India Vs England.Film Trailer Rel.

Sunday, January 12, 2020

328

ನಮ್ಮ  ಭಾಷೆಕನ್ನಡದ  ಮೇಲೆ  ಅಭಿಮಾನ ಇಟ್ಟುಕೊಳ್ಳಬೇಕು  –ದರ್ಶನ್

ನಾಗತ್ತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್‌ಇಂಗ್ಲೇಡ್’ ಚಿತ್ರದ ತುಣುಕುಗಳನ್ನು ದರ್ಶನ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಶೀರ್ಷಿಕೆಯನ್ನು ಬದಲಾಯಿಸಿ ಹೀಗೂ ಹೇಳಬಹುದು.ಮದರ್‌ಇಂಡಿಯಾ ಸುಮಲತಾಅಮ್ಮನಿಗೆ, ಗರ್ಲ್ ಫ್ರೆಂಡ್‌ಇಂಗ್ಲೇಡ್ ನಾಯಕಿ ಮಾನ್ವಿತಾ ಹರೀಶ್. ಮೇಷ್ಟ್ರುಯಾವಾಗಲೂಎರಡುದೇಶದ ಭಾಷೆಯ ಬಗ್ಗೆ ಸ್ಪರ್ಶಕೊಡುತ್ತಾರೆ.ಗರುಡಎನ್ನುವ ಸಾಹಿತಿತೀರಿಕೊಂಡಾಗ ಮಗ ಸಾಹಿತಿಅಂದರೆ ಏನು ಅಂತ ಕೇಳಿದ. ಇಂದಿನ ಜನಾಂಗವು ನಮ್ಮ ಭಾಷೆ, ಕನ್ನಡದ ಬಗ್ಗೆ ತಿಳಿದುಕೊಂಡಿಲ್ಲ. ಹಾಡಿನಲ್ಲಿ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ತೋರಿಸಿರುವುದಕ್ಕೆ  ಸ್ತುತ್ಯರ್ಹ ವ್ಯಕ್ತಪಡಿಸಬಹುದು.  ಮಕ್ಕಳು ದೊಡ್ಡವರಾಗಿದ್ದಾರೆ.ನೀವು ಇಷ್ಟು ಗ್ಲಾಮರ್ ಆಗಿ ಬಂದರೆ ಹೇಗೆ ಎಂದು ಸುಮಲತಾಅವರನ್ನು ಕಿಚಾಯಿಸಿದರು.

ಇದಕ್ಕೂ ಮುನ್ನ ಮೈಕ್‌ತೆಗೆದುಕೊಂಡ ವಸಿಷ್ಟಸಿಂಹ ಹಾಸನದಲ್ಲಿ ಹುಟ್ಟಿದ್ದು, ಇಂಜಿನಿಯರಿಂಗ್ ಮೈಸೂರು, ಮುಂದೆರಂಗಭೂಮಿ, ಸಣ್ಣ ಪಾತ್ರಗಳು, ಖಳ ನಟ. ಈಗ ಮೇಷ್ಟ್ರು ನಾಯಕನಾಗಿ ಬಡ್ತಿ ನೀಡಿದ್ದಾರೆ.ಇಷ್ಟು ದೀರ್ಘ ಪಯಣವನ್ನುಒಮ್ಮೆ ಹಿಂದುರಿಗಿ ನೋಡಿದಾಗ ಸೋಜಿಗ ಅನಿಸುತ್ತದೆ.ಬಿಡುಗಡೆ ಹತ್ತಿರ ಬರುತ್ತಿರುವಂತೆಆತಂಕ, ತವಕಆಗುತ್ತಿದೆ.ಬದುಕಿದರೆದರ್ಶನ್‌ತರಹ ಬದುಕಬೇಕೆಂದು ಕನಸು ಕಾಣುತ್ತಿದ್ದೆ.ಅವರುತೋಟ, ಪ್ರಾಣಿಗಳನ್ನು ಸಾಕುವುದು, ಕಾರು, ಬೈಕ್ ಪ್ರಿಯ, ಹಾಲು ಕರಿತಾರೆ. ನನ್ನಕನಸನ್ನುಒಡೆಯ ನಡೆಸ್ತಾಇದ್ದಾರೆ. ಇದಕ್ಕಿಂತಸಂತೋಷಬೇರೊಂದುಇಲ್ಲ. ಕನಿಷ್ಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು.

