ತಿಥಿಕಲಾವಿದರ ಹೊಸ ಚಿತ್ರ
‘ತಿಥಿ’ ಚಿತ್ರದ ಮೂಲಕ ಹೆಸರು ಮಾಡಿರುವಗಡ್ಡಪ್ಪ, ಸೆಂಚೂರಿಗೌಡ ಮತ್ತುಅಭಿ ಈಗ ‘ಗಡ್ಡಪ್ಪನ ಸರ್ಕಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಹಳ್ಳಿಯ ಕತೆಯಾಗಿತ್ತು.ಇದರಲ್ಲಿಇಬ್ಬರು ಭೂಗತಲೋಕದ ಡಾನ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಸೆಂಚೂರಿಗೌಡಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾಅಕ್ರಮ ಹಣ ಸಂಪಾದಿಸುತ್ತಿರುತ್ತಾರೆ. ಮತ್ತೋಂದುಕಡೆಗಡ್ಡಪ್ಪಇದನ್ನುತಡೆಗಟ್ಟುತ್ತಾಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತಿರುತ್ತಾರೆ.ಇದರಿಂದಇಬ್ಬರಿಗೂ ವೈಮನಸ್ಯ, ದ್ವೇಷ ಹುಟ್ಟಿಕೊಂಡಿರುತ್ತದೆ.ಕೈಮಾಕ್ಸ್‌ದಲ್ಲಿಕುತೂಹಲದತಿರುವು ಪಡದುಕೊಳ್ಳುತ್ತದೆ.ಅದು ಏನು ಎಂಬುದಕ್ಕೆಚಿತ್ರ ನೋಡಬೇಕಂತೆ.ಮೈಸೂರು ಮತ್ತು ಮಂಡ್ಯಾ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಕತೆ ಬರೆದಿರುವ ಬಿ.ಆರ್.ಕೇಶವ್ ೫೩ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ವಿಶೇಷ.
ಯುವಕಗಡ್ಡಪ್ಪನ ಪಾತ್ರದಲ್ಲಿಅಭಿ. ಇವರಿಗೆಜೋಡಿಯಾಗಿ ಸುಕನ್ಯಎರಡು ಶೇಡ್‌ಗಳಿಗೆ ಬಣ್ಣ ಹಚ್ಚಿದ್ದಾರೆ.ಉಳದಿಂತೆ ವಿಕಾಸ್ ಸೇರಿದಂತೆ ಮೈಸೂರುಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಪಿ.ಶೇಷಗಿರಿ ಸಂಭಾಷಣೆಗೆ ಪದಗಳನ್ನು ಪೋಣಿಸುವಜೊತೆಗೆಎರಡು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ನಯನ್.ವಿ.ಕೆ. ಛಾಯಾಗ್ರಹಣ ಪ್ರಮೋದ್, ಸಂಕಲನ ಸಿದ್ದರಾಜು.ಎಸ್.ಕೆ. ಅವರದಾಗಿದೆ.ತುಳಸಿರಾಮ್ ನಿರ್ಮಾಪಕರಾಗಿ ಮೂರನೇಅನುಭವ. ಪ್ರಚಾರದ ಮೊದಲ ಹಂತವಾಗಿ ತುಣುಕುಗಳು ಮತ್ತು ಹಾಡನ್ನುತೋರಿಸಲಾಯಿತು.ಇದೇ ಸಂದರ್ಭದಲ್ಲಿಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘವು ೨೦೧೮ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಸನ್ಮಾನಕಾರ್ಯಕ್ರಮವನ್ನುಏರ್ಪಾಟು ಮಾಡಿದ್ದರು.ಅಂದಹಾಗೆ ಸಿನಿಮಾವು ಫೆಬ್ರವರಿ ಏಳರಂದು ರಾಜ್ಯಾದ್ಯಂತತೆರೆಕಾಣುತ್ತಿದೆ.