Khaki.Film Press Meet.

Monday, January 13, 2020

729

ಖಾಕಿ ಇದು ಪೋಲೀಸ್ಕಥೆಯಲ್ಲ

‘ಖಾಕಿ’ ಚಿತ್ರದ ಹೆಸರು ಕೇಳಿದೊಡನೆ ಎಂದಿನಂತೆಇದೊಂದು ಪೋಲೀಸ್‌ಕತೆಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತಾದೆ. ಸಮಾಜದಲ್ಲಿಪ್ರತಿಯೊಬ್ಬರಿಗೂರಕ್ಷಣೆ ಮಾಡಲುಆರಕ್ಷಕರುಇರುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಅದರಜೊತೆಗೆಇತರರಿಗೂ ಸಹಾಯ ಮಾqಬೇಕು.ನಮಗೆ ಒದಗಿಬರುವ ಸಮಸ್ಯೆಗೆ ಪೋಲೀಸ್, ಸರ್ಕಾರವನ್ನುಕಾಯದೆಅದನ್ನು ನಾವೇ ಬಗೆ ಹರಿಸಿಕೊಳ್ಳಬಹುದು.ಅದಕ್ಕಾಗಿ ದಿ ಪವರ್‌ಆಫ್‌ಕಾಮನ್ ಮ್ಯಾನ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮಗಳ ಸುತ್ತಲೂ ನಡೆಯುವ ಸಮಕಾಲೀನ ವಿಷಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.ನಮ್ಮ ಮಧ್ಯೆಎಲ್ಲರಿಗೂ ತಿಳಿಯದಯೇ ಸಮಾಜಘಾತುಕ ಶಕ್ತಿಗಳು ಹೇಗೆ ಉಪಯೋಗಿಸಿ ಕೊಳ್ಳುತ್ತಾರೆ.

ಇದುರಾಜ್ಯದಲ್ಲಿಅಲ್ಲದೆಇಡೀ ಭಾರತದಲ್ಲಿ ನಡೆಯುತ್ತಿದೆ.ಇದಕ್ಕೆ ನಾವು ಏನು ಮಾಡಬಹುದೆಂಬುದನ್ನು ಪಾತ್ರಗಳ ಮೂಲಕ ಹೇಳಲಾಗಿದೆ.ಇದರೊಂದಿಗೆರಾಜಕೀಯ, ಭ್ರಷ್ಟಚಾರ, ಇಂದಿನ ವ್ಯವಸ್ಥೆಗಳು ಮತ್ತುಕಸ ವಿಲೇವಾರಿ ಸನ್ನಿವೇಶಗಳು ಬರಲಿದೆ.

ಕೇಬಲ್ ಆಪರೇಟರ್ ಪಾತ್ರದಲ್ಲಿ ನಾಯಕನಾಗಿಚಿರಂಜೀವಿಸರ್ಜಾ.ಶಕ್ತಿಶಾಲಿ ಹುಡುಗಿ, ನಾಯಕನಿಗೆ ಸಹಾಯ ಮಾಡುವತಾನ್ಯಾಹೋಪ್ ನಾಯಕಿ.ಡಿಸಿಪಿಯಾಗಿ ಛಾಯಾಸಿಂಗ್, ಸಾಮಾನ್ಯನಾಗಿದ್ದುಕುತಂತ್ರದಿಂದ ಪುಡಾರಿಯಾಗುವ ಶಿವಮಣಿ, ಯುವಕನಾಗಿ ಶಶಿ, ಹಣದ ಆಸೆಗೆ ದುರಳರಿಗೆ ಸಹಾಯ ಮಾಡುವರಘುರಾಮಪ್ಪ ಮುಂತಾದವರು ನಟಿಸಿದ್ದಾರೆ.ರಚನೆ,ನಿರ್ದೇಶನ ಮಾಡಿರುವ ನವೀನ್‌ರೆಡ್ಡಿಅವರಿಗೆ ಹೊಸ ಅನುಭವ. ನಾಲ್ಕು ಹಾಡುಗಳಿಗೆ ರುತ್ವಿಕ್‌ಮುರಳಿಧರ್ ಸಂಗೀತ, ಹೆಸರಿಗೆತಕ್ಕಂತೆ ಮಾಸ್ ಡೈಲಾಗ್‌ಗಳಿಗೆ ಮಾಸ್ತಿ ಲೇಖನಿ ಕೆಲಸ ಮಾಡಿದೆ. ಛಾಯಾಗ್ರಹಣ ಬಾಲ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ವಿನೋಧ್-ಮಾಸ್‌ಮಾದಅವರದಾಗಿದೆ. ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ.ತರುಣ್‌ಟಾಕೀಸ್ ಬ್ಯಾನರ್‌ಅಡಿಯಲ್ಲಿ ನಾಲ್ಕನೇ ಚಿತ್ರಕ್ಕೆ ಹಣ ಹೂಡಿರುವುದು ತರುಣ್‌ಶಿವಪ್ಪ-ಮಾನಸತರಣ್. ಸಿನಿಮಾ ವೀಕ್ಷಿಸಿರುವ ಹಿರಿಯ ನಿರ್ಮಾಪಕ ಕೆ.ಮಂಜು ಮುಂಗಡ ಹಣ ನೀಡಿ ಸುಮಾರು ೨೨೫ ಕೇಂದ್ರಗಳಲ್ಲಿ ಇದೇ ೨೪ರಂದು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,