ದರ್ಶನ್‌ಅವರನ್ನುಹಿರಿಯ ನಟಎಂದು ಹೇಳುವುದಕ್ಕೆ ಅರ್ಥವಿದೆ. ಇಂದುಚಿತ್ರಮಂದಿರಕ್ಕೆ ಹೋಗುವ ಸಂಖ್ಯೆಕಡಿಮೆಇರುವಕಾಲದಲ್ಲಿಜನರನ್ನುಅಲ್ಲಿಗೆಕರೆತರುವ ಶಕ್ತಿ ಅವರಿಗಿದೆ.  ಮೈಸೂರಿನಲ್ಲಿ ದಿನಗೂಲಿ  ನೌಕರನಾಗಿದ್ದಾಗತೂಗದೀಪಅವರೊಂದಿಗೆ ಸಂಪರ್ಕಇತ್ತು. ಅವರುತೀರಿಕೊಂಡ ಬಳಿಕ ದರ್ಶನ್‌ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಸ್ವಪ್ರತಿಭೆಯಿಂದಲೇಇಲ್ಲಿಯತನಕ ಬರುವುದು ಸುಲಭದ ಮಾತಲ್ಲ. ಮಹಿಳಾ ಸಮುದಾಯಕ್ಕೆ ಸುಮಲತಾದಾರಿಯಾಗಿದ್ದಾರೆ. ಪ್ರತಿಚಿತ್ರ ಮಾಡಿದಾಗಇನ್ನು ಈ ಉದ್ಯಮ ಸಾಕು ಅನಿಸುತ್ತದೆ. ಬಿಡುಗಡೆ ಹಂತಕ್ಕೆ ಬರುವಷ್ಟರಲ್ಲಿ ಮುಂದಿನ ಬಗ್ಗೆ ಯೋಚಿಸುತ್ತೇನೆ. ಇದೇ ನಮ್ಮಗಳ ಕಡೇ ಭೇಟಿ.ಇನ್ನುಏನಿದ್ದರೂಚಿತ್ರಮಂದಿರದಲ್ಲಿಅಂತಾರೆ ನಾಗತ್ತಿಹಳ್ಳೀ ಚಂದ್ರಶೇಖರ.

ನಿರ್ದೇಶಕರೊಂದಿಗೆಜೊತೆಗೆಎರಡನೆ ಸಿನಿಮಾ.ಕಡಿಮೆಅವಧಿಇದ್ದರೂ ನಟಿಸಿದ ತೃಪ್ತಿಇದರಲ್ಲಿ ಸಿಕ್ಕಿದೆ.೨೫ ವರ್ಷಗಳ ನಂತರ ಭಾರತ ಬಿಟ್ಟು ವಿದೇಶದಲ್ಲಿತಂಗಿರುವ ದಂಪತಿಗಳ ಸಂಕಟಗಳನ್ನು ಚೆನ್ನಾಗಿತೋರಿಸಲಾಗಿದೆ.ಪ್ರಕಾಶ್‌ಬೆಳವಾಡಿ ಅವರೊಂದಿಗೆ ಅಭಿನಯಿಸಿದ್ದು ಖುಷಿ ತಂದಿದೆ.ನಾವುಗಳು ಎರಡುಘಂಟೆ ನೋಡಿಚೆನ್ನಾಗಿದೆ.ಚೆನ್ನಾಗಿಲ್ಲವೆಂದು ಸುಲಭವಾಗಿ ಹೇಳುತ್ತೇವೆ. ಆದರೆಅದರ ಹಿಂದಿನ ಶ್ರಮವನ್ನು ನೋಡಿದಾಗಇಂತಹ ಹೇಳಿಕೆಗಳನ್ನು ಕೊಡುವುದಿಲ್ಲ. ನಿರ್ಮಾಪಕರುಆಸಕ್ತಿಯಿಂದಚಿತ್ರ ಮಾಡಿದ್ದಾರೆ.ಇದರಲ್ಲೂದೇಶದ ಬಗ್ಗೆ ಪ್ರೇಮಇದೆಎಂದರು ಸುಮಲತಾ.

ಅವಕಾಶ ನೀಡಿದ್ದಕ್ಕೆಥ್ಯಾಂಕ್ಸ್. ನಿರ್ದೇಶಕ ಹದಿನೈದನೇಚಿತ್ರದಲ್ಲಿ ನಟಿಸಿದ್ದು ಸುಕೃತಎನ್ನಬಹುದುಅಂತಾರೆ  ಮೇಘಿನಿ ಹೆಸರಿನ  ನಾಯಕಿ ಮಾನ್ವಿತಾಹರೀಶ್. ವೈ.ಎನ್.ಶಂಕರೇಗೌಡಅವರೊಂದಿಗೆಕನ್ನಡಿಗ ಅನಿವಾಸಿ ಭಾರತೀಯರುಸೇರಿಕೊಂಡು ನಿರ್ಮಾಣ ಮಾಡಿರುವಚಿತ್ರವುಇದೇ ೨೪ರಂದು ವಿಶ್ವದಾದ್ಯಂತತೆರೆಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,