ಅಂದು ಬಜಾರ್ಇಂದು ಬಂಪರ್
ಧನ್ವೀರ್‌ಅಭಿನಯದ ‘ಬಜಾರ್’ ಚಿತ್ರವು ೨೦೧೭ರ ಸಂಕ್ರಾಂತಿ ಹಬ್ಬದಂದು ಮಹೂರ್ತ ಆಚರಿಸಿಕೊಂಡಿತ್ತು. ಕಟ್ ಮಾಡಿದರೆಅದೇ ಶುಭದಿನ ಮತ್ತು ನಿರ್ದೇಶಕರ ಹುಟ್ಟಹಬ್ಬದಂದುಅವರಎರಡನೇ ಸಿನಿಮಾ ‘ಬಂಪರ್’ ಮೊದಲ ದೃಶ್ಯಕ್ಕೆದರ್ಶನ್‌ಕ್ಲಾಪ್ ಮಾಡಿ ಶುಭಹಾರೈಸಿದ್ದಾರೆ. ಅರುಣ್ ಬರೆದಕತೆಗೆಕಾಲೇಜ್‌ಕುಮಾರ್‌ಖ್ಯಾತಿಯ ಹರಿಸಂತೋಷ್‌ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಒಳ್ಳೆ ಅಂಶಗಳನ್ನು ಕಮರ್ಷಿಯಲ್‌ರೂಪದಲ್ಲಿ ಮಾಡಿದರೆಜನರುಇಷ್ಟಪಡುತ್ತಾರೆಂದು ನಂಬಿರುವ ನಿರ್ದೇಶಕರುಅಂತಹುದೆ ನೈಜತೆಗೆಒತ್ತುಕೊಡುವ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಭಾವನೆಗಳು, ಪ್ರೀತಿಜೊತೆಗೆಜಬರ್‌ದಸ್ತ್ ಆಕ್ಷನ್‌ಗಳು ಇರಲಿದೆ.ನೋಡುಗರಿಗೆ ನಮ್ಮನೆರಸ್ತೆಯಲ್ಲಿರುವ ಹುಡುಗ ಅನಿಸುತ್ತದೆ.ಉದಾಹರಣೆಗೆ ಹೇಳುವುದಾದರೆ ಮನೆ ಒಳಗೆ ನಡೆಯುವ ವಿಚಾರಕ್ಕೆಒಂದಷ್ಟುಉತ್ತರ ಸಿಗುತ್ತದೆ.ಅಂದರೆ ಪೋಷಕರು, ಹಿರಿಯರುಅಂತನೋಡದೆಉಪೇಕ್ಷೆ ಮಾಡುತ್ತಿರುತ್ತೇವೆ.
. ಅವರಿಗೆಗೌರವಕೊಡುವ ವಿಷಯಗಳು ನೆನಪಿಸುವಂತ ದೃಶ್ಯಗಳು ಕಾಣಿಸಿಕೊಳ್ಳುತ್ತದೆ. ಕೊನೆಗೆ ಮನೆಗೆ ಒಳ್ಳೆ ಮಗ ಯಾವತರಹಇರಬೇಕು, ಹಾಗೆಯೇಯುವಜನಾಂಗಕ್ಕೆಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ.
ಏರಿಯಾದಲ್ಲಿ ಮಧ್ಯಮ ವರ್ಗದ ಹುಡುಗನಾಗಿ ಬದುಕಿನಲ್ಲಿ ಏನೋ ಆಗಬೇಕೆಂದು ಬಯಕೆ ಹೊಂದಿರುತ್ತಾನೆ. ಆ ಸಮಯದಲ್ಲಿಓದಲು ಅವಕಾಶ ಸಿಗುತ್ತೆ.ಅದನ್ನುಯಾವರೀತಿಯಲ್ಲಿ ಉಪಯೋಗಿಸಿಕೊಂಡು ಹೇಗೆ ಗುರಿತಲುಪುತ್ತಾನೆಎನ್ನುವ ಪಾತ್ರದಲ್ಲಿಧನ್ವೀರ್‌ಅಭಿನಯಿಸುತ್ತಿದ್ದಾರೆ. ನಾಯಕಿ, ಇತರೆತಾರಗಣ ಸದ್ಯದಲ್ಲೆಆಯ್ಕೆಯಾಗಲಿದೆ. ಅವನೇ ಶ್ರೀಮನ್ನಾರಾಯಣದಲ್ಲಿ ಹೆಸರು ಮಾಡಿರುವಅಜನೀಶ್‌ಲೋಕನಾಥ್ ಸಂಗೀತ, ಪ್ರಶಾಂತ್‌ರಾಜ್ ಸಂಭಾಷಣೆ ಬರೆಯಲು ಮೊದಲು ಹಂತದಲ್ಲಿ ಸೇರ್ಪಡೆಯಾಗಿದ್ದಾರೆ. ಭರಾಟೆಯನ್ನು ಪ್ರೀತಿಯಿಂದ ನಿರ್ಮಾಣ ಮಾಡಿರುವ ಸುಪ್ರಿತ್, ಅದಕ್ಕಿಂತಲೂ ಹೆಚ್ಚಿನ ಮುತುವರ್ಜಿ ವಹಿಸಿ ಬಂಡವಾಳ ಹೂಡುತ್ತಿದ್ದಾರೆ.ಬಿ.ಕೆ.ಗಂಗಾಧರ್ ಸಹ ನಿರ್ಮಾಪಕರಾಗಿರುವ ಸಿನಿಮಾದಚಿತ್ರೀಕರಣವು ಮುಂದಿನ ತಿಂಗಳು ಹದಿನೈದರ ನಂತರ ಶುರುವಾಗುವ ಸಾದ್ಯತೆಇದೆ.