.ಅವರಹೆಸರನ್ನು ಉಳಿಸಲಿಕ್ಕಾದರೂ ಸರ್ಕಾರವು ಪ್ರೋತ್ಸಾಹಕೊಡಬೇಕಿತ್ತು.ಅದು ಆಗಲಿಲ್ಲ. ಇದರ ಹಿಂದೆಕಾಣದ ಕೈUಳಕುತಂತ್ರವಿದೆ. ನ್ಯಾಯಲಯಕ್ಕೆ ಹೋಗುವ ಇರಾದೆಇಲ್ಲ. ಆ ತರಹದ ವಿವಾದ ಬೇಡಎನ್ನುತ್ತಾರೆ ಶ್ರೀನಿವಾಸಪ್ರಭು.ಕೊನೆ ಪ್ರಯತ್ನಎನ್ನುವಂತೆ ಮತ್ತೋಮ್ಮೆ ಸಂಬಂದಪಟ್ಟವರಿಗೆ ಲಿಖಿತ ಮೂಲಕ ಪತ್ರ ನೀಡುವುದಾಗಿತಂಡವು ಹೇಳಿಕೊಂಡಿದೆ.