Toom And Jary.Film Press Meet.

Tuesday, January 14, 2020

752

ಯುವ ಜೋಡಿಗಳ ಸಂಕೀರ್ಣ ಗುಣಗಳು

ಚಂದನವನದಲ್ಲಿಒಂದು ಸಿನಿಮಾ ಯಶಸ್ವಿಯಾದರೆ ಹಲರ ಬದುಕು ಹಸನಾಗುತ್ತದೆ.ಉದಾಹರಣೆಗೆ ಹೇಳುವುದಾದರೆ ವಿಶ್ವದಾದ್ಯಂತ ಹೆಸರು ಮಾಡಿದ ‘ಕೆ.ಜಿ.ಎಫ್’ಚಿತ್ರ. ಇದರಲ್ಲಿ ಗುರುತಿಸಿಕೊಂಡ ತಂತ್ರಜ್ಘರು, ಕಲಾವಿದರು ಬ್ಯುಸಿ ಇದ್ದಾರೆ.ಇದನ್ನು ಹೇಳಲು ಕಾರಣವಿದೆ.ಮೂವರು ಪ್ರತಿಭೆಗಳು ‘ಟಾಮ್‌ಅಂಡ್‌ಜೆರ್ರಿ’ ಎನ್ನುವಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಛಾಪ್ಟರ್-೧ಕ್ಕೆ ಸಂಭಾಷಣೆ ಬರೆದಿರುವ ಮೈಸೂರಿನಇಂಜಿನಿಯರ್‌ರಾಘವ್‌ವಿನಯ್ ಶಿವಗಂಗೆ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ಖಳನಾಯಕ. ಮಾಸ್‌ಎಂಟರ್‌ಟೈನ್‌ಮೆಂಟ್‌ದಲ್ಲಿ ಬೇರೆಯದೇಅರ್ಥದಲ್ಲಿ ಬದುಕುತ್ತಿರುವಎರಡು ಪಾತ್ರಗಳ ಕತೆಯಲ್ಲಿ ನಗು, ಅಳು, ಸಂತೋಷಇರುತ್ತದೆ.

ಈ ಹುಡುಕಾಟದ ಪಯಣದಲ್ಲಿ  ಸಿಕ್ಕಾಗಇಬ್ಬರ ಕೆಮಿಸ್ಟ್ರಿ ಹುಟ್ಟಿಕೊಳ್ಳುತ್ತದೆ. ಅವನು ಗುರಾಯಿಸಿದ್ರೆ ಹೊಡಿತಾನೆ. ಅವಳು ಗುರಾಯಿಸುವವರಿಗೆ ನಗು ಚೆಲ್ಲುತ್ತಾಳೆ.ನಮ್ಮೂರು ಪರಿಚಯವಾಗಬೇಕೆಂಬ ಆಕೆಗೆ ಬಯಕೆ.ಪರಿಚಯಅಂದರೆ ಏನು ಅಂತ ತಿಳಿಯದವನು.ಆಕೆ ಕಾಲ್ಪನಿಕ, ಆತ ವಾಸ್ತವ. ಇವರಿಬ್ಬರೂಒಟ್ಟಿಗೆ ಸೇರಿದಾಗ ಆಗುವ ಘಟನೆಗಳೇ ಸಿನಿಮಾದ ಸಾರಾಂಶವಾಗಿದೆ.ಅದಕ್ಕಾಗಿ ಹುಡುಗ-ಹುಡುಗಿ ಹೊಂದಿಕೊಳ್ಳದಂತ ಕಲಾವಿದರನ್ನುಆಯ್ಕೆ ಮಾಡಿದ್ದಾರೆ.ಆಡಂಬರವಿಲ್ಲದ ಸನ್ನಿವೇಶಗಳಲ್ಲಿ ಜೀವನದ ಬೆಲೆಯನ್ನುತೋರಿಸಲಾಗಿದೆ.ವಯಸ್ಸಾದ ಮೇಲೆ ಬುದ್ದಿ ಬರುತ್ತದೆ.ಅದು ಈ ವಯಸ್ಸಿಗೆ ಬಂದರೆ ಸ್ಪಷ್ಟತೆಇರುವುದಿಲ್ಲ. ನಾಳಿನ ಬಿರಿಯಾನಿ  ಆಸೆಗೆ ಇಂದಿನ ಚಿತ್ರಾನ್ನವನ್ನುಉಪೇಕ್ಷೆ ಮಾಡಬೇಡವೆಂಬ ಸಿದ್ದಾಂತವನ್ನು ಹೇಳಲಾಗಿದೆ. ಹಾಸ್ಯಗಾರಗಂಗಾವತಿ ಪ್ರಾಣೇಶ್‌ಅವರಒಂದಷ್ಟು ಅಂಶಗಳನ್ನು ಬಳಸಲಾಗಿದೆ.

ಗಂಟುಮೂಟೆದಲ್ಲಿ ನಟಿಸಿದ್ದ ನಿಶ್ಚಿತ್‌ಕೊರೋಡಿ ನಾಯಕ.ಜೋಡಿಹಕ್ಕಿಧಾರವಾಹಿ ಖ್ಯಾತಿಯಚೈತ್ರರಾವ್ ನಾಯಕಿ. ಇವರೊಂದಿಗೆಜೈಜಗದೀಶ್, ತಾರಾಅನುರಾಧ, ರಂಗಾಯಣರಘು, ಪ್ರಶಾಂತ್‌ನಟನ, ಸಂಪತ್, ರಾಕ್‌ಲೈನ್ ಸುಧಾಕರ್, ಪದ್ಮಜರಾವ್, ಕಡ್ಡಿಪುಡಿಚಂದ್ರು, ಮುಂತಾದವರು ನಟಿಸುತ್ತಿದ್ದಾರೆ. ರಘುಶಾಸ್ತ್ರೀ, ಅತನ್ಯರಚನ ಮತ್ತು ಪ್ರವೀಣ್‌ಭಟ್ ಸಾಹಿತ್ಯದಐದು ಹಾಡುಗಳಿಗೆ ಮಾಥ್ಯೂಸ್‌ಮನುರಾಗಒದಗಿಸುತ್ತಿದ್ದಾರೆ. ಸಾಹಸ ಅರ್ಜುನ್‌ರಾಜ್‌ಅವರದಾಗಿದೆ.ಕಲ್ಪನೆಇಲ್ಲದಜಾಗವನ್ನುಆಯ್ಕೆ ಮಾಡಿಕೊಂಡು ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲುಯೋಚಿಸಲಾಗಿದೆ.  ಜನ್ಮಭೂಮಿಗುಜರಾತ್, ಕರ್ಮಭೂಮಿಕರ್ನಾಟಕವೆಂದು ನಂಬಿರುವರಾಜು ಶೇರಿಗಾರ್‌ಕನ್ನಡಕ್ಕೆಏನಾದರೂಕೊಡುಗೆಕೊಡಬೇಕೆಂಬ ಅದಮ್ಯ ಬಯಕೆಯಿಂದ ನಿರ್ಮಾಣ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಸರಳವಾಗಿ ಮಹೂರ್ತ ನಡೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,